Almatti Dam: ಆಲಮಟ್ಟಿಯಿಂದ 14 ಗೇಟ್‌ಗಳ ಮೂಲಕ ಭಾರೀ ನೀರು ಹೊರಕ್ಕೆ, ಹೀಗಿದೆ ಜಲ ವೈಭವ photo
Karnataka Reservoirs ಉತ್ತರ ಕರ್ನಾಟಕದ ಪ್ರಮುಖ ಜಲಾಶಯ ಆಲಮಟ್ಟಿ( almatti dam) ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಇದರ ನೋಟ ಇಲ್ಲಿದೆ.
(1 / 6)
ಕರ್ನಾಟಕದ ಅತಿ ದೊಡ್ಡ ಜಲಾಶಯ ಆಲಮಟ್ಟಿ ಶೇ. 80 ತುಂಬಿದ್ದು,ವಿದ್ಯುದಾಗಾರದ ಮೂಲಕ 45 ಸಾವಿರ ಕ್ಯೂಸೆಕ್, ಗೇಟ್ ಮೂಲಕ 20ಸಾವಿರ ಕ್ಯೂಸೆಕ್ ಸೇರಿ ಒಟ್ಟು65 ಸಾವಿರ ಕ್ಯುಸೆಕ್ ನೀರನ್ನು ಈಗಾಗಲೇ ಹರಿಸಲಾಗುತ್ತಿದೆ.
(2 / 6)
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದರಿಂದ ಜಲಾಶಯಕ್ಕೆ ಬರುತ್ತಿರವ ಒಳ ಹರಿವಿನ ಪ್ರಮಾಣವೂ ಏರಿದೆ. ಬುಧವಾರ ಬೆಳಿಗ್ಗೆ 92736 ಕ್ಯೂಸೆಕ್ ಒಳ ಹರಿವು ಇದೆ.
(3 / 6)
ಜಲಾಶಯದಿಂದ ಹೊರ ಹರಿವಿನ ಪ್ರಮಾಣವನ್ನು ಏರಿಸಿರುವುದರಿಂದ ಕೃಷ್ಣಾ ನದಿ ಮೂಲಕ ನೀರು ನಾರಾಯಣಪುರ ಜಲಾಶಯಕ್ಕೆ ಹೋಗುತ್ತಿದೆ.
(4 / 6)
ಆಲಮಟ್ಟಿಯ ಲಾಲ್ ಬಹದ್ದೂರು ಶಾಸ್ತ್ರಿ ಜಲಾಶಯದಲ್ಲಿ ಈವರೆಗೂ 98.729 ಟಿಎಂಸಿ ನೀರು ಸಂಗ್ರಹವಾಗಿದೆ. ಮೂರು ದಿನದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ನೂರು ಟಿಎಂಸಿಯನ್ನು ಇಂದು ಸಂಜೆ ಒಳಗೆ ದಾಟಬಹುದು.
(5 / 6)
ಆಲಮಟ್ಟಿ ಜಲಾಶಯದ ಒಟ್ಟು 26ಗೇಟ್ ಗಳಿದ್ದು. ಈಗ ಒಳಹರಿವು ಒಂದು ಲಕ್ಷ ತಲುಪಿರುವುದರಿಂದ ಏರಿಕೆ ಮಾಡಲಾಗಿದ್ದು, ಇನ್ನಷ್ಟು ಹೊರ ಹರಿವು ಹೆಚ್ಚಿಸಬಹುದು.
ಇತರ ಗ್ಯಾಲರಿಗಳು