Weekend with Ramesh: ಬೀಡಿ ಸೇದಿ ಸಿಗರೇಟ್ ಚಟ ಅಂಟಿಸಿಕೊಂಡಿದ್ದೆ, ರಾಜಕೀಯವೂ ಸಾಕೆನಿಸಿತ್ತು; ವೀಕೆಂಡ್ ಶೋದಲ್ಲಿ ಸಿದ್ದರಾಮಯ್ಯ ನೆನಪು
- Weekend with Ramesh Siddaramaiah Episode highlights: ರಾಜ್ಯ ರಾಜಕಾರಣದಲ್ಲಿ ಕಳೆದ ನಾಲ್ಕೈದು ದಿನದಿಂದ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ದೊಡ್ಡ ಮಟ್ಟದ ಕುತೂಹಲ ಸೃಷ್ಟಿಸಿತ್ತು. ಈಗ ಆ ಕೌತುಕಕ್ಕೆ ಬ್ರೇಕ್ ಬಿದ್ದಿದ್ದು, ಸಿದ್ದರಾಮಯ್ಯನವರೇ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
- Weekend with Ramesh Siddaramaiah Episode highlights: ರಾಜ್ಯ ರಾಜಕಾರಣದಲ್ಲಿ ಕಳೆದ ನಾಲ್ಕೈದು ದಿನದಿಂದ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ದೊಡ್ಡ ಮಟ್ಟದ ಕುತೂಹಲ ಸೃಷ್ಟಿಸಿತ್ತು. ಈಗ ಆ ಕೌತುಕಕ್ಕೆ ಬ್ರೇಕ್ ಬಿದ್ದಿದ್ದು, ಸಿದ್ದರಾಮಯ್ಯನವರೇ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
(1 / 10)
ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದಾಗ ಅವರ ಅಪಾರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆಯೇ 2017ರಲ್ಲಿ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಅನೇಕ ನೆನಪುಗಳನ್ನು ಹಂಚಿಕೊಂಡಿದ್ದರು. ಬಾಲ್ಯ, ಕಾಲೇಜು, ರಾಜಕೀಯ ಹೀಗೆ ಕೆಲವು ಘಟನಾವಳಿಗಳ ಬಗ್ಗೆ ಮಾತನಾಡಿದ್ದರು . ಆ ಪೈಕಿ ಆಯ್ದ ಕೆಲ ನೆನಪುಗಳನ್ನು ಅವರದೇ ಮಾತಿನ ಧಾಟಿಯಲ್ಲಿ ನಿಮ್ಮ ಮುಂದಿಟ್ಟಿದ್ದೇವೆ. (Photo/ Zee5)
(2 / 10)
