Karnataka Rains: ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆ, ಬೆಂಗಳೂರಲ್ಲೂ ತಂಪರೆದ ವರುಣ
- Rain Updates ಬೆಂಗಳೂರು, ಹಳೆ ಮೈಸೂರು ಭಾಗದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ನಂತರ ಭಾರೀ ಮಳೆ. ಶುಕ್ರವಾರ ರಾತ್ರಿ ಹಾಗೂ ಶನಿವಾರವೂ ಕೆಲವು ಕಡೆ ಮಳೆಯಾಗಿದೆ. ಇದರ ಚಿತ್ರನೋಟ ಇಲ್ಲಿದೆ.
- Rain Updates ಬೆಂಗಳೂರು, ಹಳೆ ಮೈಸೂರು ಭಾಗದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ನಂತರ ಭಾರೀ ಮಳೆ. ಶುಕ್ರವಾರ ರಾತ್ರಿ ಹಾಗೂ ಶನಿವಾರವೂ ಕೆಲವು ಕಡೆ ಮಳೆಯಾಗಿದೆ. ಇದರ ಚಿತ್ರನೋಟ ಇಲ್ಲಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 7)
ಚಾಮರಾಜನಗರ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿರುವುದರಿಂದ ಸುವರ್ಣಾವತಿ ಜಲಾಶಯದ ಭಾಗದಲ್ಲೂ ನೀರಿನ ಪ್ರಮಾಣ ಕೊಂಚ ಹೆಚ್ಚಿದೆ. ಇಡೀ ಪರಿಸರ ಆಹ್ಲಾದಕರವಾಗಿದೆ.
(2 / 7)
ಕೊಡಗಿನ ಹಲವು ಭಾಗದಲ್ಲಿ ನಿರಂತರ ಮಳೆ. ಮಳೆಯ ಜತೆಗೆ ಅಲ್ಲಲ್ಲಿ ಆಲಿ ಕಲ್ಲು ಕೂಡ ಬಿದ್ದಿದೆ. ಇದನ್ನು ಸಂಗ್ರಹಿಸಿದವರ ಖುಷಿಯ ಕ್ಷಣವಿದು.
(3 / 7)
ಕೊಡಗಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕಣಿವೆ ಪ್ರದೇಶದಲ್ಲೂ ನೀರು ಹರಿಯುತ್ತಿದೆ. ಕಾವೇರಿ ನದಿ ಒಳ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ.
(4 / 7)
ಮೈಸೂರಿನಿಂದ ಗುಂಡ್ಲುಪೇಟೆಯಿಂದ ಊಟಿಗೆ ಹೋಗುವ ಮಾರ್ಗದ ಬಂಡೀಪುರ ಸಮೀಪವೂ ಶನಿವಾರ ಮೋಡ ಕವಿದ ವಾತಾವರಣ. ಸಂಜೆ ಭಾರೀ ಮಳೆ ಸುರಿವ ಮುನ್ಸೂಚನೆಯಿದೆ.
(5 / 7)
ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಹೊಂದಿಕೊಂಡು ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದಂತಹ ಪ್ರದೇಶದಲ್ಲಿ ಮೋಡಿ ಕವಿದ ವಾತಾವರಣ. ಈ ಭಾಗದಲ್ಲಿ ಮಳೆಯೂ ಚೆನ್ನಾಗಿ ಆಗಿದೆ.
(6 / 7)
ಇದು ಬೆಂಗಳೂರಿನ ಮಲ್ಲೇಶ್ವರಂ. ಶುಕ್ರವಾರ ರಾತ್ರಿ ಎಡಬಿಡದೇ ಮಳೆ ಸುರಿದು ಬೆಂಗಳೂರಿನ ಹಲವು ಭಾಗಗಳಲ್ಲಿ ತೊಂದರೆಯಾಯಿತು. ಮತ್ತೊಂದು ಕಡೆ ಬಿಸಿಲ ಬೇಗೆಗೆ ತಂಪು ಕೂಡ ಆಯಿತು.
ಇತರ ಗ್ಯಾಲರಿಗಳು