Karnataka Rivers: ಕುಂದಾಪುರ ತಾಲ್ಲೂಕಿನ ಸಮುದ್ರದ ಪಕ್ಕದಲ್ಲೇ ಹರಿಯುವ ಸೌಪರ್ಣಿಕಾ ನದಿ: ವಿಶಿಷ್ಟ ನದಿ ನಿಮಗೆಷ್ಟು ಗೊತ್ತು
- ಉಡುಪಿ ಜಿಲ್ಲೆಯಲ್ಲಿ ಹರಿಯುವ ಸೌಪರ್ಣಿಕಾ ನದಿ ಸಮುದ್ರ ತೀರದಲ್ಲಿ ಸೃಷ್ಟಿಸುವ ನೋಟ ವಿಭಿನ್ನವಾದವು. ಈ ನದಿಯ ಕುರಿತಾದ ಚಿತ್ರ ನೋಟ ಇಲ್ಲಿದೆ.
- ಉಡುಪಿ ಜಿಲ್ಲೆಯಲ್ಲಿ ಹರಿಯುವ ಸೌಪರ್ಣಿಕಾ ನದಿ ಸಮುದ್ರ ತೀರದಲ್ಲಿ ಸೃಷ್ಟಿಸುವ ನೋಟ ವಿಭಿನ್ನವಾದವು. ಈ ನದಿಯ ಕುರಿತಾದ ಚಿತ್ರ ನೋಟ ಇಲ್ಲಿದೆ.
(1 / 6)
ಕರಾವಳಿ ಜಿಲ್ಲೆಯಾದ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನಲ್ಲಿ ಮೂಲಕ ಹರಿಯುವ ನದಿ ಸೌಪರ್ಣಿಕಾ.
(2 / 6)
ಸೌಪರ್ಣಿಕಾ ನದಿ ಸೇರಿ ವರಾಹಿ, ಕೇದಕ, ಚಕ್ರ ಮತ್ತು ಕುಬ್ಜಾ ನದಿಗಳನ್ನು ಪಂಚಗಂಗಾವಳಿ ನದಿಗಳೆಂದು ಕರೆಯಲಾಗುತ್ತದೆ. ಇದು ಮಲೆನಾಡಲ್ಲಿ ಹುಟ್ಟಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಅದಕ್ಕೂ ಮುನ್ನ ಸೃಷ್ಟಿಸುವ ದೃಶ್ಯಾವಳಿ ಸುಂದರ.,(photo: Anil Shastri)
(3 / 6)
ಸುಪರ್ಣ ಎಂದು ಕರೆಯಲ್ಪಡುವ ಗರುಡ (ಹದ್ದು) ನದಿಯ ದಡದಲ್ಲಿ ತಪಸ್ಸು ಮಾಡಿ ಮೋಕ್ಷವನ್ನು ಪಡೆದುಕೊಂಡಿತು ಎಂಬ ನಂಬಿಕೆ ಇದ್ದು, ಆ ಹಿನ್ನಲೆಯಲ್ಲಿ ಸೌಪರ್ಣಿಕಾ ಎಂಬ ಹೆಸರು ಬಂದಿದೆ ಎನ್ನುತ್ತವೆ ಇತಿಹಾಸದ ಪುಟಗಳು.
(4 / 6)
ಸೌಪರ್ಣಿಕಾ ಉಡುಪಿ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಬಳಿ ಹರಿಯುತ್ತದೆ ಆದ್ದರಿಂದ ಇದನ್ನು ಕೆಲವರು 'ಕೊಲ್ಲೂರು ನದಿ' ಎಂದು ಸಹ ಕರೆಯುತ್ತಾರೆ. ಕೊಲ್ಲೂರು ಮೂಕಾಂಬಿಕಾ ದೇವಾಲಯದ ಭಕ್ತರು ಇದನ್ನು ತುಂಬಾ ಪವಿತ್ರ ನದಿ ಎಂದು ಪರಿಗಣಿಸಲಾಗುತ್ತದೆ.
(5 / 6)
ಪಶ್ಚಿಮ ಘಟ್ಟಗಳ ಸಾಲಿನ ನಿತ್ಯಹರಿದ್ವರ್ಣದ ದಟ್ಟ ಕಾಡುಗಳಲ್ಲಿ ನದಿಯು ಹರಿಯುವಾಗ 60 ಕ್ಕೂ ಅಧಿಕ ವಿವಿಧ ಔಷಧೀಯ ಸಸ್ಯಗಳ ಬೇರುಗಳಾಳದ ಒಡಲಿಂದ ಹರಿದು ಬರುವ ಕಾರಣ ನದಿಯ ನೀರು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ನಂಬಿಕೆಯಿದೆ.
ಇತರ ಗ್ಯಾಲರಿಗಳು