Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos
- Karnataka Rivers ಕರ್ನಾಟಕದ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಅವುಗಳ ನೋಟ ಇಲ್ಲಿದೆ.
- Karnataka Rivers ಕರ್ನಾಟಕದ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಅವುಗಳ ನೋಟ ಇಲ್ಲಿದೆ.
(1 / 9)
ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.
(ನವೀನ್ ರೆಡ್ಡಿ)(2 / 9)
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯಲ್ಲಿ ಕಾಳಿ ನದಿ ಹರಿವು ಜೋರಾಗಿದೆ. ಉತ್ತರ ಕನ್ನಡದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾಳಿ ನದಿಯಲ್ಲಿ ಹೆಚ್ಚಿನ ನೀರಿದೆ.
(ಪ್ರಶಾಂತ್)(3 / 9)
ಕೇರಳದಲ್ಲಿ ಭಾರೀ ಮಳೆಯಾಗಿ ಕಪಿಲಾ ನದಿ ತುಂಬಿದೆ. ಕಬಿನಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಮೈಸೂರು ಜಿಲ್ಲೆ ನಂಜನಗೂಡು ಮಲ್ಲನಮೂಲೆ ಬಳಿ ಕಪಿಲಾ ನದಿ ಕಂಡಿದ್ದು ಹೀಗೆ.
(4 / 9)
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿ ಕೃಷ್ಣಾ ನದಿ ತುಂಬಿ ಬರುತ್ತಿದೆ. ಈಗಾಗಲೇ ಆಲಮಟ್ಟಿಯಿಂದಲೂ ನೀರು ಹರಿ ಬಿಡುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ.
(5 / 9)
ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಬಳಿಯಲ್ಲಿ ತುಂಗಾ ನದಿ ಭಾರೀ ಜೋರಾಗಿಯೇ ಹರಿಯುತ್ತಿದೆ, ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ತುಂಗಾ ನೀರಿನ ಮಟ್ಟ ಏರಿಕೆ ಕಂಡಿದೆ.
(6 / 9)
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನದ ಮಳೆಯಿಂದ ಕಡಬ ತಾಲ್ಲೂಕಿನ ಸುಬ್ರಹ್ಮಣ್ಯ ಬಳಿ ಕುಮಾರಧಾರ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
(ಅಕ್ಷತಾ ಉಚ್ಚಂಗಿ)(7 / 9)
ಚಿಕ್ಕಮಗಳೂರು ಹಾಗೂ ಹಾಸನ ಭಾಗದಲ್ಲಿನ ಮಳೆಯಿಂದಾಗಿ ಹೇಮಾವತಿ ನದಿ ಕೂಡ ಹೆಚ್ಚು ನೀರು ಕಂಡಿದೆ. ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದೆ.
(8 / 9)
ಮಲೆನಾಡಿನಲ್ಲಿ ಎಡಬಿಡದೇ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಶಿಕಾರಿಪುರ ಗಡಿ ಭಾಗದ ಚೋರಡಿ ಬಳಿ ಕುಮದ್ವತಿ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಇತರ ಗ್ಯಾಲರಿಗಳು