Milk Rate Hike: 22 ತಿಂಗಳ ಅಂತರದಲ್ಲೇ ಮೂರನೇ ಬಾರಿಗೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆ ಶಾಕ್
- Milk Rate Hike: ಕರ್ನಾಟಕದಲ್ಲಿನಂದಿನಿ ಹಾಲಿನ ದರ ಸತತವಾಗಿ ಏರಿಕೆಯಾಗುತ್ತಲೇ ಇದೆ. ಎರಡು ವರ್ಷದೊಳಗೆ ಮೂರನೇ ಬಾರಿಗೆ ದರ ಹೆಚ್ಚಳ ಮಾಡಲಾಗಿದೆ.
- Milk Rate Hike: ಕರ್ನಾಟಕದಲ್ಲಿನಂದಿನಿ ಹಾಲಿನ ದರ ಸತತವಾಗಿ ಏರಿಕೆಯಾಗುತ್ತಲೇ ಇದೆ. ಎರಡು ವರ್ಷದೊಳಗೆ ಮೂರನೇ ಬಾರಿಗೆ ದರ ಹೆಚ್ಚಳ ಮಾಡಲಾಗಿದೆ.
(1 / 9)
ಇಡೀ ಭಾರತದಲ್ಲೇ ಅಮುಲ್ ನಂತರ ಗಮನ ಸೆಳೆದಿರುವ ಕರ್ನಾಟಕ ನಂದಿನಿ ಬ್ರಾಂಡ್ ಹಾಲು ಹೆಚ್ಚು ಬಳಕೆಯಲ್ಲಿದೆ. ಹಾಲಿನ ದರವನ್ನು ನಿರಂತರವಾಗಿ ಏರಿಕೆ ಮಾಡಲಾಗುತ್ತಲೇ ಇದೆ.
(2 / 9)
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೇವಲ 22 ತಿಂಗಳಿನಲ್ಲಿ ಹಾಲಿನ ದರವನ್ನು ಮೂರು ಬಾರಿ ಒಟ್ಟು 9 ರೂಪಾಯಿಯನ್ನು ಲೀಟರ್‌ಗೆ ಹೆಚ್ಚಿಸಲಾಗಿದೆ.
(3 / 9)
2023ರ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ 2024 ಜೂನ್ ನಲ್ಲಿ 2 ರೂಪಾಯಿ ಏರಿಕೆ ಆಯ್ತು. ಈಗ ಮತ್ತೊಮ್ಮೆ ಏಕಾಏಕಿ 4 ರೂಪಾಯಿ ಹೆಚ್ಚಾಗಿದೆ.
(4 / 9)
ಒಂದೂವರೆ ವರ್ಷದ ಹಿಂದೆಯೇ ನಂದಿನಿ ಹಾಲು ಹಾಗೂ ಉತ್ಪನ್ನಗಳ ಬೆಲೆ ಏರಿಕೆ ಮಾಡಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.
(6 / 9)
ಆದರೂ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಹಾಲಿನ ದರ ಕಡಿಮೆ ಇದೆ ಎಂದು ಸರ್ಕಾರ ಸಮರ್ಥನೆ ನೀಡಿತ್ತು.
(7 / 9)
ಇದಾಗಿ ಸುಮಾರು ಎರಡು ತಿಂಗಳಿನಿಂದ ಮತ್ತೆ ಬೆಲೆ ಏರಿಸಬೇಕು. ಹಾಲು ಉತ್ಪಾದಿಸುವವರಿಗೆ ಹೆಚ್ಚಿನ ಮೊತ್ತ ನೀಡಬೇಕು ಎನ್ನುವ ಬೇಡಿಕೆ ಇಡಲಾಗಿತ್ತು.
(8 / 9)
ಈ ಬಾರಿ ಲೀಟರ್‌ಗೆ ಸುಮಾರು ಐದು ರೂ. ಹೆಚ್ಚಿಸಬೇಕು ಎನ್ನುವ ಬೇಡಿಕೆಯೂ ಇತ್ತು. ಆದರೆ ನಾಲ್ಕು ರೂ. ಹೆಚ್ಚಳ ಮಾಡಲಾಗಿದೆ.
ಇತರ ಗ್ಯಾಲರಿಗಳು