ಮೈಸೂರು ದಸರಾ: ನಾಳೆ ಅರಮನೆ ನಗರಿಗೆ ಬರಲಿವೆ ಎರಡನೇ ತಂಡದ ಆನೆಗಳು, ತಾಲೀಮಿನಲ್ಲಿ ಭಾಗಿ
- ಮೈಸೂರು ದಸರಾ ಹಿನ್ನೆಲೆಯಲ್ಲಿ, ಎರಡನೇ ತಂಡದ ಆನೆಗಳು ನಾಳೆ(ಸೆಪ್ಟೆಂಬರ್ 5ರ ಗುರುವಾರ) ಮೈಸೂರಿಗೆ ಬರತ್ತವೆ ಎಂದು ಸಚಿವ ಡಾ.ಎಚ್‌ಸಿ ಮಹದೇವಪ್ಪ ಮೈಸೂರಿನಲ್ಲಿ ಹೇಳಿದ್ದಾರೆ. ಈಗಾಗಲೇ ಆನೆಗಳ ಮೊದಲ ತಂಡ ಅರಮನೆ ನಗರಿಗೆ ಆಗಮಿಸಿದ್ದು, ತಾಲೀಮು ನಡೆಸುತ್ತಿವೆ. ನಾಳೆಯಿಂದ ಎರಡನೇ ತಂಡ ಕೂಡಾ ಇಲ್ಲಿರುವ 9 ಆನೆಗಳ ಜೊತೆ ಸೇರಿ ಕೂಡ ತಾಲೀಮು ನಡೆಸಲಿವೆ ಎಂದು ಹೇಳಿದ್ದಾರೆ.

(1 / 5)
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಎರಡನೇ ತಂಡದ ಆನೆಗಳು ಅರಮನೆಗೆ ಬರುತ್ತವೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈಗಾಗಲೇ ದಸರಾ ಆಚರಣೆ ಕುರಿತು ಸಭೆಗಳನ್ನು ಮಾಡುತ್ತಾ ಬರಲಾಗಿದೆ. ಇಂದು ಉಪ ಸಮಿತಿ ಸಭೆಗಳನ್ನು ಮಾಡಿದ್ದೇನೆ. 19 ಉಪ ಸಮಿತಿಗಳ ತಂಡದೊಂದಿಗೆ ಸಭೆ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
(2 / 5)
ಅದ್ದೂರಿ ದಸರಾ ಆಚರಣೆಗೆ ಬೇಕಾದ ಎಲ್ಲಾ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕಳೆದ ಬಾರಿ ಆಗಿರುವ ನ್ಯೂನತೆಗಳನ್ನು ಸರಿ ಪಡಿಸಿಕೊಂಡು ಈ ಬಾರಿ ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲು ಸಿದ್ಧತೆ ನಡೆಯುತ್ತಿದೆ. ಅರಮನೆ ಆವರಣದಲ್ಲಿ ಸಂಜೆ 4 ಗಂಟೆಯಿಂದಲೇ ಸಂಗೀತ ಕಾರ್ಯಕ್ರಮ ನಡೆಯಬೇಕು ಎಂದು ಹೇಳಿರುವುದಾಗಿ ಸಚಿವರ ತಿಳಿಸಿದ್ದಾರೆ.
(3 / 5)
ಸಂಜೆ 4 ರಿಂದ 7 ಗಂಟೆವರೆಗೂ ನಡೆಯುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ದಸರಾ ಉದ್ಘಾಟಕರನ್ನು ತೀರ್ಮಾನ ಮಾಡುವುದನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಮಹದೇವಪ್ಪ ಹೇಳಿಕೆ.
(4 / 5)
ಇದೇ ವೇಳೆ ಮುಖ್ಯಮಂತ್ರಿ ಖುರ್ಚಿ ಮೇಲೆ ಕಾಂಗ್ರೆಸ್ ನಾಯಕರು ಕಣ್ಣಿಟ್ಟಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಖಾಲಿ ಇದ್ದರೆ ಈ ಬಗ್ಗೆ ಹೇಳಬೇಕು. ಈಗ ಸಿಎಂ ಖುರ್ಚಿ ಖಾಲಿ ಇಲ್ಲ, ಖಾಲಿ ಆಗುವುದೂ ಇಲ್ಲ ಎಂದು ತಿಳಿಸಿದ್ದಾರೆ.
ಇತರ ಗ್ಯಾಲರಿಗಳು