ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ದರ್ಬಾರ್, ಖಾತೆಯೇ ತೆರೆಯಲಿಲ್ಲ ಕಾಂಗ್ರೆಸ್; ಮತ್ತೆ ಕಮಲ ಅರಳಿಸಿದವರು ಯಾರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ದರ್ಬಾರ್, ಖಾತೆಯೇ ತೆರೆಯಲಿಲ್ಲ ಕಾಂಗ್ರೆಸ್; ಮತ್ತೆ ಕಮಲ ಅರಳಿಸಿದವರು ಯಾರು?

ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ದರ್ಬಾರ್, ಖಾತೆಯೇ ತೆರೆಯಲಿಲ್ಲ ಕಾಂಗ್ರೆಸ್; ಮತ್ತೆ ಕಮಲ ಅರಳಿಸಿದವರು ಯಾರು?

Karnataka Election Results: ಕುತೂಹಲ ಮೂಡಿಸಿದ್ದ ಮಧ್ಯ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಸಾಧಿಸಿದೆ. ಕಾಂಗ್ರೆಸ್ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ವಿಶ್ವನಾಥ್ ಹೆಗಡೆ ಕಾಗೇರಿ ಅವರು ಈಗ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು ಮಣಿಸಿದ್ದಾರೆ.
icon

(1 / 4)

ನಿರೀಕ್ಷೆಯಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಗೆಲುವು ಸಾಧಿಸಿದ್ದಾರೆ. ಆದರೆ ಪದ್ಮರಾಜ್ ಗೆಲುವು ದಾಖಲಿಸಲು ವಿಫಲರಾಗಿದ್ದಾರೆ.
icon

(2 / 4)

ಶಿವಮೊಗ್ಗ ಲೋಕಸಭಾ ಕ್ಷೇತ್ರವು ದೇಶದ ಗಮನ ಸೆಳೆದಿತ್ತು. ಏಕೆಂದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ, ಮಾಜಿ ಸಿಎಂ ಬಂಗಾರಪ್ಪ ಮಗಳು ಹಾಗೂ ರಾಜ್​ಕುಮಾರ್ ಸೊಸೆ ಗೀತಾ ಶಿವರಾಜ್​ ಕುಮಾರ್ ಮತ್ತು ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆಎಸ್ ಈಶ್ವರಪ್ಪ ಅವರ ನಡುವೆ ನೇರಾನೇರ ಪೈಪೋಟಿ ನಡೆದಿತ್ತು. ಆದರೆ, ರಾಘವೇಂದ್ರ ಮತ್ತೊಮ್ಮೆ ಜಯಿಸಿ ಸಂಸತ್ತು ಪ್ರವೇಶಿಸಿದ್ದಾರೆ.
icon

(3 / 4)

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೂ ಬಿಜೆಪಿ ಪಾಲಾಗಿದೆ. ಕಳೆದ ಬಾರಿ ಶೋಭಾ ಕರಂದ್ಲಾಜೆ ಅವರು ಇಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಈ ಸಲ ಕೋಟ ಶ್ರೀನಿವಾಸ ಪೂಜಾರಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್​​ನ ಜಯಪ್ರಕಾಶ್ ಹೆಗಡೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಟ್ಟಿದ್ದಾರೆ
icon

(4 / 4)

ಇತರ ಗ್ಯಾಲರಿಗಳು