Indira Canteen: ಇಂದಿರಾ ಕ್ಯಾಂಟಿನ್‌ನಲ್ಲಿ ಏನೆಲ್ಲಾ ಸಿಗಲಿದೆ, ದರ ಎಷ್ಟು, ಹೊಸ ಮೆನು, ಸಮಯದ ವೇಳಾಪಟ್ಟಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
- ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ರಾಜ್ಯದಾದ್ಯಂತ ಕಾರ್ಯಾರಂಭ ಮಾಡಲಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿದ್ದಾರೆ. ಇಲ್ಲಿ ಏನೆಲ್ಲಾ ತಿನಿಸುಗಳು ಸಿಗುತ್ತವೆ, ಬೆಲೆ ಎಷ್ಟು, ಸಮಯದ ವಿವರ ಇಲ್ಲಿದೆ.
- ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ರಾಜ್ಯದಾದ್ಯಂತ ಕಾರ್ಯಾರಂಭ ಮಾಡಲಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿದ್ದಾರೆ. ಇಲ್ಲಿ ಏನೆಲ್ಲಾ ತಿನಿಸುಗಳು ಸಿಗುತ್ತವೆ, ಬೆಲೆ ಎಷ್ಟು, ಸಮಯದ ವಿವರ ಇಲ್ಲಿದೆ.
(1 / 9)
ಕಾಂಗ್ರೆಸ್ ಸರ್ಕಾರ ಈ ಹಿಂದೆ ಆಡಳಿತದಲ್ಲಿದ್ದಾಗ ಆರಂಭಿಸಿದ್ದ ಇಂದಿರಾ ಕ್ಯಾಂಟಿನ್ ಇನ್ನು ಮುಂದೆ ರಾಜ್ಯದಾದ್ಯಂತ ಕಾರ್ಯಾರಂಭ ಮಾಡಲಿದೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಇಂದಿರಾ ಕ್ಯಾಂಟಿನ್‌ಗಳಿವೆ. ʼರಾಜ್ಯದಲ್ಲಿ ಒಟ್ಟು 600 ಇಂದಿರಾ ಕ್ಯಾಂಟಿನ್‌ಗಳು ನಿರ್ಮಾಣವಾಗಲಿವೆʼ ಎಂದು ಇತ್ತೀಗಷ್ಟೇ ಸರ್ಕಾರ ಹೇಳಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ.
(2 / 9)
ಇಂದಿರಾ ಕ್ಯಾಂಟೀನ್‌ನಲ್ಲಿ ಸದ್ಯ ಹಳೆ ಮೆನುನಲ್ಲಿರುವ ಉಪಾಹಾರ ತಿನಿಸುಗಳು ಹಾಗೂ ಊಟ ಸಿಗುತ್ತಿದೆ. ಇಲ್ಲಿ ಪ್ರತಿದಿನ 5 ರೂಪಾಯಿಗೆ ಉಪಾಹಾರ ಹಾಗೂ 10 ರೂಪಾಯಿಗೆ ಮಧ್ಯಾಹ್ನ ಹಾಗೂ ರಾತ್ರಿಯೂಟ ಲಭ್ಯವಿರುತ್ತದೆ. (Twitter )
(3 / 9)
ಹಿಂದಿನ ಮೆನು ಪ್ರಕಾರ ಸೋಮವಾರದಿಂದ ಭಾನುವಾರದವರೆಗೆ ಪ್ರತಿದಿನ ಇಡ್ಲಿ ಚಟ್ನಿ, ಸಾಂಬಾರ್ ಜೊತೆಗೆ ಪುಳಿಯೋಗರೆ, ಖಾರಬಾತ್, ಪೊಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್, ಖಾರಬಾತ್ ಹಾಗೂ ಕೇಸರಿಬಾತ್ ಸಿಗುತ್ತಿತ್ತು. (Twitter )
(4 / 9)
ಮಧ್ಯಾಹ್ನದ ಊಟಕ್ಕೆ ಅನ್ನ-ಸಾಂಬಾರ್ ಹಾಗೂ ಮೊಸರನ್ನ ಇರುತ್ತದೆ. ರಾತ್ರಿಯೂಟಕ್ಕೆ ಟೊಮೆಟೊ ಬಾತ್-ಮೊಸರನ್ನ, ಚಿತ್ರಾನ್ನ-ಮೊಸರನ್ನ, ವಾಂಗಿಭಾತ್ ಮೊಸರನ್ನ ಹೀಗೆ ರೈಸ್‌ಬಾತ್‌ಗಳು ಸಿಗಲಿದೆ. (HT File Photo)
(5 / 9)
ಪ್ರತಿ ಇಂದಿರಾ ಕ್ಯಾಂಟೀನ್‌ಗಳಲ್ಲೂ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ. ಇಲ್ಲಿ ಫಿಲ್ಟರ್‌ಗಳನ್ನು ಅಳವಡಿಸಲಾಗಿದ್ದು, ಗ್ರಾಹಕರು ಉಚಿತವಾಗಿ ಶುದ್ಧ ಕುಡಿಯುವ ನೀರು ಕುಡಿಯಬಹುದು.
(6 / 9)
ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ಬರಲಿದೆ. ಅದರ ಪ್ರಕಾರ ಬೆಳಗಿನ ಉಪಾಹಾರಕ್ಕೆ ಬ್ರೆಡ್ ಜಾಮ್, ಮಂಗಳೂರು ಬನ್ಸ್, ಬಿಳಿಬೇಳೆ ಬಾತ್ ಕೂಡ ಸೇರಲಿದೆ. (Twitter )
(7 / 9)
ಇಂದಿರಾ ಕ್ಯಾಂಟಿನ್ ಹೊಸ ಮೆನುವಿನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಖೀರು, ರಾಗಿ ಮುದ್ದೆ-ಸೊಪ್ಪಿನ ಸಾರು, ಚಪಾತಿ-ಸಾಗು ಕೂಡ ನೀಡಲಿದ್ದಾರೆ. (Twitter )
(8 / 9)
ಇಂದಿರಾ ಕ್ಯಾಂಟೀನ್ ವೇಳಾಪಟ್ಟಿ: ಬೆಳಗಿನ ಉಪಾಹಾರಕ್ಕೆ 7.30 ರಿಂದ 10.30ರವರೆಗೆ ತೆರೆದಿರುತ್ತದೆ. ಇಂದಿರಾ ಕ್ಯಾಂಟೀನ್‌ನಲ್ಲಿ 12.30 ರಿಂದ 2.30ರವರೆಗೆ ಮಧ್ಯಾಹ್ನದ ಊಟ ಲಭ್ಯವಿರಲಿದೆ. ರಾತ್ರಿ 7.30 ರಿಂದ 8.30ರವರೆಗೆ ಊಟ ಸಿಗುತ್ತದೆ. (Twitter )
ಇತರ ಗ್ಯಾಲರಿಗಳು