ನಮ್ಮ ಮನೆ ದೇವ್ರು ಸಿದ್ದರಾಮೇಶ್ವರ. ಹಾಗಾಗಿ ನಾವು ವೀರ ಕುಣಿತ ಕಲಿಯಲೇಬೇಕಿತ್ತು. ನನ್ನಪ್ಪ ನನ್ನ ಶಾಲೆ ಬಿಡಿಸಿ ಜಾನಪದ ನೃತ್ಯಕ್ಕೆ ಸೇರಿಸಿದ್ರು. ನನ್ನಪ್ಪನೂ ವೀರ ಮಕ್ಕಳ ಕುಣಿತದಲ್ಲಿ ಎಕ್ಸ್‌ಪರ್ಟ್. ಅದಕ್ಕೆಂದೇ ನಂಜೇಗೌಡ್ರ ಬಳಿ ಸೇರಿಸಿದ್ರು. ಈ ಕುಣಿತ ಕಲಿಸುವ ನಂಜೇಗೌಡ್ರು ನಮಗೆ ಕುಣಿತದ ಜತೆಗೆ ಅಕ್ಷರಾಭ್ಯಾಸ ಕಲಿಸಿದ್ರು. ಮರಳಿನ ಮೇಲೆ ಅಕ್ಷರ ಕಲಿಸಿದ್ರು. ಗಣಿತ ಲೆಕ್ಕವನ್ನೂ ನಾವು ಮರಳಿನ ಮೇಲೆಯೇ ಕಲಿತಿದ್ದೇವೆ. (Photo/ Zee5)
(3 / 10)
ಎರಡು ವರ್ಷದ ನಂತರ ವೀರ ಮಕ್ಕಳ ಕುಣಿತ ಕಲಿಸುವುದನ್ನು ನಂಜೇಗೌಡ್ರು ನಿಲ್ಲಿಸಿದ್ರು. ಅದಾದ ಮೇಲೆ ನಾನು ಗೆಳೆಯರ ಜತೆ ಸೇರಿ ಎಮ್ಮೆ ಕಾಯುವುದು, ಗದ್ದೆ ಕೆಲಸ ಮಾಡ್ತಿದ್ದೆ. ನಮ್ಮ ಊರಲ್ಲಿ ರಾಜಪ್ಪ ಎಂಬ ಹೆಡ್‌ಮಾಸ್ಟರ್ ಇದ್ರು, ಶಾಲೆ ಕಲಿಯದೇ ಇರುವ ಮಕ್ಕಳು ಯಾರ್ಯಾರಿದ್ದಾರೋ ಅವರ ಪಟ್ಟಿ ಮಾಡಿ, ಶಾಲೆಗೆ ಸೇರಿಸುವ ಕೆಲಸ ಅವ್ರದ್ದು. ಹೀಗಿರುವಾಗ ನಾನೂ ಶಾಲೆ ಬಿಟ್ಟಿದ್ದೆ. ಅಪ್ಪನ ಬಳಿ ಮಾತನಾಡಿ ನೇರವಾಗಿ 5ನೇ ತರಗತಿಗೆ ಅಡ್ಮಿಷನ್ ಮಾಡಿಸಿದ್ರು. (Photo/ Zee5)
(4 / 10)
ಚಿಕ್ಕಂದಿನಲ್ಲಿ ಕೇವಲ ನಾಲ್ಕಾಣೆ ಸಿಕ್ಕರೆ ಸಾಕು ಹಬ್ಬ ಹಬ್ಬ ಮಾಡಿಬಿಡ್ತಿದ್ವಿ. ಪಕ್ಕದೂರಿನಲ್ಲಿ ಜಾತ್ರೆ ಇದ್ರೆ, ಅಲ್ಲಿ ನಮ್ಮ ಹಾಜರಿ ಇದ್ದೇ ಇರ್ತಿತ್ತು. ಇಡೀ ದಿನ ಸುತ್ತಾಡಿ ಬರ್ತಿದ್ವಿ. ಓದೋದು ಮತ್ತು ಆಟ ಆಡೋದು ಬಿಟ್ಟರೆ ನಮಗೆ ಬೇರೆ ಕೆಲಸ ಇರುತ್ತಿರಲಿಲ್ಲ. (Photo/ Zee5)
(5 / 10)
ನಮ್ಮ ಮನೆಯಲ್ಲಿ ಸಾಕಷ್ಟು ಜನ ಕೆಲಸಗಾರರು ಇರುತ್ತಿದ್ದರು. ಅವರೊಂದಿಗೆ ಸೇರಿ ಗದ್ದೆ ಕೆಲಸ ಮಾಡುತ್ತಿದ್ದೆ. ಅವ್ರು ಕೆಲಸದ ವೇಳೆ ಬೀಡಿ ಸೇದುತ್ತಿದ್ದರು. ಅವರಿಂದ ನಾನೂ ಬಿಡಿ ಸೇದುವುದನ್ನು ಕಲಿತೆ. ಕಾಲೇಜಿಗೆ ಸೇರುವಷ್ಟರಲ್ಲಿ ನನ್ನ ಜತೆ ಸಿಗರೇಟ್ ಚಟ ಬಂತು. ಆವತ್ತು ಬೀಡಿ ಸೇದದೇ ಇದ್ದಿದ್ದರೆ, ಸಿಗರೇಟ್ ಮುಟ್ಟುತ್ತಿರಲಿಲ್ಲ. (Photo/ Zee5)
(6 / 10)
