Kumbh Mela 2025: ತಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭ ಮೇಳಕ್ಕೆ ಚಾಲನೆ, ನಡುಹೊಳೆ ಬಸವೇಶ್ವರ ಮೂರ್ತಿ ಬಳಿ ಪೂಜೆ ಸಲ್ಲಿಕೆ- ಚಿತ್ರನೋಟ
Kumbh Mela 2025: ಐತಿಹಾಸಿಕ, ದಕ್ಷಿಣ ಭಾರತದ ಪ್ರಮುಖ ಕುಂಭ ಮೇಳಕ್ಕೆ ಇಂದು ಚಾಲನೆ ಸಿಕ್ಕಿದೆ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರದ ವೇಣಿ ಸಂಗಮದಲ್ಲಿ ಕುಂಭ ಮೇಳ ಶುರುವಾಗಿದ್ದು, ನಡುಹೊಳೆ ಬಸವೇಶ್ವರ ಮೂರ್ತಿ ಬಳಿ ಪೂಜೆ ಸಲ್ಲಿಸಿ ಮೇಳಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿದೆ ಚಿತ್ರನೋಟ.
(1 / 12)
ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ (ಟಿ ನರಸೀಪುರ)ದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ ಮೂರು ದಿನ ಕುಂಭ ಮೇಳದ ಸಂಭ್ರಮ. ಇಂದು (ಫೆ.10) ಐತಿಹಾಸಿಕ ಕುಂಭ ಮೇಳಕ್ಕೆ ಚಾಲನೆ ಸಿಕ್ಕಿದೆ. 13ನೇ ಕುಂಭಮೇಳಕ್ಕೆ ವಿವಿಧ ಮಠಾಧೀಶರು ಚಾಲನೆ ನೀಡಿದ್ದು, ಸಂಭ್ರಮದ ಚಿತ್ರನೋಟ ಇಲ್ಲಿದೆ.
(2 / 12)
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ತಿ ನರಸೀಪುರದ ಕುಂಭ ಮೇಳಕ್ಕೆ ಚಾಲನೆ ನೀಡಿದರು.
(3 / 12)
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪೂಜಾ ಕೈಂಕರ್ಯಗಳು ನಡೆದವು.
(4 / 12)
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಕನಕಗುರು ಮಠದ ನಿರಂಜನಾನಂದಪುರಿ ಸ್ವಾಮೀಜಿ, ಕೈಲಾಸನಂದ ಮಠದ ಜಯೇಂದ್ರಪುರಿ ಸ್ವಾಮಿಗಳಿಂದ ಪೂಜಾ ಕೈಂಕರ್ಯಗಳು ನೆರವೇರಿಸಿದರು.
(5 / 12)
ತಿರಮಕೂಡಲು ನರಸೀಪುರದ ತ್ರಿವೇಣಿ ಸಂಗಮ ಎಂದರೆ ಅದು ಪವಿತ್ರ ನದಿಗಳಾದ ಕಾವೇರಿ-ಕಪಿಲಾ ನದಿಗಳ ಜತೆಗೆ ಸ್ಪಟಿಕ ಸರೋವರದ ಸಂಗಮ ತಾಣ.
(6 / 12)
ತ್ರಿವೇಣಿ ಸಂಗಮದಲ್ಲಿ ನದಿಯ ಮಧ್ಯ ಭಾಗದಲ್ಲಿರುವ ನಡುಹೊಳೆ ಬಸವೇಶ್ವರ ಮೂರ್ತಿಯ ಬಳಿಗೆ ದೋಣಿ ಮೂಲಕ ತೆರಳಿದ ಸ್ವಾಮೀಜಿಗಳು ಅಲ್ಲಿ ಪೂಜೆ ಸಲ್ಲಿಸಿದರು
(7 / 12)
ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸುತ್ತೂರು ಶ್ರೀಗಳು ಹಾಗೂ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥಸ್ವಾಮೀಜಿಯವರು ಕುಂಭಮೇಳ ಪ್ರಾರಂಭ ಮಾಡಿದರು.
(9 / 12)
ಗಂಗಾರತಿ ಮಾದರಿಯಲ್ಲಿ ಇಲ್ಲೂ ಕೂಡ ಕಾವೇರಿ ಆರತಿ ನಾಳೆ ನಡೆಯಲಿದೆ. ಮಾಘ ಮಾಸದ ಪೂರ್ಣಿಮೆಯ ಮೂರು ದಿನ ಪುಣ್ಯಸ್ನಾನಕ್ಕೆ ಪ್ರಶಸ್ತ ದಿನ. ಸಹಸ್ರಾರು ಭಕ್ತರು ಪುಣ್ಯಸ್ನಾನದಲ್ಲಿ ಭಾಗಿಯಾಗಲಿದ್ದಾರೆ.
(10 / 12)
ಭಕ್ತರು ಕುಂಭ ಮೇಳಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡಬಹುದು. ಮಾಘ ಪೂರ್ಣಿಮೆಯ ಸಮೀಪದ ಮೂರು ದಿನ ಪುಣ್ಯಸ್ನಾನಕ್ಕೆ ಪ್ರಶಸ್ತ ದಿನ ಎಂದು ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ತಿಳಿಸಿದ್ದಾರೆ.
(11 / 12)
ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಮೊದಲ ದಿನವೇ ಹಲವಾರು ಭಕ್ತರು ಪವಿತ್ರಸ್ನಾನ ಮಾಡಿದರು.
ಇತರ ಗ್ಯಾಲರಿಗಳು