ಕರ್ನಾಟಕ ಐಎಫ್‌ಎಸ್ ದಂಪತಿ ಪುತ್ರಿಯ ಅಮೋಘ ಸಾಧನೆ; ಅಂಡರ್-14 ಏಷ್ಯನ್ ಟೆನಿಸ್ ಪ್ರಶಸ್ತಿ ಗೆದ್ದ ಪದ್ಮ ಪ್ರಿಯ
- Asian Junior (U-14) Tennis tournament: ಕರ್ನಾಟಕದ ಐಎಫ್‌ಎಸ್ ದಂಪತಿಗಳ ಪುತ್ರಿ ಪದ್ಮ ಪ್ರಿಯ ಅವರು ಬೆಂಗಳೂರಿನಲ್ಲಿ ನಡೆದ ಅಂಡರ್ 14 ಏಷ್ಯನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
- Asian Junior (U-14) Tennis tournament: ಕರ್ನಾಟಕದ ಐಎಫ್‌ಎಸ್ ದಂಪತಿಗಳ ಪುತ್ರಿ ಪದ್ಮ ಪ್ರಿಯ ಅವರು ಬೆಂಗಳೂರಿನಲ್ಲಿ ನಡೆದ ಅಂಡರ್ 14 ಏಷ್ಯನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
(1 / 8)
ಬೆಂಗಳೂರಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆದ ಅಂಡರ್-14 ಏಷ್ಯನ್ ಜೂನಿಯರ್ ಟೂರ್ನಮೆಂಟ್ ಫೈನಲ್ ಪಂದ್ಯದಲ್ಲಿ ಗೆದ್ದ ಐಎಫ್‌ಎಸ್ ಅಧಿಕಾರಿ ರಮೇಶ್ ಕುಮಾರ್ ಅವರ ಪುತ್ರಿ ಪದ್ಮ ಪ್ರಿಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
(2 / 8)
ಕೆಎಸ್ಎಲ್ಟಿಎ ಟೆನಿಸ್ ಸ್ಟೇಡಿಯಂ ಕೋರ್ಟ್ 1ರಲ್ಲಿ ಜರುಗಿದ ಫೈನಲ್ ಪಂದ್ಯದಲ್ಲಿ ದಿಯಾ ರವಿಕುಮಾರ್ ಜಾನಕಿ ವಿರುದ್ಧ 2-6, 3-6 ನೇರ ಸೆಟ್ಗಳ ಅಂತರದಿಂದ ಗೆದ್ದ ಪದ್ಮ ಪ್ರಿಯ ತನ್ನ ಕನಸಿನ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
(3 / 8)
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪದ್ಮ ಪ್ರಿಯ ಅವರ ಆಕ್ರಮಣಕಾರಿ ಆಟದ ಎದುರು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಜಾನಕಿ ದಿವ್ಯ ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ಇದು ಪದ್ಮ ಪ್ರಿಯ ಮೇಲುಗೈ ಸಾಧಿಸಲು ನೆರವಾಯಿತು.
(4 / 8)
ಫೈನಲ್ ಪಂದ್ಯಕ್ಕೂ ಮುನ್ನ 2ನೇ ಶ್ರೇಯಾಂಕದಲ್ಲಿದ್ದ ಪದ್ಮ ಪ್ರಿಯ ಅವರು ಇದೀಗ ಪ್ರಶಸ್ತಿಗೆ ಮುತ್ತಿಕ್ಕಿದ ಬೆನ್ನಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಪ್ರಶಸ್ತಿಯ ಜೊತೆಗೆ ನಂಬರ್ 1 ಸ್ಥಾನವೂ ಬೋನಸ್ ಆಗಿ ಸಿಕ್ಕಿದೆ.
(5 / 8)
ಗುರುವಾರ (ಡಿಸೆಂಬರ್ 12) ನಡೆದಿದ್ದ ಸೆಮಿಫೈನಲ್ ಪಂದ್ಯವು ಮಳೆಯಿಂದ ರದ್ದಾಗಿತ್ತು. ರದ್ದಾದ ಅವಧಿಯಲ್ಲಿ ಕೃಶಿಕಾ ಗೌತಮ್ ವಿರುದ್ಧ 4-0 ಮುನ್ನಡೆ ಸಾಧಿಸಿದ್ದ ಪದ್ಮ ಪ್ರಿಯ ಫೈನಲ್ಗೆ ಅರ್ಹತೆ ಪಡೆದುಕೊಂಡರು.
(6 / 8)
ಮತ್ತೊಂದು ಸೆಮೀಸ್ನಲ್ಲಿ ನೀಶಾ ಎಂಜಾ ವಿರುದ್ಧ ದಿಯಾ ಜಾನಕಿ 5-1 ಅಂತರದಲ್ಲಿ ಮುನ್ನಡೆ ಸಾಧಿಸಿ ಅಂತಿಮ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಆದರೆ ಫೈನಲ್ನಲ್ಲಿ ದಿಯಾ ಅವರ ಪ್ರಶಸ್ತಿ ಕನಸು ಭಗ್ನಗೊಂಡಿತು.
(7 / 8)
ಪ್ರಸ್ತುತ ಚಾಂಪಿಯನ್ ಪದ್ಮ ಪ್ರಿಯ ಅವರ ತಂದೆ-ತಾಯಿ ಐಎಫ್‌ಎಸ್ ಅಧಿಕಾರಿಗಳು. ತಂದೆ ಡಾ. ರಮೇಶ್ ಕುಮಾರ್. ಅವರು ಮೈಸೂರಿನ ಟೈಗರ್ ಪ್ರಾಜೆಕ್ಟ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಡಾ. ಮಾಲತಿ ಪ್ರಿಯ. ಇವರು ಮೈಸೂರು ಅರಣ್ಯ ವೃತ್ತದ ಸಂರಕ್ಷಣಾಧಿಕಾರಿಯಾಗಿದ್ದಾರೆ.
ಇತರ ಗ್ಯಾಲರಿಗಳು