Karwar Bridge Collapse: ಕಾರವಾರದಲ್ಲಿ ಕುಸಿದು ಬಿದ್ದ ಕಾಳಿ ಬೃಹತ್ ಸೇತುವೆ, ಹೇಗಿದೆ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ನೋಟ photos
- ನಾ ನೋಡಿ ನಲಿಯುವ ಕಾರವಾರ ಎನ್ನುವ ಹಾಡನ್ನು ನೀವು ಕೇಳಿರಬಹುದು. ಇಲ್ಲಿನ ಸೊಬಗಿಗೆ ಸಮುದ್ರದ ಜತೆಗೆ ಸೇತುವೆಗಳೂ ಕಾರಣ. ಇಂತಹ ಹಳೆಯ ಸೇತುವೆಯೊಂದು( Karwar Bridge) ಈಗ ಕುಸಿದು ಬಿದ್ದಿದೆ. ಇದರ ಚಿತ್ರನೋಟ ಇಲ್ಲಿದೆ.
- ನಾ ನೋಡಿ ನಲಿಯುವ ಕಾರವಾರ ಎನ್ನುವ ಹಾಡನ್ನು ನೀವು ಕೇಳಿರಬಹುದು. ಇಲ್ಲಿನ ಸೊಬಗಿಗೆ ಸಮುದ್ರದ ಜತೆಗೆ ಸೇತುವೆಗಳೂ ಕಾರಣ. ಇಂತಹ ಹಳೆಯ ಸೇತುವೆಯೊಂದು( Karwar Bridge) ಈಗ ಕುಸಿದು ಬಿದ್ದಿದೆ. ಇದರ ಚಿತ್ರನೋಟ ಇಲ್ಲಿದೆ.
(1 / 10)
ಕಾರವಾರ ಎಂದರೆ ಥಟ್ಟನೇ ನೆನಪಿಗೆ ಬರೋದು ಅಲ್ಲಿನ ವಿಶಾಲ ಸೇತುವೆ. ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎನ್ನುವ ಹಾಡು ಚಿತ್ರೀಕರಣವಾಗಿರುವುದು ಇದೇ ಸೇತುವೆ ಬಳಿಯೇ.
(2 / 10)
ಹೊಸ ಸೇತುವೆ ನಿರ್ಮಾಣ ಕೈಗೆತ್ತಿಕೊಂಡಿರುವ ಐಆರ್‌ಬಿ ಕಂಪೆನಿಯು ಹಳೆ ಸೇತುವೆ ಬಳಕೆಗೆ ಸಮಸ್ಯೆಯಿಲ್ಲ ಎಂದು ಸೀಮಿತ ವಾಹನಗಳಿಗೆ ಅವಕಾಶ ಮಾಡಿಕೊಟ್ಟಿತ್ತು.
(3 / 10)
ಗೋವಾದಿಂದ ಕಾರವಾರಕ್ಕೆ ಬರಲು ಬಳಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬುಧವಾರ ಬೆಳಗಿನ ಜಾವ ಏಕಾಏಕಿ ಕುಸಿದು ಬಿದ್ದಿದೆ.
(4 / 10)
ನಾಲ್ಕು ದಶಕದ ಹಿಂದೆ ನಿರ್ಮಿಸಲಾಗಿರುವ ಈ ಸೇತುವೆ ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಸೇತುವೆ ನಿರ್ಮಾಣವೂ ನಡೆದಿದೆ. ಇದರ ನಡುವೆ ಹಳೆಯ ಸೇತುವೆ ಕುಸಿದು ಬಿದ್ದಿದೆ,
(5 / 10)
ಕಾರವಾರ ಹಾಗೂ ಗೋವಾ ನಡುವೆ ಸಂಪರ್ಕ ಕಲ್ಪಿಸುವ ಕರ್ನಾಟಕ ಕರಾವಳಿಯ ಪ್ರಮುಖ ಸೇತುವೆಯಿದು. ಈಗಾಗಲೇ ಶಿಥಿಲಗೊಂಡಿತ್ತು. ಮಳೆಯಿಂದ ಮತ್ತಷ್ಟು ಹಾಳಾಗಿತ್ತು.
(6 / 10)
ಕಾಳಿ ನದಿಗೆ ನಿರ್ಮಿಸಲಾಗಿರುವ ಹೊಸ ಸೇತುವೆ ಪಕ್ಕದಲ್ಲಿಯೇ ಈ ಸೇತುವೆ ಇದೆ. ಹಳೆಯ ಸೇತುವೆ ಬಳಕೆ ಕಡಿಮೆಯಾಗಿದರೂ ಕಾರವಾರ ಕಡೆಗೆ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು.
(7 / 10)
ಕಾಳಿ ನದಿ ಸಮುದ್ರಕ್ಕೆ ಸೇರುವ ಸಮೀಪವೇ ಇರುವ ಈ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಢುತ್ತಿದ್ದು. ಹೊಸ ಸೇತುವೆ ಸಂಪೂರ್ಣಗೊಂಡ ನಂತರ ಬಳಕೆ ನಿಷೇಧ ಮಾಡುವ ಯೋಚನೆ ಮಾಡಿತ್ತು.
(8 / 10)
ಕಾಳಿ ನದಿಯ ಸೇತುವೆ ಮೂರು ಕಡೆ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಪ್ರಾರಂಭದಲ್ಲಿ ಸೇತುವೆಯ ಮೇಲ್ಛಾವಣಿ ಹಾಸು ಕುಸಿದಿದೆ.
(9 / 10)
ಹಳೆಯದಾದ ಸೇತುವೆಗಳ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸುರಕ್ಞತಾ ಕ್ರಮ. ಶಿಥಿಲಗೊಂಡ ನಂತರವೂ ಬಳಕೆಗೆ ಅವಕಾಶ ಮಾಡಿಕೊಟ್ಟ ಬಗ್ಗೆ ಮಾತ್ರ ಆಕ್ರೋಶ ಕೇಳಿ ಬಂದಿದೆ.
ಇತರ ಗ್ಯಾಲರಿಗಳು