ಸೋಮೇಶ್ವರ ಕಡಲ ಕಿನಾರೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ; 3000ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೋಮೇಶ್ವರ ಕಡಲ ಕಿನಾರೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ; 3000ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆ

ಸೋಮೇಶ್ವರ ಕಡಲ ಕಿನಾರೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ; 3000ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆ

  • ಮಂಗಳೂರು: ಮಂಗಳೂರು ಹೊರವಲಯದ ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಕಣ್ಣೂರು ಜಿಲ್ಲೆ ಈ ಕಾರ್ಯಕ್ರಮಕ್ಕೆ ಕರೆ ನೀಡಿತ್ತು.

ಸಂಜೆ 4 ಗಂಟೆಯಿಂದ ಸೂರ್ಯಾಸ್ತದವರೆಗೆ 6 ಬಾರಿ ಶ್ರೀ ವಿಷ್ಣು ನಾಮ ಸ್ತೋತ್ರ ಪಠಣ ಮಾಡಿ ಕೊನೆಗೆ ಓಂ ನಮೋ ವಾಸುದೇವಾಯ ನಮಃ  ಮಂತ್ರದ ಮೂಲಕ ಸಮಾಪನಗೊಂಡಿತು.
icon

(1 / 8)

ಸೋಮೇಶ್ವರ ದೇವಾಲಯದ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ ಮೂರ್ಕಜೆ ಗುರುಕುಲದ ಪ್ರಮುಖರಾದ ಸೀತಾರಾಮ ಕೆದಿಲಾಯರು ಮಾತನಾಡಿದರು. 
icon

(2 / 8)

ವಿನಮ್ರತೆಯಿಂದ ಪ್ರಕೃತಿ ಮಾತೆಯಲ್ಲಿ ಪ್ರಾರ್ಥನೆ ಮಾಡುವುದರಿಂದ ಪ್ರಕೃತಿ ವಿಕೋಪ ಮೊದಲಾದ ಸಂಕಷ್ಟಗಳು ದೂರವಾಗುತ್ತವೆ. ಸಮುದ್ರ ಕೊರೆತವನ್ನು  ತಡೆಯುವಂತೆ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಮಾಡಿರುವುದು ಸಕಾಲಿಕವಾಗಿದೆ ಎಂದರು.
icon

(3 / 8)

ಸಮಸ್ತ ಸಮಾಜ, ಭಾರತ ದೇಶ ಒಳಿತಾಗುವಂತೆ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದರಿಂದ ವಿಶ್ವಕ್ಕೇ ಒಳಿತಾಗುವುದು ಎಂದರು.
icon

(4 / 8)

ಕೇಂದ್ರ ಸಮಿತಿ ಸಂಯೋಜಕ ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
icon

(5 / 8)

ಪುತ್ತೂರು ತಾಲೂಕು ಸಂಚಾಲಕರಾದ ಚಂದ್ರಶೇಖರ ಆಳ್ವ , ಸದಾನಂದ ರಾವ್, ಉಳ್ಳಾಲ ತಾಲೂಕು ಸಂಚಾಲಕ ರವಿ ಮಂಜನಾಡಿ , ಬೆಳ್ತಂಗಡಿ ತಾಲೂಕು ಸಂಯೋಜಕ  ಗಣೇಶ ಭಟ್ ಪುತ್ರೋಟು , ಜಿಲ್ಲಾ ಸಂಚಾಲಕ ಫ್ರೊ. ವೇದವ್ಯಾಸ ರಾಮಕುಂಜ  ನೇತೃತ್ವ ವಹಿಸಿದ್ದರು. 
icon

(6 / 8)

(7 / 8)

ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಮಂಗಳೂರು, ಉಳ್ಳಾಲ ತಾಲೂಕುಗಳಿಂದ ಸಹಸ್ರಾರು ಮಂದಿ ಸೇರಿ ವಿಷ್ಣು ಸಹಸ್ರನಾಮ ಪಠಣ ಮಾಡಿದರು.
icon

(8 / 8)

ಇತರ ಗ್ಯಾಲರಿಗಳು