ಜಲಾಶಯಗಳು ಬಹುತೇಕ ಭರ್ತಿ: ಕೆಆರ್‌ಎಸ್‌, ಭದ್ರಾ ಭಾಗದ ನಾಲೆಗಳಿಗೆ ಹರಿಯಲಿದೆ ನೀರು, ಬೇಸಿಗೆ ಬೆಳೆಗೆ ಭಯವಿಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಲಾಶಯಗಳು ಬಹುತೇಕ ಭರ್ತಿ: ಕೆಆರ್‌ಎಸ್‌, ಭದ್ರಾ ಭಾಗದ ನಾಲೆಗಳಿಗೆ ಹರಿಯಲಿದೆ ನೀರು, ಬೇಸಿಗೆ ಬೆಳೆಗೆ ಭಯವಿಲ್ಲ

ಜಲಾಶಯಗಳು ಬಹುತೇಕ ಭರ್ತಿ: ಕೆಆರ್‌ಎಸ್‌, ಭದ್ರಾ ಭಾಗದ ನಾಲೆಗಳಿಗೆ ಹರಿಯಲಿದೆ ನೀರು, ಬೇಸಿಗೆ ಬೆಳೆಗೆ ಭಯವಿಲ್ಲ

ಕರ್ನಾಟಕದಲ್ಲಿ 2024ನೇ ವರ್ಷದ ಮುಂಗಾರು ಚೆನ್ನಾಗಿ ಆಗಿದ್ದರಿಂದ ಜಲಾಶಯಗಳಲ್ಲಿ ಈಗಲೂ ನೀರು ಇದೆ. ಇದರಿಂದ 2025ರ ಬೇಸಿಗೆ ಬೆಳೆಗೆ ಬಹುತೇಕ ಜಲಾಶಯಗಳಿಂದ ನೀರು ಹರಿಸಲಾಗುತ್ತಿದೆ. 

ಕೆಲದಿನಗಳಿಂದ ದಾವಣಗೆರೆ ರೈತರು ಸೇರಿದಂತೆ ವಿವಿಧ ಕಡೆಯ ರೈತರು ಭದ್ರಾ ಜಲಾಶಯದಿ/ಮದ ನಿಂದ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಪೂರಕವಾಗಿ ಇದೀಗ ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ಭದ್ರಾ ನಾಲೆಗಳಿಂದ ನೀರು ಬಿಡಲು ಸರ್ಕಾರ ತೀರ್ಮಾನಿಸಿದೆ. ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಶನಿವಾರದಿಂದಲೇ  ನೀರು ಹರಿಸಲು ತೀರ್ಮಾನಿಸಿ ಹರಿಸಲಾಗುತ್ತಿದೆ.  
icon

(1 / 7)

ಭದ್ರಾ ಜಲಾಶಯದಲ್ಲಿ ಶನಿವಾರ 66.964 ಟಿಎಂಸಿ ಅಡಿ ನೀರಿನ ಸಂಗ್ರಹ ಇದ್ದು, ಎರಡೂ ನಾಲೆಗಳಿಗೆ ಮುಂದಿನ 120 ದಿನಗಳವರೆಗೆ ನಿರಂತರವಾಗಿ ನೀರು ಹರಿಸಲಾಗುತ್ತದೆ  ಭದ್ರಾ ಎಡದಂಡೆ ಕಾಲುವೆಯಿಂದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ರೈತರಿಗೆ ಅನುಕೂಲವಾಗಲಿದ್ದು ನಿತ್ಯ 380 ಕ್ಯುಸೆಕ್ ನೀರು ಹರಿಯಲಿದೆ. 
icon

(2 / 7)

ಭದ್ರಾ ಬಲದಂಡೆ ಕಾಲುವೆಯಿಂದ ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದ್ದು ನಿತ್ಯ 2,650 ಕ್ಯುಸೆಕ್‌ನಂತೆ ನಾಲ್ಕು ತಿಂಗಳಲ್ಲಿ 32 ಟಿಎಂಸಿ ಅಡಿ ನೀರು ಹರಿಯಲಿದೆ. 
icon

(3 / 7)

ಕಾಡಾ ಕಚೇರಿಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷರಾದ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆದಿದೆ. ಆ ಬಳಿಕ ನೀರು ಹರಿಸುವ ತೀರ್ಮಾನವಾಗಿದೆ. ಬಲದಂಡೆ ನಾಲೆಗೆ ಜನವರಿ 8 ರಿಂದ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷ ಡಾ.ಅಂಶುಮಂತ್ ಮಾಹಿತಿ ನೀಡಿದ್ದಾರೆ.
icon

(4 / 7)

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯವೂ ಸತತ ಆರು ತಿಂಗಳಿನಿಂದ ತುಂಬಿದಂತೆಯೇ ಇದೆ. ಸದ್ಯ ಜಲಾಶಯದಲ್ಲಿ ಶೇ 99 ರಷ್ಟು ನೀರು ಭರ್ತಿಯಾಗಿದೆ.
icon

(5 / 7)

ಇದರಿಂದ ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ವಿವಿಧ ನಾಲೆಗಳಿಗೆ ನೀರು ಹರಿಸುವ ಸಂಬಂಧ ಮಂಗಳವಾರ ಕೆಆರ್‌ ಎಸ್‌ ನಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಸಚಿವ ಎನ್‌.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.
icon

(6 / 7)

ಮೈಸೂರು ಜಿಲ್ಲೆಯ ಕಬಿನಿ ಜಲಾಶಯವೂ ಈಗಾಗಲೇ ತುಂಬಿದೆ. ಸದ್ಯ ಜಲಾಶಯದಲ್ಲಿ ಶೇ 89 ರಷ್ಟು ನೀರು ಸಂಗ್ರಹವಾಗಿದೆ. ಕಬಿನಿ ನೀರಾವರಿ ಸಲಹಾ ಸಮಿತಿ ಸಭೆಯು ಈ ವಾರದಲ್ಲಿ ನಡೆದು ಕಬಿನಿ ಬಲದಂಡೆ, ಎಡದಂಡೆ, ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಮಾಡಲಿವೆ. 
icon

(7 / 7)

ಇತರ ಗ್ಯಾಲರಿಗಳು