ಕನ್ನಡ ಸುದ್ದಿ  /  Photo Gallery  /  Karnataka News Here Are 10 Controversial Statements Made By Bjp Ticket Aspirant Anantha Kumar Hegde So Far Rst

ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಂತ ಕುಮಾರ್ ಹೆಗಡೆ ಈವರೆಗೆ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಗಳಿವು

  • ಭಾರತದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿದ್ದಾರೆ. ಈ ನಡುವೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಇವರು ಈವರೆಗೆ ಕೊಟ್ಟಿರುವ ಕೆಲವು ವಿವಾದಾತ್ಮಕ ಹೇಳಿಕೆಗಳು ಹೀಗಿವೆ. 

ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಉತ್ತರ ಕನ್ನಡ ಮೂಲದ ಅನಂತ್‌ ಕುಮಾರ್‌ ಹೆಗಡೆ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಾರೆ. ಬಿಜೆಪಿಯ ಫೈಯರ್‌ ಬ್ರಾಂಡ್‌ ಎಂದೇ ಖ್ಯಾತಿಯಾಗಿರುವ ಇವರು ಇದೀಗ ಹೇಳಿರುವ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈವರೆಗೆ ಅನಂತ್‌ ಕುಮಾರ್‌ ಹೆಗಡೆ ಹೇಳಿರುವ ವಿವಾದಾತ್ಮಕ ಹೇಳಿಕೆಗಳು ಹೀಗಿವೆ. 
icon

(1 / 8)

ʼಹಿಂದೂಗಳ ರಕ್ಷಣೆಗಾಗಿ ಸಂವಿಧಾನವನ್ನು ಬದಲಿಸುವ ಅಗತ್ಯವಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಪಡೆದರೆ, ಹಿಂದೂಗಳನ್ನು ಉಳಿಸುವ ಸಲುವಾಗಿ ಸಂವಿಧಾನವನ್ನು ಪುನಃ ಬರೆಯಲಾಗುವುದುʼ ಎನ್ನುವ ಮೂಲಕ ಭಾರಿ ಸುದ್ದಿ ಮಾಡಿದ್ದಾರೆ ಅನಂತ್‌ ಕುಮಾರ್‌ ಹೆಗಡೆ
icon

(2 / 8)

ಕೆಲ ದಿನಗಳ ಹಿಂದೆ ʼಸಿದ್ದುʼ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಎಕವಚನದಲ್ಲಿ ಸಂಭೋದಿಸಿದ್ದರು ಅನಂತ್‌ ಕುಮಾರ್‌ ಹೆಗಡೆ. ಅಲ್ಲದೇ ಬಿಜೆಪಿಗೆ ಶತ್ರು ಸಿದ್ದರಾಮಯ್ಯನವರೇ ಹೊರತು ಕಾಂಗ್ರೆಸ್‌ ಎಂದು ವಿವಾದಕ್ಕೆ ಕಾರಣರಾಗಿದ್ದರು. 
icon

(3 / 8)

ʼಬಿಜೆಪಿ ಹಾಗೂ ಸಂಘ ಪರಿವಾರದವರಿಂದ ಜಗತ್ತಿಗೆ ನೆಮ್ಮದಿ ಸಿಕ್ಕಿದೆ. ಎಲ್ಲಿಯವರೆಗೆ ಇಸ್ಲಾಂ ಇರುವುದೋ ಅಲ್ಲಿಯವರೆಗೆ ಜಗತ್ತಿನಲ್ಲಿ ನೆಮ್ಮದಿ ಇರುವುದಿಲ್ಲʼ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು. ಅನಂತ್‌ ಕುಮಾರ್‌ ಸದಾ ಮುಸ್ಲಿಂ ವಿರೋಧಿ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಾರೆ. 
icon

(4 / 8)

ಬೆಂಗಳೂರಿನಲ್ಲಿ ನಡೆದ ಮತ್ತೆ ಮತ್ತೆ ಸಾರ್ವಕರ್‌ ಕಾರ್ಯಕ್ರಮದಲ್ಲಿ ಗಾಂಧೀಜಿ ವಿರುದ್ಧ ಮಾತನಾಡಿರುವ ಹೆಗಡೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇತಿಹಾಸದ ಪ್ರಕಾರ ಉಪವಾಸಕ್ಕೆ ಹೆದರಿ ಬ್ರಿಟಿಷರು ದೇಶ ಬಿಟ್ಟು ಹೋದರು, ಇದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಾಠಿ ರುಚಿ ನೋಡದ, ಏಟು ತಿನ್ನದವರನ್ನು ಹಾಗೂ ಬ್ರಿಟಿಷರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡವರನ್ನು ಇತಿಹಾಸದ ಪುಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. 
icon

(5 / 8)

ಬಾಬರಿ ಮಸೀದಿಯಂತೆ ಭಟ್ಕಳ ಮಸೀದಿ ಧ್ವಂಸ ಗ್ಯಾರೆಂಟಿ, ಇದು ಅನಂತ್‌ ಕುಮಾರ್‌ ಹೆಗಡೆ ನಿರ್ಧಾರವಲ್ಲ, ಹಿಂದೂಗಳ ನಿರ್ಧಾರ ಎಂದು ಜನವರಿ ತಿಂಗಳಲ್ಲಿ ಹೇಳಿಕೆ ನೀಡಿದ್ದರು. 
icon

(6 / 8)

ಇಂದಿರಾಗಾಂಧಿ ಕುಟುಂಬಕ್ಕೆ ಗೋಹತ್ಯೆ ಶಾಪವಿತ್ತು. ಆ ಕಾರಣಕ್ಕೆ ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿಯವರನ್ನು ಗೋಕುಲಾಷ್ಟಮಿ ದಿನವೇ ಹತ್ಯೆ ಮಾಡಲಾಯಿತು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. 
icon

(7 / 8)

ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದಲ್ಲೂ ವಿರೋಧ ವ್ಯಕ್ತಪಡಿಸಿದ್ದರು. ಇದು ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಎಂದು ಟೀಕಿಸಿದ್ದರು.
icon

(8 / 8)

IPL_Entry_Point

ಇತರ ಗ್ಯಾಲರಿಗಳು