MM Hills Ugadi 2025: ಮಾದಪ್ಪನ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಭಕ್ತರ ಸಡಗರ, ನಾಳೆಯಿಂದ ಆರಂಭ ಹೇಗಿದೆ ಸಿದ್ದತೆ
- MM Hills Ugadi 2025: ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೈಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 27ರಿಂದಲೇ ಯುಗಾದಿ ಜಾತ್ಸಾ ಮಹೋತ್ಸವ, ರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಗುರುವಾರದಿಂದ ಚಟುವಟಿಕೆ ಶುರುವಾಗಲಿವೆ.
- MM Hills Ugadi 2025: ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೈಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 27ರಿಂದಲೇ ಯುಗಾದಿ ಜಾತ್ಸಾ ಮಹೋತ್ಸವ, ರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಗುರುವಾರದಿಂದ ಚಟುವಟಿಕೆ ಶುರುವಾಗಲಿವೆ.
(1 / 8)
ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಮಲೈ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು. ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
(2 / 8)
ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುಗಾದಿ ಜಾತ್ರೆಗೆ ಭಕ್ತರು ಬರುವುದರಿಂದ ಭಾರೀ ಭದ್ರತೆ ಸಹಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
(3 / 8)
ಮಲೈ ಮಹದೇಶ್ವರ ಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜಾತ್ರೆ ಕಾರಣದಿಂದ ಮಾಹಿತಿ ಕೇಂದ್ರ ಆರಂಭಿಸಿ ಭಕ್ತರಿಗೆ ಮಾಹಿತಿ ಒದಗಿಸಲಾಗುತ್ತಿದೆ.
(4 / 8)
ಮಲೈ ಮಹದೇಶ್ವರ ಬೆಟ್ಟಕ್ಕೆ ಕೆಲವರು ಮೆಟ್ಟಿಲುಗಳನ್ನು ಏರಿ ಆಗಮಿಸುತ್ತಾರೆ, ಬಿಸಿಲನ್ನೂ ಲೆಕ್ಕಿಸದೇ ಭಕ್ತರು ಬೆಟ್ಟಕ್ಕೆ ಬರುವ ಸಂಪ್ರದಾಯವಿದೆ.
(5 / 8)
ಬೆಟ್ಟದಲ್ಲಿ ದೀಪಾಲಂಕಾರ ಸಹಿತ ಭಕ್ತರನ್ನು ಆಕರ್ಷಿಸಲು ವಿವಿಧ ಚಟುವಟಿಕೆಗಳು ನಡೆದಿವೆ. ಭಾನುವಾರದವರಗೂ ಯುಗಾದಿ ಜಾತ್ರಾ ಮಹೋತ್ಸವ ಬೆಟ್ಟದಲ್ಲಿ ಇರಲಿದೆ.
(7 / 8)
ಈಗಾಗಲೇ ಯುಗಾದಿ ಜಾತ್ರಾ ಮಹೋತ್ಸವೂ ಸೇರಿದಂತೆ ನಾನಾ ಧಾರ್ಮಿಕ ಚಟುವಟಿಕೆಗಳು ಬೆಟ್ಟದಲ್ಲಿ ನಡೆದಿವೆ. ಇದಕ್ಕಾಗಿ ಮಲೈಮಹದೇಶ್ವರ ಸ್ವಾಮಿಗೆ ಅಲಂಕಾರಗಳು ನಡೆದಿವೆ.
ಇತರ ಗ್ಯಾಲರಿಗಳು