ಇತಿಹಾಸ ನಿರ್ಮಿಸಿದ ಕರುಣ್ ನಾಯರ್; ಎರಡು ಅರ್ಧಶತಕಗಳ ಅಂತರದ ವಿಶ್ವದಾಖಲೆ
- ಐಪಿಎಲ್ 2025ರ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 12 ಬೌಂಡರಿ, 5 ಸಿಕ್ಸರ್ಗಳು ಸೇರಿವೆ. ಇದರೊಂದಿಗೆ ಅವರು ದಾಖಲೆ ನಿರ್ಮಿಸಿದ್ದಾರೆ.
- ಐಪಿಎಲ್ 2025ರ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 12 ಬೌಂಡರಿ, 5 ಸಿಕ್ಸರ್ಗಳು ಸೇರಿವೆ. ಇದರೊಂದಿಗೆ ಅವರು ದಾಖಲೆ ನಿರ್ಮಿಸಿದ್ದಾರೆ.
(1 / 7)
2022ರ ನಂತರ ಐಪಿಎಲ್‌ನಲ್ಲಿ ಕಣಕ್ಕಿಳಿದು ಅಬ್ಬರಿಸಿದ ಕರುಣ್ ನಾಯರ್ 2025ರ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಸ್ಮರಣೀಯ ಇನ್ನಿಂಗ್ಸ್ ಕಟ್ಟುವುದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ.
(HT_PRINT)(2 / 7)
ಐಪಿಎಲ್ 2025ರ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 12 ಬೌಂಡರಿ, 5 ಸಿಕ್ಸರ್ಗಳು ಸೇರಿವೆ. ಇದು 2018ರ ನಂತರ ಸಿಡಿಸಿದ ಫಿಫ್ಟಿ.
(AFP)(3 / 7)
ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ರನ್ ಮಳೆ ಸುರಿಸಿರುವ ಕನ್ನಡಿಗ ಐಪಿಎಲ್‌ನಲ್ಲೂ ತಮ್ಮ ಫಾರ್ಮ್ ಮುಂದುವರೆಸಿದ್ದಾರೆ. 2022ರ ನಂತರ ಇದು ಅವರ ಮೊದಲ ಐಪಿಎಲ್ ಪಂದ್ಯವಾಗಿತ್ತು.
(AFP)(4 / 7)
2018ರ ಸೀಸನ್ನಲ್ಲಿ 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕರುಣ್, 2019ರಲ್ಲಿ ಒಂದು ಪಂದ್ಯ, 2020ರಲ್ಲಿ 4 ಪಂದ್ಯ, 2022ರಲ್ಲಿ 3 ಪಂದ್ಯ ಆಡಿದ್ದರು. ಇದೀಗ ಎರಡು ವರ್ಷಗಳ ಮತ್ತೆ ಕಣಕ್ಕಿಳಿದಿದ್ದಾರೆ.
(AP)(5 / 7)
ಮುಂಬೈ ವಿರುದ್ಧ ಅರ್ಧಶತಕ ಬಾರಿಸುವುದರೊಂದಿಗೆ ಕರುಣ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಎರಡು ಅರ್ಧಶತಕಗಳ ನಡುವಿನ ಅತಿ ಹೆಚ್ಚು ಅಂತರದ ವಿಶ್ವದಾಖಲೆ ಹೊಂದಿದ್ದಾರೆ.
(Surjeet Yadav)(6 / 7)
2520 ದಿನಗಳ ನಂತರ ನಾಯರ್ ಟಿ20 ಲೀಗ್‌ನಲ್ಲಿ 50 ರನ್‌ಗಳ ಗಡಿ ದಾಟಿದರು. ಈ ದಾಖಲೆ ಹಿಂದೆ ಟ್ರಾವಿಸ್ ಹೆಡ್ ಹೊಂದಿದ್ದರು. 2017 ಮತ್ತು 2024ರ ನಡುವೆ ಹೆಡ್, 2 ಅರ್ಧಶತಕಗಳ ಬಂದಿದ್ದವು.
(AFP)ಇತರ ಗ್ಯಾಲರಿಗಳು