ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಶಿರಸಿಯ ಶಗುಫ್ತಾ ಅಂಜುಮ್ ಯಾರು, ಇಲ್ಲಿದೆ ಚಿತ್ರನೋಟ
ಶಗುಫ್ತಾ ಅಂಜುಮ್ ಯಾರು: ಕರ್ನಾಟಕ ಎಸ್‌ಎಸ್‌ಎಲ್‌ಸಿ 2025ರ ಫಲಿತಾಂಶ ಪ್ರಕಟವಾಗಿದೆ. 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು ರಾಜ್ಯದ ಟಾಪರ್‌ಗಳಾಗಿ ಹೊರಹೊಮ್ಮಿದ್ದು, ಈ ಪೈಕಿ ಶಿರಸಿಯ ಶಗುಫ್ತಾ ಅಂಜುಮ್ ಅವರದ್ದು ವಿಶೇಷ ಸಾಧನೆ. ಶಗುಫ್ತಾ ಅಂಜುಮ್ ಯಾರು, ಇಲ್ಲಿದೆ ಚಿತ್ರನೋಟ.
(1 / 7)
ಶಿರಸಿ ನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣಾಂಕ (625/625) ಪಡೆದು 22 ಟಾಪರ್‌ಗಳ ಪೈಕಿ ಒಬ್ಬರಾಗಿ ಸಾಧನೆ ಮಾಡಿದ್ಧಾರೆ. ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಈ ರೀತಿ ಸಾಧನೆ ತೋರಿರುವುದು ಎಲ್ಲರ ಗಮನಸೆಳೆದಿದ್ದು, ಶಗುಫ್ತಾ ಅಂಜುಮ್ ಯಾರು ಎಂಬ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿದೆ ಅವರ ಕಿರುಪರಿಚಯದ ಚಿತ್ರನೋಟ.
(2 / 7)
ಬಿಹಾರ ಮೂಲದ ಶಗುಫ್ತಾ ಅಂಜುಮ್ ಕಳೆದ 5 ವರ್ಷಗಳಿಂದ ಶಿರಸಿಯ ಸರ್ಕಾರ ಉರ್ದು ಶಿಕ್ಷಣ ಸಂಸ್ಥೆಯ ಪ್ರಾಥಮಿಕ,ಪ್ರೌಢಶಾಲೆಯ ವಿದ್ಯಾರ್ಥಿನಿ. ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ ಮೌಲಾನಾ ಅವರ ಪುತ್ರಿ. ಶಗುಫ್ತಾ ಸಾಧನೆಯ ಕಾರಣ ಶಾಲೆಯ ಶಿಕ್ಷಕ ವೃಂದದ ಸಂಭ್ರಮಿಸಿದ್ದು, ವಿದ್ಯಾರ್ಥಿನಿಗೆ ಶಾಲು ಹೊದೆಸಿ ಗೌರವಿಸಿದರು.
(3 / 7)
ಶಗುಫ್ತಾ ಅಂಜುಮ್ ಶಿರಸಿ ನಗರದ ಹೊರವಲಯದ ಟಿಪ್ಪುನಗರ ನಿವಾಸಿಯಾಗಿದ್ದು, ಪೂರ್ಣಾಂಕ ಸಾಧನೆ ಕುರಿತು ಸುದ್ದಿಗಾರರ ಜತೆಗೆ ಮಾತನಾಡುತ್ತ ಸಂಭ್ರಮ ಹಂಚಿಕೊಂಡಿದ್ದಾರೆ.
(4 / 7)
ಶಾಲೆಯ ಶಿಕ್ಷಕ ವೃಂದದ ಬೆಂಬಲ ಇಲ್ಲದೇ ಇದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ರಂಜಾನ್ ಸಮಯದಲ್ಲೂ ವಿಶೇಷ ತರಗತಿ ನಡೆಸಿ ಮಾರ್ಗದರ್ಶನ ಮಾಡಿದ್ದರು. ಕಠಿಣ ಪರಿಶ್ರಮವೇ ಈ ಸಾಧನೆಗೆ ಕಾರಣ ಎಂದು ಶಗುಫ್ತಾ ಹೇಳಿದರು
(5 / 7)
ಭವಿಷ್ಯದ ಕನಸುಗಳನ್ನು ಹಂಚಿಕೊಂಡ ಶಗುಫ್ತಾ ಅಂಜುಮ್, ಪಿಯುಸಿಯಲ್ಲಿ ವಿಜ್ಞಾನ ತಗೊಂಡು ಉತ್ತಮ ಸಾಧನೆ ಮಾಡಿ ಭವಿಷ್ಯದಲ್ಲಿ ವೈದ್ಯೆಯಾಗಬೇಕು ಎಂಬ ಕನಸು ಕಾಣುತ್ತಿದ್ದೇನೆ ಎಂದು ಹೇಳಿದರು.
(6 / 7)
ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಆನಂದ ಕೊರವರ ಮಾತನಾಡುತ್ತ, ಶಗುಫ್ತಾ ಅಂಜುಮ್ ಆರಂಭದಿಂದಲೂ ಶೈಕ್ಷಣಕವಾಗಿ ಉತ್ತಮ ಸಾಧನೆ ತೋರುತ್ತ ಬಂದಿದ್ದು, ಆಕೆಗೆ ರ‍್ಯಾಂಕ್ ಬರಬಹುದು ಎಂಬ ವಿಶ್ವಾಸವಿತ್ತು. ಆಕೆಯ ಪರಿಶ್ರಮದ ಫಲವಾಗಿ ಪೂರ್ಣಾಂಕ ಬಂದಿದೆ. ರಾಜ್ಯಕ್ಕೆ ಟಾಪರ್ ಆಗಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಇತರ ಗ್ಯಾಲರಿಗಳು









