Karnataka Kumbh Mela 2025: ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ, ಶಿವಸ್ತುತಿ ನಿನಾದ: ಹೀಗಿದ್ದವು ಅಪರೂಪದ ಕ್ಷಣಗಳು
- ಮೈಸೂರು ಜಿಲ್ಲೆಯ ತಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಭಾಗವಾಗಿ ಕಾವೇರಿ ಆರತಿಯ ವೈಭವ ಮಂಗಳವಾರ ರಾತ್ರಿ ಗಮನ ಸೆಳೆಯಿತು. ಈ ವೇಳೆ ನಡೆದ ಅಲ್ಲಿನ ಕ್ಷಣಗಳು ಹೀಗಿದ್ದವು.
- ಮೈಸೂರು ಜಿಲ್ಲೆಯ ತಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಭಾಗವಾಗಿ ಕಾವೇರಿ ಆರತಿಯ ವೈಭವ ಮಂಗಳವಾರ ರಾತ್ರಿ ಗಮನ ಸೆಳೆಯಿತು. ಈ ವೇಳೆ ನಡೆದ ಅಲ್ಲಿನ ಕ್ಷಣಗಳು ಹೀಗಿದ್ದವು.
(1 / 10)
ತಿ,ನರಸೀಪುರ ಕುಂಭಮೇಳದ ಭಾಗವಾಗಿ ಕಾವೇರಿ ಆರತಿ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು, ಗಂಟೆಗಳ ನಾದವನ್ನು ಹೊಮ್ಮಿಸಿತು. ಶಿವಸ್ತುತಿ ನಿನಾದವೂ ನದಿಯ ಹಿನ್ನೆಲೆಯಲ್ಲಿ ಕೇಳಿ ಬಂದಿತು ಚಾಮರಗಳನ್ನು ಬೀಸಿದರು.
(2 / 10)
ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಆಯೋಜನೆಗೊಂಡಿರುವ ಕುಂಭಮೇಳದಲ್ಲಿ ಮಂಗಳವಾರ ರಾತ್ರಿ ಗಮನ ಸೆಳೆದ ಕಾವೇರಿ ಆರತಿ ವೈಭವ.
(prajavani)(3 / 10)
ತಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಅಂಗವಾಗಿ ಮಂಗಳವಾರ ರಾತ್ರಿ ಕಾವೇರಿ ಆರತಿ ಭಕ್ತರನ್ನು ಸೆಳೆಯಿತು. ಒಂದುಗಂಟೆಗೂ ಹೆಚ್ಚು ಕಾಲ ಭಕ್ತಲೋಕವನ್ನೇ ಸೃಷ್ಟಿಸಿತು.
(4 / 10)
ಕುಂಭಮೇಳದ ಕಾವೇರಿ ಆರತಿಯಲ್ಲಿ ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಭತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು. ನೋಡುತ್ತಿದ್ದ ಭಕ್ತರು, ಕೈ ಮುಗಿದರು. ‘ಕಾಲಭೈರವ’, ‘ರುದ್ರ’ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು.
(6 / 10)
ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಹರಿದು ಬಂದಿದ್ದ ಭಕ್ತ ಸಾಗರವು ‘ಕಾವೇರಿ ಆರತಿ’ಯ ಬೆಳಗನ್ನು ಕಣ್ತುಂಬಿಕೊಂಡಿತು
(7 / 10)
ತಿ.ನರಸೀಪುರ ಕುಂಭಮೇಳಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮೈಸೂರು ಡಿಸಿ ಲಕ್ಷ್ಮಿಕಾಂತ ರೆಡ್ಡಿ ಬರ ಮಾಡಿಕೊಂಡರು.
(8 / 10)
ಮಹಾಕುಂಭಮೇಳದ ಪುಣ್ಯಸ್ನಾನ ಮಾಡಿ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ತಿ.ನರಸೀಪುರ ಕುಂಭಮೇಳಕ್ಕೆ ಆಗಮಿಸಿ ದೋಣಿಯಲ್ಲಿ ಹೊರಟರು.
(9 / 10)
ಕಾವೇರಿ ನದಿ, ಕಪಿಲಾ ನದಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಪೂಜೆಗಳನ್ನು ಸಲ್ಲಿಸಿದರು.
ಇತರ ಗ್ಯಾಲರಿಗಳು