2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸೋಲು ಅನುಭವಿಸಿದ 8 ಪ್ರಮುಖರು: ಪ್ರಜ್ವಲ್ ರೇವಣ್ಣರಿಂದ ಭಗವಂತ ಖೂಬಾರವರೆಗೆ
- ಕರ್ನಾಟಕದ ಲೋಕಸಭೆ ಚುನಾವಣೆ 2024 ರಲ್ಲಿ ಹಲವರು ಗೆದ್ದರೆ, ಪ್ರಮುಖರು ಕೂಡ ಸೋಲು ಅನುಭವಿಸಿದರು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಮುಖರು ಸೋಲು ಕಂಡರು. ಅವರ ಪಟ್ಟಿ ಇಲ್ಲಿದೆ.
- ಕರ್ನಾಟಕದ ಲೋಕಸಭೆ ಚುನಾವಣೆ 2024 ರಲ್ಲಿ ಹಲವರು ಗೆದ್ದರೆ, ಪ್ರಮುಖರು ಕೂಡ ಸೋಲು ಅನುಭವಿಸಿದರು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಮುಖರು ಸೋಲು ಕಂಡರು. ಅವರ ಪಟ್ಟಿ ಇಲ್ಲಿದೆ.
(2 / 9)
ನಟ ಶಿವರಾಜಕುಮಾರ್ ಪತ್ನಿ, ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ದ ಸೋತರು. ಹಿಂದೊಮ್ಮೆ ಜೆಡಿಎಸ್‌ನಿಂದಲೂ ಅವರು ಸೋತಿದ್ದರು.
(3 / 9)
ಹಾಸನದಲ್ಲಿ ಜೆಡಿಎಸ್ ನಿಂದ ಸಂಸದರಾಗಿದ್ದ ಯುವ ನಾಯಕ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಚುನಾವಣೆಗೂ ಮುನ್ನ ಸಿಡಿ ಪ್ರಕರಣದಲ್ಲಿ ಸಿಲುಕಿ ಸೋಲು ಕಂಡರು. ಇಲ್ಲಿ ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಗೆದ್ದರು.
(4 / 9)
ಕೇಂದ್ರದಲ್ಲಿ ಸಚಿವರಾಗಿದ್ದ, ಎರಡು ಬಾರಿ ಬೀದರ್‌ನಿಂದ ಬಿಜೆಪಿ ಸಂಸದರಾಗಿದ್ದ ಭಗವಂತ ಖೂಬಾ ಇಲ್ಲಿ ಯುವಕ ಸಾಗರ್ ಖಂಡ್ರೆ ವಿರುದ್ದ ಸೋತರು. ಹಿಂದೆ ಸಾಗರ್ ತಂದೆ ಈಶ್ವರ ಖಂಡ್ರೆ ಅವರನ್ನು ಖೂಬಾ ಸೋಲಿಸಿದ್ದರು.
(5 / 9)
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿದ್ದ, ಡಿಸಿಎಂ ಡಿಕೆಶಿ ಸಹೋದರ ಡಿಕೆ ಸುರೇಶ್ ಈ ಬಾರಿ ಖ್ಯಾತ ವೈದ್ಯ ಡಾ.ಸಿ.ಎನ್.ಮಂಜುನಾಥ್ ವಿರುದ್ದ ಸೋಲು ಅನುಭವಿಸಿದರು.
(6 / 9)
ಬಳ್ಳಾರಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಇ.ತುಕಾರಂ ವಿರುದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಸೋಲು ಕಂಡರು. ಹಿಂದೆ ಇಲ್ಲಿಂದಲೇ ಒಮ್ಮೆ ಅವರು ಸಂಸದರಾಗಿದ್ದರು.
(7 / 9)
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ನಾಯಕ,,ಮಾಜಿ ಸ್ಪೀಕರ್ ವೆಂಕಟಪ್ಪ ಅವರ ಪುತ್ರ ಪ್ರೊ. ರಾಜೀವ್‌ಗೌಡ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಸೋತರು.
(8 / 9)
ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಜಯಪ್ರಕಾಶ್ ಹೆಗ್ಡೆ ಹಿರಿಯ ಬಿಜೆಪಿ ನಾಯಕ ಕೋಟಾ ಶ್ರೀನಿವಾಸಪೂಜಾರಿ ವಿರುದ್ದ ಸೋಲನುಭವಿಸಿದರು.
ಇತರ ಗ್ಯಾಲರಿಗಳು