ಚಿಕ್ಕವಯಸ್ಸಿನಲ್ಲಿದ್ದಾಗ ನನ್ನ ಮೇಲೆ ಎರಡು ಘಟನೆಗಳು ತುಂಬ ಪರಿಣಾಮ ಬೀರಿದ್ದವು. ನಮ್ಮ ಊರಲ್ಲಿ ಬಹಳಷ್ಟು ಮಂದಿಗೆ ಕುಷ್ಕಿ ಜಮೀನು ಇರುತ್ತಿತ್ತು. ಕೆಲವೇ ಜನರ ಬಳಿ ತರೀ ಜಮೀನು ಇರುತ್ತಿತ್ತು. ಯಾರ ಮನೆಯಲ್ಲಿ ಭತ್ತ ಬೆಳೆಯುತ್ತಿದ್ದರೂ ಅವರು ನಿತ್ಯ ಅನ್ನ ಮಾಡಿ ಊಟ ಮಾಡುತ್ತಿದ್ದರು. ಕುಷ್ಕಿ ಜಮೀನಿದ್ದವರು ಹಬ್ಬ ಹರೀದಿನಕ್ಕೆ ಮಾತ್ರ ಅನ್ನ ಮಾಡಿ ಉಣ್ಣುವ ಸ್ಥಿತಿ ಇತ್ತು. (Photo/ Zee5)
(7 / 10)
ಮನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆ ಬಂದರೆ ರಾಗಿ ಮುದ್ದೆ ನುಂಗೋಕೆ ಆಗಲ್ಲ. ಆಗ ಅವ್ರು ಅಕ್ಕಿ ಬೆಳೆಯುವವರ ಮನೆ ಮುಂದೆ ಒಂದು ತುತ್ತು ಅನ್ನಕ್ಕೆ ಕಾದು ಕುಳಿತಿರುತ್ತಿದ್ದರು. ನನಗಿದು ಆಗ ತುಂಬ ಕಾಡಿತ್ತು. ಹಾಗಾಗಿ ನಾನು ಸಿಎಂ ಆದ ಮೇಲೆ ಕರ್ನಾಟಕದಲ್ಲಿ ಯಾರೂ ಕೂಡ ಹಸಿದು ಮಲಗಬಾರದು ಎಂದು ಅನ್ನಭಾಗ್ಯ ಯೋಜನೆ ಶುರುಮಾಡಿದೆ. ಹಸಿವು ಮುಕ್ತ ರಾಜ್ಯವಾಗಬೇಕು ಎಂದು ಶಪಥ ಮಾಡಿದೆ. ಈ ಅತ್ಯಂತ ತೃಪ್ತಿ ನೀಡಿದ ಕೆಲಸವದು. (Photo/ Zee5)
(8 / 10)
ದೇವೇಗೌಡ, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಇವರೆಲ್ಲರಿಗಿಂತ ನಾನು ತುಂಬ ಚಿಕ್ಕವನು. ಅವರ ಜತೆಗೆ ಓಡಾಡಿದ್ದಕ್ಕೆ ನಾನೂ ಈ ಮಟ್ಟದಲ್ಲಿ ಬೆಳೆಯಲು ಅನುಕೂಲವಾಯ್ತು. ಯುವ ಪೀಳಿಗೆಗೆ ನಾನು ಹೇಳುವುದೆನೆಂದರೆ, ಯಾವುದೇ ಪಕ್ಷ ಸೇರಿಕೊಂಡಾಗ ಆ ಪಕ್ಷದ ಐಡಿಯಾಲಜಿ ಬಗ್ಗೆ ಸ್ಪಷ್ಟತೆ ಇರಬೇಕು. ಬದ್ಧತೆ ಇರಬೇಕು. ಇವೆರಡೂ ಇದ್ದಾಗ ಯಶಸ್ಸು ನಮ್ಮ ಜತೆಗಿರುತ್ತದೆ. ಅದನ್ನೇ ಅಳವಡಿಸಿಕೊಳ್ಳಿ. (Photo/ Zee5)
(9 / 10)
ಚುನಾವಣೆಯಲ್ಲಿ ಕೆಲವೊಮ್ಮೆ ಸೋತಾಗ ರಾಜಕೀಯವೇ ಸಾಕು ಎನಿಸಿದ್ದು ಉಂಟು. ಎಂದಿನಂತೆ ಇದೆಲ್ಲದರಿಂದ ದೂರ ಹೋಗಿ ನನ್ನ ವಕೀಲಿಕೆ ವೃತ್ತಿ ಶುರುಮಾಡೋಣ ಎಂದು ಅಂದುಕೊಂಡಿದ್ದೆ. ಮತ್ತೆ ಏನನ್ನಿಸುವುದೆಂದರೆ ಓಡಿಹೋದರೆ ಪಲಾಯನ ಆಗುತ್ತೆ ಎಂದು ರಾಜಕೀಯದಲ್ಲಿಯೇ ಮುಂದುವರಿದೆ. ಹೀಗೆ ತಮ್ಮ ದಿನಗಳನ್ನು ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು. (Photo/ Zee5)
ಇತರ ಗ್ಯಾಲರಿಗಳು