Karnataka Rains: ಮಲೆನಾಡಲ್ಲಿ ಮಳೆ ಅಬ್ಬರ, ಉಕ್ಕಿ ಹರಿಯುತ್ತಿದೆ ತುಂಗೆ, ಶಿವಮೊಗ್ಗ ನಗರ ನದಿ ತೀರದಲ್ಲಿ ಪ್ರವಾಹದ ಸನ್ನಿವೇಶ
- Shimoga News ಮಲೆನಾಡು ಭಾಗದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ತುಂಗಾ ನದಿ( Tunga River) ಉಕ್ಕಿ ಹರಿಯುತ್ತಿದೆ. ಶಿವಮೊಗ್ಗ ನಗರದ ( Shimoga Flood) ನದಿ ಪಾತ್ರದಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
- Shimoga News ಮಲೆನಾಡು ಭಾಗದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ತುಂಗಾ ನದಿ( Tunga River) ಉಕ್ಕಿ ಹರಿಯುತ್ತಿದೆ. ಶಿವಮೊಗ್ಗ ನಗರದ ( Shimoga Flood) ನದಿ ಪಾತ್ರದಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
(1 / 6)
ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಎರಡು ಮೂರು ದಿನದಿಂದ ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರು ಭಾಗದಲ್ಲಿ ನದಿ ಕಂಡಿದ್ದು ಹೀಗೆ
(ANI)(2 / 6)
ತುಂಗಾ ನದಿ ಉಕ್ಕಿ ಹರಿದು ಜಲಾಶಯಕ್ಕೂ ಭಾರೀ ನೀರು ಬರುತ್ತಿದೆ. ಇದರಿಂದ ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿನ ತುಂಗಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನದಿಗೆ ಹೊರ ಬಿಡಲಾಗುತ್ತಿದೆ.
(Naveen Reddy)(3 / 6)
ಗಾಜನೂರು ಜಲಾಶಯದಿಂದ ಹೊರಟ ತುಂಗಾ ನದಿ ಶಿವಮೊಗ್ಗ ನಗರವನ್ನು ದಾಟಲಿದೆ. ಈ ವೇಳೆ ಶಿವಮೊಗ್ಗ ನಗರದ ಕೆಲವೆಡೆ ಪ್ರವಾಹದ ಸನ್ನಿವೇಶವನ್ನು ತುಂಗಾ ನದಿ ಸೃಷ್ಟಿಸಿದೆ.
(malenadu today)(4 / 6)
ಶಿವಮೊಗ್ಗ ಹೃದಯ ಭಾಗದಲ್ಲಿಯೇ ತುಂಗಾ ನದಿ ಮಿತಿಯನ್ನು ಮೀರಿ ಹರಿಯುತ್ತಿದೆ. ಈಗಾಗಲೇ ನಗರದಲ್ಲಿ ಮುನ್ನೆಚ್ಚರಿಕೆಯನ್ನೂ ಘೋಷಿಸಲಾಗಿದೆ.
(5 / 6)
ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಸೇತುವೆಗಳ ಮಟ್ಟದಲ್ಲಿ ಹರಿಯುತ್ತಿದೆ. ಇನ್ನೂ ಮಳೆಯಾಗಿ ಹೊರ ಹರಿವು ಹೆಚ್ಚಾದರೆ ಸೇತುವೆ ಮೇಲೆ ನೀರು ಹರಿಯುವ ವಾತಾವರಣ ನಿರ್ಮಾಣವಾಗಲಿದೆ.
ಇತರ ಗ್ಯಾಲರಿಗಳು