ಮಂಗಳೂರು ಲಿಟ್ ಫೆಸ್ಟ್ ಉದ್ಘಾಟಿಸಿದ ಸಾಹಿತಿ ಎಸ್‌ಎಲ್ ಭೈರಪ್ಪ; ವೈವಿಧ್ಯಮಯ ಸಾಹಿತ್ಯ ಕಾರ್ಯಕ್ರಮ
- ಮಂಗಳೂರು: ಸಾಹಿತ್ಯವನ್ನು ಯುವಜನರಿಗೆ ತಲುಪಿಸುವ ಉದ್ದೇಶವಿಟ್ಟುಕೊಂಡು, ಮಂಗಳೂರು ಲಿಟ್ ಫೆಸ್ಟ್‌ಗೆ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಶನಿವಾರ (ಜನವರಿ 11) ಚಾಲನೆ ನೀಡಿದರು. ಕಾರ್ಯಕ್ರಮಗಳು ಎರಡು ಸಭಾಂಗಣದಲ್ಲಿ ಸಮಾನ ಹೊತ್ತಿನಲ್ಲಿ ನಡೆಯಿತು.
- ಮಂಗಳೂರು: ಸಾಹಿತ್ಯವನ್ನು ಯುವಜನರಿಗೆ ತಲುಪಿಸುವ ಉದ್ದೇಶವಿಟ್ಟುಕೊಂಡು, ಮಂಗಳೂರು ಲಿಟ್ ಫೆಸ್ಟ್‌ಗೆ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಶನಿವಾರ (ಜನವರಿ 11) ಚಾಲನೆ ನೀಡಿದರು. ಕಾರ್ಯಕ್ರಮಗಳು ಎರಡು ಸಭಾಂಗಣದಲ್ಲಿ ಸಮಾನ ಹೊತ್ತಿನಲ್ಲಿ ನಡೆಯಿತು.
(1 / 9)
ಮೊದಲನೇ ಸಭಾಂಗಣದಲ್ಲಿ ಬೆಳಗ್ಗೆ ಉದಯರಾಗದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಜಿತ್ ಸರಳಾಯ ಕಾರ್ಯಕ್ರಮ ನೀಡಿದರು. ಬಳಿಕ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು
(2 / 9)
'Energy for Survival – Security and Climate' ಎಂಬ ವಿಷಯದ ಕುರಿತು ಹರ್ದೀಪ್ ಸಿಂಗ್ ಪುರಿ ವಿಚಾರ ಮಂಡಿಸಿದರು. ಡಾ. ನಂದಕಿಶೋರ್ ಎಂ.ಎಸ್ ಅವರು ಸಂವಾದ ನಿರ್ವಹಿಸಿದರು. ವಿಕ್ರಮ್ ಸೂದ್ ಅವರು 'Art and Craft of Building and Dismantling narratives' ಕುರಿತು ವಿಚಾರ ಮಂಡಿಸಿದರು.
(3 / 9)
ಮಧ್ಯಾಹ್ನ ಸಂಸ್ಕೃತಯಾನಂ ಎಂಬ ಕಾರ್ಯಕ್ರಮದಲ್ಲಿ ಸಮಸ್ಠಿ ಗುಬ್ಬಿ, ಡಾ.ಎಚ್.ಆರ್.ವಿಶ್ವಾಸ್, ಡಾ.ಶಂಕರ ರಾಜಾರಾಮನ್ ವಿಚಾರ ಮಂಡಿಸಿದರು. ಎಕನಾಮಿಕ್ ಚಾಲೆಂಜ್, ಯುನಿವರ್ಸಲ್ ವೆಲ್‌ಫೇರ್ ವಿಷಯದ ಕುರಿತು ಸಂಜೀವ ಸಾನ್ಯಾಲ್ ವಿಚಾರ ಮಂಡಿಸಿದರು.
