Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು
- ಕೇರಳ ಹಲವು ಸಂಸ್ಕೃತಿಗಳ ಸಂಗಮ. ಅದರಲ್ಲಿ ದೈವದ ಪೂಜೆ,ಸಂಸ್ಕೃತಿಗಳೂ ಸೇರಿವೆ. ಕಾಸರಗೋಡು ಜಿಲ್ಲೆಯಲ್ಲಿ ಸೀತಾಂಗೋಳಿಯ ಪೆರ್ಣೆಯಲ್ಲಿನ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಕಳೆ ಈಗ ಜೋರಾಗಿದೆ.
- ಚಿತ್ರ- ಮಾಹಿತಿ: ಹರೀಶ್ ಮಾಂಬಾಡಿ ಮಂಗಳೂರು
- ಕೇರಳ ಹಲವು ಸಂಸ್ಕೃತಿಗಳ ಸಂಗಮ. ಅದರಲ್ಲಿ ದೈವದ ಪೂಜೆ,ಸಂಸ್ಕೃತಿಗಳೂ ಸೇರಿವೆ. ಕಾಸರಗೋಡು ಜಿಲ್ಲೆಯಲ್ಲಿ ಸೀತಾಂಗೋಳಿಯ ಪೆರ್ಣೆಯಲ್ಲಿನ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಕಳೆ ಈಗ ಜೋರಾಗಿದೆ.
- ಚಿತ್ರ- ಮಾಹಿತಿ: ಹರೀಶ್ ಮಾಂಬಾಡಿ ಮಂಗಳೂರು
(1 / 6)
ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಪೆರ್ಣೆ ಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭವಾಗಿದ್ದು, ಮಾರ್ಚ್ 7ರವರೆಗೆ ನಡೆಯುತ್ತದೆ.
(2 / 6)
ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ.
(3 / 6)
ಕಳಿಯಾಟ್ ಎಂಬುದು ಕೇರಳದಲ್ಲಿ ನಡೆಯುವ ದೈವಾರಾಧನೆ. ವಿಶಿಷ್ಟವಾಗಿ ನಡೆಯುವ ಈ ಆರಾಧನೆ ಹಲವು ಪ್ರಕ್ರಿಯೆಗಳಲ್ಲಿ ನಡೆಯುತ್ತದೆ.
(4 / 6)
ವಿಶೇಷವಾಗಿ ಕೇರಳದಲ್ಲಿ ನಡೆಯುವ ಕಳಿಯಾಟ ಮಹೋತ್ಸವಗಳಲ್ಲಿ ದೈವದ ಮುಖವರ್ಣಿಕೆ ಆಕರ್ಷಣೀಯವಾಗಿದ್ದು, ಅತ್ಯಂತ ವೈಶಿಷ್ಟ್ಯಪೂರ್ಣವಾಗಿರುತ್ತದೆ.
(5 / 6)
ರಾತ್ರಿಯ ವೇಳೆ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರುತ್ತಾರೆ. ಭಕ್ತಿ ಭಾವದಿಂದ ಈ ಕಾರ್ಯಕ್ರಮಗಳು ನಡೆಯುತ್ತದೆ, ಒಂದೊಂದು ಪ್ರದೇಶದಲ್ಲಿ ಆಯಾ ಸಮಾಜಬಾಂಧವರು ತಮ್ಮ ಕಟ್ಟುಕಟ್ಟಲೆಯ ಸಂಪ್ರದಾಯದ ಪ್ರಕಾರ ದೈವದ ಸಂಪ್ರೀತಿಗೆ ಬೇಕಾದ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.
ಇತರ ಗ್ಯಾಲರಿಗಳು