ಮೈಸೂರು ದಸರಾ: ಎರಡನೇ ಹಂತದ ಗಜಪಡೆಯ ತೂಕ ಪರೀಕ್ಷೆ, ಅಭಿಮನ್ಯು ಬಳಿಕ ಸುಗ್ರೀವ ತೂಕವೇ ಹೆಚ್ಚು -Photos
- ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ, ಅರಮನೆಗಳ ನಗರಿಗೆ ಎರಡನೇ ಗುಂಪಿನ ಆನೆಗಳು ಕೂಡಾ ಬಂದಿವೆ. ಹೀಗಾಗಿ ಎರಡನೇ ಹಂತದ ದಸರಾ ಗಜಪಡೆಯ ತೂಕ ಪರೀಕ್ಷೆ ನಡೆಸಲಾಯ್ತು. ಗುರುವಾರ ಸಂಜೆ ಎರಡನೇ ಹಂತದ ಗಜಪಡೆ ಮೈಸೂರಿಗೆ ಆಗಮಿಸಿದ್ದವು.
- ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ, ಅರಮನೆಗಳ ನಗರಿಗೆ ಎರಡನೇ ಗುಂಪಿನ ಆನೆಗಳು ಕೂಡಾ ಬಂದಿವೆ. ಹೀಗಾಗಿ ಎರಡನೇ ಹಂತದ ದಸರಾ ಗಜಪಡೆಯ ತೂಕ ಪರೀಕ್ಷೆ ನಡೆಸಲಾಯ್ತು. ಗುರುವಾರ ಸಂಜೆ ಎರಡನೇ ಹಂತದ ಗಜಪಡೆ ಮೈಸೂರಿಗೆ ಆಗಮಿಸಿದ್ದವು.
(1 / 5)
ತೂಕ ಪರೀಕ್ಷೆಯಲ್ಲಿ ಪ್ರಶಾಂತ್ ಆನೆ 4875 ಕೆಜಿ ತೂಕವಿದ್ದರೆ, ಹಿರಣ್ಯ 2930 ಕೆಜಿ ತೂಕವಿದೆ. ಮಹೇಂದ್ರ 4910 ಕೆಜಿ, ದೊಡ್ಡಹರವೆ ಲಕ್ಷ್ಮಿ 3485 ಕೆಜಿ, ಸುಗ್ರೀವ ಆನೆ 5190 ಕೆ ಜಿ ತೂಕವಿದೆ.
(2 / 5)
ಮೈಸೂರಿನ ದೇವರಾಜ ಮೊಹಲ್ಲಾದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೊ., ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷೆ ನಡೆಯಿತು. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬಳಿಕ ಅತಿ ಹೆಚ್ಚು ತೂಕ ಹೊಂದಿರುವ ಆನೆ ಸುಗ್ರೀವ.
(3 / 5)
ದಸರಾ ಆನೆಗಳ ತೂಕ ಪರೀಕ್ಷೆ ಕುರಿತು ಮಾತನಾಡಿದ ಡಿಸಿಎಫ್ ಡಾ.ಐಬಿ ಪ್ರಭುಗೌಡ, ಎರಡನೇ ಹಂತದ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ. ನೆನ್ನೆಯಷ್ಟೇ ಐದು ಆನೆಗಳು ಅರಮನೆ ಅವರಣಕ್ಕೆ ಬಂದಿವೆ. ಅಭಿಮನ್ಯುವಿನ ನಂತರ ಸುಗ್ರೀವ ಅತಿ ಹೆಚ್ಚು ತೂಕ ಹೊಂದಿದ್ದಾನೆ ಎಂದರು.
(4 / 5)
ಇಂದು ಸಂಜೆಯಿಂದಲೇ ಎಲ್ಲಾ ಆನೆಗಳು ತಾಲಿಮಿನಲ್ಲಿ ಭಾಗಿಯಾಗುತ್ತವೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಪ್ರಶಾಂತ ಆನೆಗೆ ಭೇದಿ ಕಾಣಿಸಿಕೊಂಡಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇತರ ಗ್ಯಾಲರಿಗಳು