Karthika Deepa: ಅಪ್ಪಿತಪ್ಪಿಯೂ ಈ ರೀತಿ ಕಾರ್ತಿಕ ದೀಪ ಹಚ್ಚಬೇಡಿ, ಅದು ಅಶುಭ
- Kartika Deepam: ಕಾರ್ತಿಕ ಮಾಸವು ಅತ್ಯಂತ ಮಂಗಳಕರ ಮಾಸವಾಗಿದೆ. ಕಾರ್ತಿಕ ದೀಪವನ್ನು ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಹಾಗೆ ಮಾಡಿದರೆ ಅಶುಭ ಎಂದು ಪರಿಗಣಿಸಲಾಗುವುದು. ಯಾವ ತಪ್ಪುಗಳನ್ನು ಮಾಡಬಾರದು ಎಂದು ಅರಿಯೋಣ..
- Kartika Deepam: ಕಾರ್ತಿಕ ಮಾಸವು ಅತ್ಯಂತ ಮಂಗಳಕರ ಮಾಸವಾಗಿದೆ. ಕಾರ್ತಿಕ ದೀಪವನ್ನು ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಹಾಗೆ ಮಾಡಿದರೆ ಅಶುಭ ಎಂದು ಪರಿಗಣಿಸಲಾಗುವುದು. ಯಾವ ತಪ್ಪುಗಳನ್ನು ಮಾಡಬಾರದು ಎಂದು ಅರಿಯೋಣ..
(1 / 6)
ಹಿಂದೂ ಧರ್ಮದಲ್ಲಿ ದೀಪವನ್ನು ಹಚ್ಚುವುದಕ್ಕೆ ಬಹಳ ಪ್ರಾತಿನಿಧ್ಯ ನೀಡಲಾಗಿದೆ. ಪ್ರತಿಯೊಂದು ಹಬ್ಬಕ್ಕೂ ದೀಪಗಳಿರುತ್ತವೆ. ಅದರಲ್ಲಿಯೂ ದೀಪ ಬೆಳಗಿಸಲು ಕಾರ್ತಿಕ ಮಾಸ ಬಹಳ ಪವಿತ್ರವಾದುದು.
(2 / 6)
ಕಾರ್ತಿಕ ದೀಪ ಹಚ್ಚುವುದಕ್ಕೆ ಸರಿಯಾದ ನಿಯಮವಿದೆ. ಎಲ್ಲರಿಗೂ ಈ ನಿಯಮ ತಿಳಿದಿರುವುದಿಲ್ಲ. ಆದ್ದರಿಂದ ಕೆಲವರು ದೀಪವನ್ನು ಬೆಳಗಿಸುವಾಗ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪಿನಿಂದಾಗಿ ದೀಪ ಹಚ್ಚಿದರೂ ಅದರ ಸಂಪೂರ್ಣ ಲಾಭ ಸಿಗುವುದಿಲ್ಲ.
(3 / 6)
ಹಳೆಯ ಬತ್ತಿ-ಎಣ್ಣೆ ಇರುವ ದೀಪ ಬೆಳಗಿಸಬಾರದು. ದೀಪ ಶುಭ್ರವಾಗಿರಬೇಕು. ಹಳೆಯ ದೀಪವನ್ನು ಸಂಪೂರ್ಣವಾಗಿ ನೀರಿನಿಂದ ಸ್ವಚ್ಛಗೊಳಿಸಿ ನಂತರ ಬಳಸಬೇಕು.
(4 / 6)
ದೀಪವನ್ನು ಬೆಳಗಿಸಲು ಹಿತ್ತಾಳೆ, ತಾಮ್ರ ಮತ್ತು ಮಣ್ಣಿನ ಹಣತೆ ಅಥವಾ ದೀಪವನ್ನು ಮಾತ್ರ ಬಳಸಬೇಕು. ಇದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಇತರ ಲೋಹಗಳಿಂದ ಮಾಡಿದ ದೀಪಗಳನ್ನು ಬಳಸಬೇಡಿ. ಯಾವುದೇ ಪ್ರಯೋಜನವಾಗುವುದಿಲ್ಲ.
(5 / 6)
ಹಿತ್ತಾಳೆಯ ದೀಪದಲ್ಲಿ ದೀಪವನ್ನು ಹಚ್ಚುವಾಗ ಬತ್ತಿ, ತುಪ್ಪ, ಎಣ್ಣೆ, ಅರಿಶಿಣ ಅಕ್ಕಿ ಮತ್ತು ಹೂವಿನ ದಳಗಳನ್ನು ಹಾಕಿ ದೀಪವನ್ನು ಹಚ್ಚಿ.
ಇತರ ಗ್ಯಾಲರಿಗಳು