ಕರ್ನಾಟಕ ಲಾರಿ ಮುಷ್ಕರ: 5 ಬೇಡಿಕೆ ಈಡೇರಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಲಾರಿ ಮಾಲೀಕರು, ಮೈಸೂರು ಪ್ರತಿಭಟನೆಯ ಚಿತ್ರನೋಟ
Karnataka Truckers Indefinite Strike: ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ ಕರ್ನಾಟಕದಾದ್ಯಂತ ಲಾರಿ ಮಾಲೀಕರು, ಚಾಲಕರು ಸೋಮವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಶುರುಮಾಡಿದ್ದಾರೆ. ಮೈಸೂರಿನಲ್ಲಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರನೋಟ ಇಲ್ಲಿದೆ.
(1 / 8)
ಕರ್ನಾಟಕದಲ್ಲಿ ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ, ಅಂದಾಜು 6 ಲಕ್ಷ ಲಾರಿಗಳ ಸಂಚಾರ ಸ್ಥಗಿತವಾಗಿದೆ. ಮೈಸೂರು ಜಿಲ್ಲೆಯಲ್ಲಿ ಈ ಮುಷ್ಕರಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು, ಸುಮಾರು 9000 ಗೂಡ್ಸ್ ಲಾರಿಗಳ ಓಡಾಟ ಸ್ಥಗಿತವಾಗಿದೆ.
(2 / 8)
ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ಹೇರಲಾಗಿದ್ದು, ಲಾರಿ ಮಾಲೀಕರು ಹಾಗೂ ಚಾಲಕರು ಕೂಡ ಇದಕ್ಕೆ ಸ್ಪಂದಿಸಿದ್ದಾರೆ. ಈ ನಡುವೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆಗೆ ಲಾರಿ ಚಾಲಕ, ಮಾಲೀಕರ ಸಂಘದ ಪ್ರತಿನಿಧಿಗಳ ಸಭೆ ನಡೆದಿದ್ದು, ಕೆಲವು ಬೇಡಿಕೆ ಈಡೇರಿಸಲು ಸಚಿವರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
(3 / 8)
ಡೀಸೆಲ್ ದರ ಕಡಿಮೆ ಮಾಡಬೇಕು, ಟೋಲ್ ದರ ರದ್ದುಗೊಳಿಸಬೇಕು, ಆರ್‌ಟಿಒ ಗಡಿ ಚೆಕ್ ಪೋಸ್ಟ್ ರದ್ದುಗೊಳಿಸಬೇಕು, ಎಫ್‌ಸಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವತೆ ಒತ್ತಾಯಿಸಿ ಲಾರಿ ಮಾಲೀಕರು ಹಾಗೂ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ.
(4 / 8)
ಮೈಸೂರಿನ ಬನ್ನಿಮಂಟಪದ ಗೂಡ್ಸ್ ಶೆಡ್ ಬಳಿ ಲಾರಿಗಳು ರಸ್ತೆಗಿಳಿಯದೇ ಹಾಗೆ ನಿಂತಿದ್ದು, ಲಾರಿ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು.
(5 / 8)
ಗೂಡ್ಸ್ ರೈಲಿನಲ್ಲಿ ಬಂದಿರುವ ರೈತರ ರಸ ಗೊಬ್ಬರವನ್ನು ಕೂಡ ಅನ್ ಲೋಡ್ ಮಾಡದೇ ಲಾರಿ ಚಾಲಕರು ಹಾಗೂ ಮಾಲೀಕರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
(6 / 8)
ತಮ್ಮ ಬೇಡಿಕೆಗಳು ಈಡೇರುವವರಗೂ ಸೇವೆ ಆರಂಭಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಲಾರಿ ಮಾಲೀಕರು ಮತ್ತು ಚಾಲಕರು ಪ್ರತಿಭಟನೆ ನಡೆಸಿದರು.
(7 / 8)
ಮೈಸೂರು ಲಾರಿ ಮಾಲೀಕರು ಮತ್ತು ಚಾಲಕರ ಒಕ್ಕೂಟದಿಂದ ಮುಷ್ಕರಕ್ಕೆ ಸಂಪೂರ್ಣ ಬೆಂಬಲ. ಲಾರಿ ಮಾಲೀಕರು, ಚಾಲಕರಿಂದ ಸಭೆ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಲು ನಿರ್ಧಾರ ಮಾಡಿದ್ದಾರೆ.
ಇತರ ಗ್ಯಾಲರಿಗಳು