ಕನ್ನಡ ಸುದ್ದಿ  /  Photo Gallery  /  Karnataka Politics Deputy Chief Minister Dk Shivakumar Watched Rcb Vs Gujarat Titans Match In Chinnaswamy Stadium Rsm

DK Shivakumar: ಭಾನುವಾರ ಮಗಳೊಂದಿಗೆ ಆರ್‌ಸಿಬಿ ಗುಜರಾತ್‌ ಟೈಟನ್ಸ್ ಪಂದ್ಯ ವೀಕ್ಷಿಸಿ ಇಂದು ಅಧಿವೇಶನಕ್ಕೆ ಹಾಜರಾದ ಡಿಸಿಎಂ ಡಿಕೆ ಶಿವಕುಮಾರ್

  • ಶನಿವಾರವಷ್ಟೇ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಡಿಕೆ ಶಿವಕುಮಾರ್‌, ಭಾನುವಾರ ತಮ್ಮ ಪುತ್ರಿಯೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಮ್ಯಾಚ್‌ ಎಂಜಾಯ್‌ ಮಾಡಿದ್ದಾರೆ. 

ಡಿಸಿಎಂ ಡಿಕೆ ಶಿವಕುಮಾರ್‌ ತಮ್ಮ ಕಿರಿಯ ಪುತ್ರಿ ಆಭರಣ ಜೊತೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯ ವೀಕ್ಷಿಸಿದರು. 
icon

(1 / 10)

ಡಿಸಿಎಂ ಡಿಕೆ ಶಿವಕುಮಾರ್‌ ತಮ್ಮ ಕಿರಿಯ ಪುತ್ರಿ ಆಭರಣ ಜೊತೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯ ವೀಕ್ಷಿಸಿದರು. (PC: @DKShivakumar)

ಮ್ಯಾಚ್‌ ವೀಕ್ಷಿಸುತ್ತಿರುವ ಫೋಟೋಗಳನ್ನು ಡಿಕೆ ಶಿವಕುಮಾರ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ #IPL ಪಂದ್ಯ ವೀಕ್ಷಿಸಿದೆ ಎಂದು ಡಿಕೆಶಿ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 
icon

(2 / 10)

ನಮ್ಮ‌‌ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಏನೇ ಆದ್ರು ನನ್ನ ಫೇವರಿಟ್ #RCB ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ. ನಿರಾಸೆ ಬೇಡ, ಆಶಾವಾದವಿರಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆರ್‌ಸಿಬಿ ತಂಡವನ್ನು ಪ್ರೋತ್ಸಾಹಿಸಿ ಟ್ವೀಟ್‌ ಮಾಡಿದ್ದಾರೆ. 
icon

(3 / 10)

ಡಿಕೆಶಿ ಫೋಟೋಗಳಿಗೆ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ ಮಾಡುತ್ತಿದ್ದಾರೆ. 
icon

(4 / 10)

ಡಿಕೆಶಿ ಫೋಟೋಗಳಿಗೆ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ ಮಾಡುತ್ತಿದ್ದಾರೆ. 

ರಾಜಕಾರಣ ಯಾವಾಗಲೂ ಇದ್ದದ್ದೇ ಆಗಾಗ ಬಿಡುವು ಮಾಡಿಕೊಂಡು ಇಂತಹ ಕ್ರೀಡಾ ಚಟುವಟಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಾರ್ವಜನಿಕರ ಜೊತೆಗೆ ಬೆರೆತು ಅವರ ಕಷ್ಟ ಸುಖವನ್ನು ಆಲಿಸಬಹುದು ಎಂದು ಯೂಸರ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 
icon

(5 / 10)

ನಿನ್ನೆ ಕ್ರಿಕೆಟ್‌ ಮ್ಯಾಚ್‌ ನೋಡಿದ ಡಿಕೆಶಿ ಇಂದು ಡಿಸಿಎಂ ಆಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಒಳಗೆ ಹೋಗುವ ಮುನ್ನ ಮೆಟ್ಟಿಲುಗಳಿಗೆ ನಮಿಸಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 
icon

(6 / 10)

ಬೆಂಬಲಿಗರು, ನೆಟಿಜನ್‌ಗಳು ಡಿಕೆಶಿಗೆ ಶುಭ ಕೋರುತ್ತಿದ್ದಾರೆ. ಆದಷ್ಟು ಬೇಗ ನೀವು ನೀಡಿದ ಭರವಸೆಗಳನ್ನು ಈಡೇರಿಸಿ ಎಂದು ಮನವಿ ಮಾಡುತ್ತಿದ್ದಾರೆ. 
icon

(7 / 10)

ಮೇ 10ರಂದು ನಡೆದ ವಿಧಾನಸಬೇ ಚುನಾವಣೆ ಫಲಿತಾಂಶ ಮೇ 13 ರಂದು ಪ್ರಕಟವಾಗಿತ್ತು. ಕಾಂಗ್ರೆಸ್‌ ಈ ಬಾರಿ 135 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಗಳಿಸಿದೆ. 
icon

(8 / 10)

ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರು. ಇದಕ್ಕಾಗಿ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರು. ಹೈಕಮಾಂಡ್‌ ಸೂಚನೆ ಮೇರೆಗೆ ಡಿಕೆಶಿ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. 
icon

(9 / 10)

ಇಂದು (ಮೇ 22) ಮತ್ತು ನಾಳೆ (ಮೇ 23) ನೂತನ ಶಾಸಕರ ಪ್ರಮಾಣವಚನ ಹಾಗೂ ಕೊನೆಯ ದಿನ ಹೊಸ ಸಭ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. 
icon

(10 / 10)

IPL_Entry_Point

ಇತರ ಗ್ಯಾಲರಿಗಳು