Karnataka Flood: ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲೆಡೆ ಪ್ರವಾಹ, ಭದ್ರಾವತಿಗೂ ನುಗ್ಗಿದ ನೀರು, ನಂಜನಗೂಡು ಜಲಾವೃತ photos
- Flood in Karnaaka ಭಾರೀ ಮಳೆಯಿಂದ ನದಿಗಳು ತುಂಬಿವೆ. ಜಲಾಶಯಗಳಿಂದ ನೀರು ಹರಿಸಿ ನಗರ, ಹಳ್ಳಿಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಪ್ರವಾಹ ಸ್ಥಿತಿ ಹೆಚ್ಚಾಗಿದೆ. ಈ ಕುರಿತ ಚಿತ್ರ ನೋಟ ಇಲ್ಲಿದೆ.
- Flood in Karnaaka ಭಾರೀ ಮಳೆಯಿಂದ ನದಿಗಳು ತುಂಬಿವೆ. ಜಲಾಶಯಗಳಿಂದ ನೀರು ಹರಿಸಿ ನಗರ, ಹಳ್ಳಿಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಪ್ರವಾಹ ಸ್ಥಿತಿ ಹೆಚ್ಚಾಗಿದೆ. ಈ ಕುರಿತ ಚಿತ್ರ ನೋಟ ಇಲ್ಲಿದೆ.
(1 / 10)
ಭದ್ರಾ ಜಲಾಶಯದಿಂದ 60 ಸಾವಿರ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಹಲವು ಅಂಗಡಿಗೂ ನೀರು ನುಗ್ಗಿದೆ.
(2 / 10)
ಭಾರೀ ಮಳೆಯಾಗಿ ಭದ್ರಾ ಜಲಾಶಯ ತುಂಬಿದ್ದರಿಂದ ಭದ್ರಾ ನದಿಗೆ ಭಾರೀ ಹರಿ ಬಿಡಲಾಗಿದ್ದು, ಭದ್ರಾವತಿ ನಗರದಲ್ಲಿ ನೀರು ನುಗ್ಗಿದೆ.
(malenadu today)(3 / 10)
ಕೃಷ್ಣರಾಜ ಸಾಗರ ಜಲಾಶಯದಿಂದ ಭಾರೀ ನೀರು ಹರಿ ಬಿಡುತ್ತಿರುವುದರಿಂದ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಗಡಿ ಭಾಗವಾದ ಸತ್ತೆಗಾಲ ಬಳಿ ಕಾವೇರಿ ಹೊಳೆ ಪ್ರವಾಹ ಸ್ಥಿತಿಯಲ್ಲಿದೆ.
(4 / 10)
ಭಾರೀ ಮಳೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲವು ಗ್ರಾಮಗಳಿಗೆ ಘಟಪ್ರಭಾ ನೀರು ನುಗ್ಗಿದೆ. ಈಗಲೂ ಗ್ರಾಮಗಳಲ್ಲಿ ಜಲಭಯವಿದೆ,
(5 / 10)
ಮಲೆನಾಡಿನಲ್ಲಿ ಭಾರೀ ಮಳೆಯಾಗಿ ಸಾಗರ ತಾಲ್ಲೂಕಿನ ಶರಾವತಿ ನದಿ ಮೂಲಕ ಲಿಂಗನಮಕ್ಕಿಗೂ ಹೆಚ್ಚಿನ ನೀರು ಹರಿದು ಬಂದಿದೆ.
(6 / 10)
ಭಾರೀ ನೀರು ಬಿಡುಗಡೆ ಕಾರಣದಿಂದ ಚಾಮರಾಜನಗರ ಹಾಗೂ ಮಂಡ್ಯ ಗಡಿ ಭಾಗವಾದ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
(7 / 10)
ಕಬಿನಿ ಜಲಾಶಯದಿಂದ ಎಂಬತ್ತು ಸಾವಿರ ಕ್ಯೂಸೆಕ್ ನೀರು ಹರಿ ಬಿಡುತ್ತಿರುವುದರಿಂದ ನಂಜನಗೂಡು ನಗರದ ಹಲವು ಭಾಗಕ್ಕೆ ಕಪಿಲಾ ನದಿ ನೀರು ನುಗ್ಗಿ ಪ್ರವಾಹ ಉಂಟಾಗಿದೆ.
(8 / 10)
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕರ್ನಾಟಕದ ದ್ವೀಪ ನಗರಿ ಶ್ರೀರಂಗಪಟ್ಟಣ ಬಳಿ ಪ್ರವಾಹದ ಸನ್ನಿವೇಶ ಕಂಡು ಬಂದಿದ್ದು ಹೀಗೆ.
(9 / 10)
ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯ ಹರಿವಿನ ಪ್ರಮಾಣವು ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಗಣನೀಯವಾಗಿ ಏರಿ ಹಲವು ಕಡೆ ಪ್ರವಾಹ ಸನ್ನಿವೇಶ ಕಂಡು ಬಂದಿದೆ.
ಇತರ ಗ್ಯಾಲರಿಗಳು