ಜೂನ್ ಮೊದಲ ವಾರದಲ್ಲೇ ಕರ್ನಾಟಕದ ಜಲಾಶಯಗಳಲ್ಲಿ ಪ್ರಮಾಣ ಗಣನೀಯ ಏರಿಕೆ, ಈ ಒಂದೇ ಕಡೆ ಒಳ ಹರಿವು ಶೂನ್ಯ
ಕರ್ನಾಟಕದ ಪ್ರಮುಖ ಹದಿನಾಲ್ಕು ಜಲಾಶಯಗಳಲ್ಲಿ 2025ರ ಜೂನ್ 4ರಂದು ಸದ್ಯ ಒಳ ಹರಿವಿನ ಪ್ರಮಾಣ 56747 ಕ್ಯೂಸೆಕ್ ಇದೆ. ಹೊರ ಹರಿವಿನ ಪ್ರಮಾಣವು 21525 ಕ್ಯೂಸೆಕ್ ಇದೆ. ಜಲಾಶಯಗಳಲ್ಲಿ ಸದ್ಯ 332.32 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 172.87 ಟಿಎಂಸಿ ನೀರು ಸಂಗ್ರಹವಿತ್ತು.
(1 / 14)
ಉತ್ತರ ಕರ್ನಾಟಕದ ದೊಡ್ಡ ಜಲಾಶಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ 17760 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 5000 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 513.91 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ದಿನ 507.80 ಅಡಿ ನೀರಿತ್ತು.
(2 / 14)
ಕರ್ನಾಟಕದ ಅತಿ ದೊಡ್ಡ ಜಲಾಶಯ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿಗೆ 4860 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು7159 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 1766.05 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ದಿನ 1744.65 ಅಡಿ ನೀರಿತ್ತು.
(3 / 14)
ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ 7964 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 0 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 1607.99 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 1599.42 ಅಡಿ ನೀರಿತ್ತು.
(4 / 14)
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯಕ್ಕೆ3090 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 347 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ2114.66 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2089.27 ಅಡಿ ನೀರಿತ್ತು.
(5 / 14)
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 3421 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು1450 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 2906.33 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇದಿನ 2880.65 ಅಡಿ ನೀರಿತ್ತು.
(6 / 14)
ಬೆಳಗಾವಿ ಜಿಲ್ಲೆಯ ಮಲಪ್ರಭ ಜಲಾಶಯಕ್ಕೆ 0 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 194 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 2051.37 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇದಿನ 2042.92 ಅಡಿ ನೀರಿತ್ತು.
(7 / 14)
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ 6876 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 819 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 106.60 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 84.40 ಅಡಿ ನೀರಿತ್ತು.
(8 / 14)
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ 1830 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ 1187 ಪ್ರಮಾಣವು ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 2851.37 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2824.19 ಅಡಿ ನೀರಿತ್ತು.
(9 / 14)
ಬೆಳಗಾವಿ ಜಿಲ್ಲೆಯ ಘಟಪ್ರಭ ಜಲಾಶಯಕ್ಕೆ 1098 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 117 ಕ್ಯೂಸೆಕ್ ಇದೆ ಜಲಾಶಯದಲ್ಲಿ ಸದ್ಯ 2102.10 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2097.90 ಅಡಿ ನೀರಿತ್ತು.
(10 / 14)
ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯಕ್ಕೆ 1347 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 4971 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 1739.26 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 1730.33 ಅಡಿ ನೀರಿತ್ತು.
(11 / 14)
ವಿಜಯನಗರ ಜಿಲ್ಲೆಯ ತುಂಗಭದ್ರಾಗೆ 8222 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 247 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 1599.15 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ದಿನ 1577.72 ಅಡಿ ನೀರಿತ್ತು.
(12 / 14)
ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 0 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 0 ಕ್ಯೂಸೆಕ್ ಇದೆ.ಜಲಾಶಯದಲ್ಲಿ ಸದ್ಯ 2136.15 ಅಡಿ ನೀರು ಸಂಗ್ರಹವಿದೆ. ಕಳೆದ ಇದೇ ವರ್ಷ ದಿನ 2123.85 ಅಡಿ ನೀರಿತ್ತು.
(13 / 14)
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ 7384 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 7250 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 2280.74 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2260.87 ಅಡಿ ನೀರಿತ್ತು.
ಇತರ ಗ್ಯಾಲರಿಗಳು