ಕೇದಾರನಾಥ ಹೆಲಿ ಸೇವೆ: ಜೂನ್ ತಿಂಗಳ ಟಿಕೆಟ್‌ ಬುಕ್ಕಿಂಗ್ ಮೇ 7 ರಿಂದ ಶುರು, ಬುಕಿಂಗ್ ವೆಬ್‌ಸೈಟ್‌, ದರ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇದಾರನಾಥ ಹೆಲಿ ಸೇವೆ: ಜೂನ್ ತಿಂಗಳ ಟಿಕೆಟ್‌ ಬುಕ್ಕಿಂಗ್ ಮೇ 7 ರಿಂದ ಶುರು, ಬುಕಿಂಗ್ ವೆಬ್‌ಸೈಟ್‌, ದರ ವಿವರ ಇಲ್ಲಿದೆ

ಕೇದಾರನಾಥ ಹೆಲಿ ಸೇವೆ: ಜೂನ್ ತಿಂಗಳ ಟಿಕೆಟ್‌ ಬುಕ್ಕಿಂಗ್ ಮೇ 7 ರಿಂದ ಶುರು, ಬುಕಿಂಗ್ ವೆಬ್‌ಸೈಟ್‌, ದರ ವಿವರ ಇಲ್ಲಿದೆ

ಕೇದಾರನಾಥ ಹೆಲಿಕಾಪ್ಟರ್ ಯಾತ್ರಾ: ಕೇದಾರನಾಥ ಧಾಮಕ್ಕೆ ಜೂನ್ ತಿಂಗಳಲ್ಲಿ ಭೇಟಿ ನೀಡುವ ಇರಾದೆ ಇದೆಯಾ? ಹೆಲಿಕಾಪ್ಟರ್‌ನಲ್ಲಿ ಹೋಗುವ ಚಿಂತನೆಯಲ್ಲಿದ್ದರೆ, ಜೂನ್ 1 ರಿಂದ ಜೂನ್ 30ರ ತನಕದ ಕೇದಾರನಾಥ ಹೆಲಿ ಸೇವೆಯ ಬುಕ್ಕಿಂಗ್ ಮೇ 7ರಿಂದ ಶುರುವಾಗುತ್ತಿದೆ. ಅಧಿಕೃತ ಬುಕ್ಕಿಂಗ್ ವೆಬ್‌ಸೈಟ್‌, ಆಪರೇಟರ್ ಮತ್ತು ದರ ವಿವರ ಹೀಗಿದೆ

ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಿಕರ ಗಮನಕ್ಕೆ. ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಯಾತ್ರೆಗೆ ಹೋಗುವುದಾದರೆ ಜೂನ್ ತಿಂಗಳ ಯಾತ್ರೆಗೆ ಸಂಬಂಧಿಸಿದ ಮುಂಗಡ ಕಾಯ್ದಿರಿಸುವಿಕೆ ನಾಡಿದ್ದು ಅಂದರೆ ಮೇ 7 ರಿಂದ ಶುರುವಾಗುತ್ತಿದೆ.
icon

(1 / 11)

ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಿಕರು ಚಾರ್‌ಧಾಮ ಯಾತ್ರೆಗೆ ಸಂಬಂಧಿಸಿದ ನೋಂದಣಿ ಮಾಡಿಸಿಕೊಂಡಿರಬೇಕು. ಅಂಥವರು ಹೆಲಿಕಾಪ್ಟರ್ ಸೇವೆ ಬಳಸಿಕೊಂಡು ಕೇದಾರನಾಥ ಧಾಮಕ್ಕೆ ತೆರಳುವ ಚಿಂತನೆಯಲ್ಲಿದ್ದರೆ ಜೂನ್ 1 ರಿಂದ 30ರ ತನಕ ಕೇದಾರನಾಥ ಹೆಲಿಕಾಪ್ಟರ್‍‌ ಸೇವೆಯ ಬುಕ್ಕಿಂಗ್ ಮೇ 7 ರಿಂದ ಶುರುವಾಗಲಿದೆ.
icon

(2 / 11)

ಕೇದಾರನಾಥ ಹೆಲಿಕಾಪ್ಟರ್ ಯಾತ್ರಾ ಸೇವೆಯ ಬುಕ್ಕಿಂಗ್ ನಿರ್ವಹಣೆಯ ಹೊಣೆಗಾರಿಕೆಯನ್ನು ಐಆರ್‌ಸಿಟಿಸಿ ಹೊತ್ತುಕೊಂಡಿದೆ. ಮೇ 7 ರಂದು ಮಧ್ಯಾಹ್ನ 12 ಗಂಟೆಗೆ ಆನ್‌ಲೈನ್ ಬುಕಿಂಗ್ ಪ್ರಾರಂಭವಾಗಲಿದೆ.
icon

(3 / 11)

ಕೇದಾರನಾಥ ಹೆಲಿ ಸೇವಾ ಟಿಕೆಟ್‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ www.heliyatra.irctc.co.in ಮೂಲಕ ಬುಕ್ ಮಾಡಬಹುದು. ಇದರಲ್ಲಿ ಅಕೌಂಟ್ ಕ್ರಿಯೇಟ್ ಮಾಡಬೇಕು.
icon

(4 / 11)

