Karwar News: ಶಿರೂರು ಗುಡ್ಡ ಕುಸಿತ, ಮಳೆ ನಡುವೆಯೇ ಕಾಳಿ ನದಿ ಪಕ್ಕದಲ್ಲೇ ಕಾರ್ಯಾಚರಣೆ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ photos
- Shirur Land Slide ಉತ್ತರ ಕನ್ನಡ ಜಿಲ್ಲೆಯ( Uttara Kannada) ಅಂಕೋಲಾ ಬಳಿಯ ಶಿರೂರಿನಲ್ಲಿ ಭೂಕುಸಿತ ಸಂಭವಿಸಿ ಏಳು ಮಂದಿ ಮೃತಪಟ್ಟ ಸ್ಥಳ, ಕಾರ್ಯಾಚರಣೆ ನಡೆದ ಜಾಗಕ್ಕೆ ಸಿಎಂ ಸಿದ್ದರಾಮಯ್ಯ( CM Siddaramaiah) ಮಳೆ ನಡುವೆಯೂ ರೈನ್ ಕೋಟ್, ಗಮ್ ಶೂ ಧರಿಸಿ ಭೇಟಿ ನೀಡಿದ್ದರು. ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿದರು. ಅವರ ಭೇಟಿ ಚಿತ್ರಣ ಹೀಗಿತ್ತು.
- Shirur Land Slide ಉತ್ತರ ಕನ್ನಡ ಜಿಲ್ಲೆಯ( Uttara Kannada) ಅಂಕೋಲಾ ಬಳಿಯ ಶಿರೂರಿನಲ್ಲಿ ಭೂಕುಸಿತ ಸಂಭವಿಸಿ ಏಳು ಮಂದಿ ಮೃತಪಟ್ಟ ಸ್ಥಳ, ಕಾರ್ಯಾಚರಣೆ ನಡೆದ ಜಾಗಕ್ಕೆ ಸಿಎಂ ಸಿದ್ದರಾಮಯ್ಯ( CM Siddaramaiah) ಮಳೆ ನಡುವೆಯೂ ರೈನ್ ಕೋಟ್, ಗಮ್ ಶೂ ಧರಿಸಿ ಭೇಟಿ ನೀಡಿದ್ದರು. ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿದರು. ಅವರ ಭೇಟಿ ಚಿತ್ರಣ ಹೀಗಿತ್ತು.
(1 / 12)
ಕಾರವಾರ ಸಮೀಪದ ಶಿರೂರಿನಲ್ಲಿ ಆರು ದಿನದ ಹಿಂದೆ ಭೂಕುಸಿತ ಸಂಭವಿಸಿರುವ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿದರು.
(2 / 12)
ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಡಿಆರ್‌ಫ್( SDRF )ಮತ್ತು ಎನ್‌ಡಿಆರ್‌ಎಫ್( NDRF) ತಂಡಗಳ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬ್ಬಂದಿಯ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(3 / 12)
ಕಣಿವೆ ನಡುವೆ ಕಾಳಿ ನದಿ ಹರಿಯುತ್ತಿದ್ದು, ಮತ್ತೊಂದು ಕಡೆ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ತೆರವು ಕಾರ್ಯಾಚರಣೆ ನಿರಂತರವಾಗಿ ಶಿರೂರು ಬಳಿ ಮುಂದುವರಿದಿದೆ.
(4 / 12)
ಅದರಲ್ಲೂ ಕಾಳಿ ನದಿಗೆ ಹೊಂದಿಕೊಂಡಂತೆ ಗುಡ್ಡಗಳಿವೆ. ಕಾಳಿ ನದಿ ಉಕ್ಕಿ ಹರಿಯುತ್ತಿದ್ದು ದುರಂತ ನಡೆದ ಸ್ಥಳವನ್ನು ಸಿಎಂ ಸಿದ್ದರಾಮಯ್ಯ ಅವರು ಶಾಸಕ ಸತೀಶ್ ಸೈಲ್, ಡಿಸಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಮತ್ತತಿರರೊಂದಿಗೆ ವೀಕ್ಷಿಸಿದರು,
(5 / 12)
ಸಿಎಂ ಅವರಿಗೆ ಗುಡ್ಡ ಕುಸಿತದ ಸ್ಥಳ, ಅನಾಹುತದ ವಿವರಗಳನ್ನು ಸಚಿವ ಕೃಷ್ಣಬೈರೇಗೌಡ ಹಾಗೂ ಶಾಸಕ ಸತೀಶ್ ಸೈಲ್ ಅವರು ಎಳೆ ಎಳೆಯಾಗಿ ಬಿಡಿಸಿಟ್ಟರು.
(7 / 12)
ಗುಡ್ಡ ಕುಸಿತದಿಂದ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
(8 / 12)
ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಡಿಸಿ ಲಕ್ಷ್ಮಿಪ್ರಿಯಾ ಹಾಗೂ ಎಸ್ಪಿ ಎಂ.ನಾರಾಯಣ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
(9 / 12)
ಈ ವೇಳ ಕರ್ನಾಟಕ ಪೊಲೀಸ್ ಎಡಿಪಿಜಿ ಹಿತೇಂದ್ರ ಕೂಡ ಹಾಜರಿದ್ದು ಅಲ್ಲಿನ ಸ್ಥಿತಗತಿಯ ವಿವರಗಳನ್ನು ಸಿಎಂ ಭೇಟಿ ವೇಳೆ ಪಡೆದುಕೊಂಡರು.,
(10 / 12)
ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಸಿದ್ದರಾಮಯ್ಯ ಎಚ್ಚರಿಸಿದರು.
(11 / 12)
ಒಂದೇ ಸಮನೆ ಸುರಿಯುತ್ತಿದ್ದ ಭೀಕರ ಮಳೆ ನಡುವೆ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರು ಮತ್ತು ಕ್ಯಾಮರಾಮನ್ ಗಳನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಪತ್ರಕರ್ತರಿಗೆಲ್ಲಾ ರೇನ್ ಕೋಟ್ ಮತ್ತು ರಬ್ಬರ್ ಶೂ ಕೊಟ್ಟಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇತರ ಗ್ಯಾಲರಿಗಳು