(4 / 9)
ಗ್ರ್ಯಾಜುವೇಟಿಂಗ್ ದಿ ಎಜುಕೇಶನಲ್ ಪಾಲಿಸಿ ಕುರಿತು ಡಾ.ಸಂತಿಶ್ರೀ ಧುಲಿಪುಡಿ ಪಂಡಿತ್, ಡಾ. ವಿನಯ್ ಸಹಸ್ರಬುದ್ಧೆ ಮಾತನಾಡಿದರು. ಡೆಮಾಕ್ರೆಸಿ ಆಂಡ್ ಡೆಮಾಕ್ರೆಟಿಕ್ ಗವರ್ನೆನ್ಸ್ ಕುರಿತು ಕೆ.ಅಣ್ಣಾಮಲೈ ವಿಚಾರ ಮಂಡಿಸಿದರು.
(5 / 9)
ಕನ್ನಡ ಸಾಹಿತ್ಯ ವಿಮರ್ಶೆ ಒಂದು ಅಕಾಡೆಮಿಕ್ ಚರ್ಚೆ ವಿಷಯದಲ್ಲಿ ಜಿ.ಎಸ್.ಅಮೂರ, ಶತಮಾನದ ನೆನಪು ಕುರಿತು ಡಾ. ಜಿ.ಬಿ.ಹರೀಶ, ಡಾ.ಎನ್.ಎಸ್.ಗುಂಡೂರ, ಡಾ.ಶ್ಯಾಮಸುಂದರ ಬಿದರಕುಂದಿ ವಿಚಾರ ಮಂಡಿಸಿದರು. ಪತ್ರಿಕೋದ್ಯಮ ಮತ್ತು ಸಾಹಿತ್ಯ-ಒಂದು ಹರಟೆ ಎಂಬ ವಿಷಯದಲ್ಲಿ ಜೋಗಿ ಮತ್ತು ರವಿ ಹೆಗಡೆ ಮಾತನಾಡಿದರು.
(6 / 9)
ಹಳ್ಳಿಯನ್ನು ಕಟ್ಟುವ ಕಷ್ಟ ಸುಖ ಕುರಿತು ಶಿವಾನಂದ ಕಳವೆ, ಡಾ.ಪ್ರಕಾಶ ಭಟ್ ಮಾತನಾಡಿದರೆ, ಸಿನಿಮೀಯ, ಸಿನಿಕೀಯ ಪುಸ್ತಕ ಬಿಡುಗಡೆ ಮತ್ತು ಚರ್ಚೆಯೂ ನಡೆಯಿತು. ಅರುಣ್ ಭಾರಧ್ವಾಜ್ ಮತ್ತು ಪ್ರಕಾಶ್ ಬೆಳವಾಡಿ ಭಾಗವಹಿದ್ದರು.
(7 / 9)
ಮೊದಲ ದಿನ ಹರಟೆಕಟ್ಟೆಯಲ್ಲಿ ವಂದನಾ ರೈ ಕಾರ್ಕಳ ಚಿಲಿಪಿಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಶಶಿರಾಜ್ ಕಾವೂರು ಸಂವಹನಕಾರರಾಗಿ ಡಾ. ತುಕಾರಾಮ ಪೂಜಾರಿ ಅವರು ತುಳು ಸಾಹಿತ್ಯ, ಆಳ-ಅಗಲ, ಆವಿಷ್ಕಾರ ಕುರಿತು ಮಾತನಾಡಿದರು.
(8 / 9)
ಸೈಟ್ ಆಂಡ್ ಇನ್ಸೈಟ್ ಕುರಿತು ಡಾ. ಮಲ್ಲಪ್ಪ ಭಂಡಿ, ಡಿ.ಐಶ್ವರ್ಯ ಮಾತನಾಡಿದರು. ಗುರುದತ್ ಶತಮಾನೋತ್ಸವ ಸ್ಮರಣೆ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ, ಸಂವಾದ – ಥ್ಯಾಂಕ್ಯೂ ಗುರುದತ್ ಎಂಬ ವಿಷಯದಲ್ಲಿ ಲತಾ ಜಗತಿಯಾನಿ, ಪ್ರಕಾಶ್ ಬೆಳವಾಡಿ ಮಾತನಾಡಿದರು.
ಇತರ ಗ್ಯಾಲರಿಗಳು