ಯಾವುದಕ್ಕೂ ಮೊದಲು  ಚಾರ್‌ಧಾಮ ಯಾತ್ರೆಗೆ ಸಂಬಂಧಿಸಿದ ನೋಂದಣಿಯನ್ನು registrationandtouristcare.uk.gov.in ಎಂಬ ವೆಬ್‌ಸೈಟ್‌ನಲ್ಲಿ ಮಾಡಿಸದೇ ಇದ್ದರೆ, ಮೊದಲು ಅದನ್ನು ಮಾಡಿಸಿಕೊಂಡು ಅದರ ನೋಂದಣಿ ಸಂಖ್ಯೆ ಗುರುತು ಮಾಡಿಟ್ಟುಕೊಳ್ಳಿ.
icon

(5 / 11)

ಚಾರ್‌ಧಾಮ ಯಾತ್ರೆಗೆ ಸಂಬಂಧಿಸಿದ ನೋಂದಣಿ ಸಂಖ್ಯೆ ಬಳಸಿಕೊಂಡು ಹೆಲಿಯಾತ್ರಾ ಐಆರ್‌ಸಿಟಿಸಿ ತಾಣದಲ್ಲಿ ಅಂದರೆ  ಐಆರ್‌ಸಿಟಿಸಿ ವೆಬ್‌ಸೈಟ್ www.heliyatra.irctc.co.in ಎಂಬ ತಾಣದಲ್ಲಿ ಈಗಾಗಲೇ ಕ್ರಿಯೇಟ್ ಮಾಡಿದ ಖಾತೆಗೆ ಲಾಗಿನ್ ಆಗಿ.
icon

(6 / 11)

ಬಳಿಕ ನೀವು ಪ್ರವಾಸ ತೆರಳುವ ದಿನಾಂಕ, ಸಮಯ ಮತ್ತು ಯಾವ ಆಪರೇಟರ್ ಎಂಬುದನ್ನು ಗುರುತಿಸಿ, ಟಿಕೆಟ್ ಬುಕ್ ಮಾಡಿ.
icon

(7 / 11)

ಗುಪ್ತಕಾಶಿಯಿಂದ ಶ್ರೀ ಕೇದಾರನಾಥಕ್ಕೆ ರೌಂಡ್ ಟ್ರಿಪ್ ದರ 8.532 ರೂಪಾಯಿ. ಆರ್ಯನ್ ಏವಿಯೇಷನ್, ಟ್ರಾನ್ಸ್ ಭಾರತ್ ಏವಿಯೇಷನ್ಸ್ ಈ ಮಾರ್ಗದ ಹೆಲಿ ಆಪರೇಟರ್ ಕಂಪನಿಗಳು. ಫಟಾದಿಂದ ಶ್ರೀ ಕೇದಾರನಾಥಕ್ಕೆ ರೌಂಡ್ ಟ್ರಿಪ್ ದರ 6.062 ರೂಪಾಯಿ.  ಪವನ್ ಹನ್ಸ್, ತುಂಬೇ ಏವಿಯೇಷನ್, ಗ್ಲೋಬಲ್ ವೆಕ್ಟ್ರಾ ಹೆಲಿಕಾರ್ಪ್, ಟ್ರಾನ್ಸ್ ಭಾರತ್ ಏವಿಯೇಷನ್ಸ್ ಈ ಮಾರ್ಗದ ಹೆಲಿ ಆಪರೇಟರ್‌ಗಳು. ಸಿರ್ಸಿಯಿಂದ ಶ್ರೀ ಕೇದಾರನಾಥಕ್ಕೆ ರೌಂಡ್ ಟ್ರಿಪ್ ದರ 6.060 ರೂಪಾಯಿ. ಹಿಮಾಲಯನ್ ಹೆಲಿ ಸರ್ವೀಸಸ್, ಕೆಸ್ಟ್ರೆಲ್ ಏವಿಯೇಷನ್, ಏರೋ ಏರ್‌ಕ್ರಾಫ್ಟ್ಸ್ ಈ ಮಾರ್ಗದ ಹೆಲಿಕಾಪ್ಟರ್ ಆಪರೇಟರ್‌ ಕಂಪನಿಗಳು.
icon

(8 / 11)

ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ಸಹಾಯವಾಣಿ ಸಂಖ್ಯೆ 1800110139 ಅಥವಾ 080 44647998/ 080 3573498 ಕ್ಕೆ ಕರೆಮಾಡಬಹುದು.
icon

(9 / 11)

ಇವಿಷ್ಟೂ ಗಮನದಲ್ಲಿರಲಿ.   ಬುಕಿಂಗ್ ಅನ್ನು IRCTC ವೆಬ್‌ಸೈಟ್ heliyatra.irctc.co.in ಮೂಲಕ ಮಾತ್ರ ಮಾಡಲಾಗುತ್ತದೆ. ಬೇರಾವುದೇ ಪೋರ್ಟಲ್ ಅಥವಾ ಏಜೆನ್ಸಿಗೆ ಇದರ ಹೊಣೆಗಾರಿಕೆ ನೀಡಿಲ್ಲ. ಯಾವುದೇ ಮೊಬೈಲ್‌ಗೆ ಕರೆ ಮಾಡಬೇಡಿ.
icon

(10 / 11)

ಈ ವೆಬ್‌ಸೈಟ್ ಬಿಟ್ಟು ಬೇರಾವುದೇ ರೀತಿಯಲ್ಲೂ ಬುಕ್ಕಿಂಗ್ ಮಾಡಲು ಪ್ರಯತ್ನಿಸಿ ಕ್ಯೂಆರ್ ಕೋಡ್ ಅಥವಾ ಯುಪಿಐ ಐಡಿ ಬಳಸಿ ಹಣಪಾವತಿಸಬೇಡಿ. ಸೈಬರ್ ವಂಚನೆಗೆ ಒಳಗಾದರೆ ಕೂಡಲೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ.
icon

(11 / 11)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು