ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಯ್ಮುಚ್ಚಿಕೊಂಡಿದಿದ್ರೆ ಆರ್ ಸಿಬಿ ಸೋಲ್ತಾ ಇರ್ಲಿಲ್ಲ; ಅಭಿಮಾನಿಗಳನ್ನು ದುರಂಹಕಾರಿ ಎಂದು ಕರೆದ ಕ್ರಿಸ್ ಶ್ರೀಕಾಂತ್

ಬಾಯ್ಮುಚ್ಚಿಕೊಂಡಿದಿದ್ರೆ ಆರ್ ಸಿಬಿ ಸೋಲ್ತಾ ಇರ್ಲಿಲ್ಲ; ಅಭಿಮಾನಿಗಳನ್ನು ದುರಂಹಕಾರಿ ಎಂದು ಕರೆದ ಕ್ರಿಸ್ ಶ್ರೀಕಾಂತ್

  • Kris Srikkanth slams RCB fans: ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಆರ್​ಸಿಬಿ ಅಭಿಮಾನಿಗಳೇ ಕಾರಣ ಎಂದು ತಮಿಳುನಾಡು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.

2024ರ ಐಪಿಎಲ್​​ನ ಲೀಗ್​​​ನಲ್ಲಿ​ ಆರಂಭಿಕ ಎಂಟು ಪಂದ್ಯಗಳಲ್ಲಿ ಏಳು ಸೋತಿದ್ದ ಆರ್​ಸಿಬಿ, ಕೊನೆಯ ಹಂತದಲ್ಲಿ ಸತತ ಆರು ಪಂದ್ಯಗಳನ್ನು ಜಯಿಸಿ ಪ್ಲೇಆಫ್ ಹಂತಕ್ಕೇರಿತ್ತು. ಆದರೆ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡದ ವಿರುದ್ಧ ಸೋತು ಕ್ವಾಲಿಫೈಯರ್-2 ಪ್ರವೇಶಿಸುವಲ್ಲಿ ವಿಫಲವಾಯಿತು.
icon

(1 / 7)

2024ರ ಐಪಿಎಲ್​​ನ ಲೀಗ್​​​ನಲ್ಲಿ​ ಆರಂಭಿಕ ಎಂಟು ಪಂದ್ಯಗಳಲ್ಲಿ ಏಳು ಸೋತಿದ್ದ ಆರ್​ಸಿಬಿ, ಕೊನೆಯ ಹಂತದಲ್ಲಿ ಸತತ ಆರು ಪಂದ್ಯಗಳನ್ನು ಜಯಿಸಿ ಪ್ಲೇಆಫ್ ಹಂತಕ್ಕೇರಿತ್ತು. ಆದರೆ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡದ ವಿರುದ್ಧ ಸೋತು ಕ್ವಾಲಿಫೈಯರ್-2 ಪ್ರವೇಶಿಸುವಲ್ಲಿ ವಿಫಲವಾಯಿತು.(AFP)

ಅಹ್ಮದಾಬಾದ್​​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಫಾಫ್ ಪಡೆಯನ್ನು ನಾಲ್ಕು ವಿಕೆಟ್​ಗಳಿಂದ ಮಣಿಸಿದ ಸಂಜು ಪಡೆ, ಎರಡನೇ ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿತು. ಇದರೊಂದಿಗೆ ಆರ್​ಸಿಬಿ ಟ್ರೋಫಿ ಕನಸು ಮತ್ತೆ ಭಗ್ನಗೊಂಡಿತು. ಆದರೆ ಈ ಸೋಲಿಗೆ ಆರ್​ಸಿಬಿ ಅಭಿಮಾನಿಗಳ ದುರಂಹಕರಾವೇ ಕಾರಣ ಎಂದು ತಮಿಳುನಾಡು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
icon

(2 / 7)

ಅಹ್ಮದಾಬಾದ್​​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಫಾಫ್ ಪಡೆಯನ್ನು ನಾಲ್ಕು ವಿಕೆಟ್​ಗಳಿಂದ ಮಣಿಸಿದ ಸಂಜು ಪಡೆ, ಎರಡನೇ ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿತು. ಇದರೊಂದಿಗೆ ಆರ್​ಸಿಬಿ ಟ್ರೋಫಿ ಕನಸು ಮತ್ತೆ ಭಗ್ನಗೊಂಡಿತು. ಆದರೆ ಈ ಸೋಲಿಗೆ ಆರ್​ಸಿಬಿ ಅಭಿಮಾನಿಗಳ ದುರಂಹಕರಾವೇ ಕಾರಣ ಎಂದು ತಮಿಳುನಾಡು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.(AFP)

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಆರ್​, 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿತು. ಈ ಸೋಲಿನ ನಂತರ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಚಾರಿ ಶ್ರೀಕಾಂತ್, ಆರ್​ಸಿಬಿ ಅಭಿಮಾನಿಗಳನ್ನು ದೂರಿದ್ದಾರೆ.
icon

(3 / 7)

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಆರ್​, 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿತು. ಈ ಸೋಲಿನ ನಂತರ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಚಾರಿ ಶ್ರೀಕಾಂತ್, ಆರ್​ಸಿಬಿ ಅಭಿಮಾನಿಗಳನ್ನು ದೂರಿದ್ದಾರೆ.(AFP)

ಮೇ 18ರಂದು ನಡೆದ ಪ್ಲೇಆಫ್​ ಡಿಸೈಡರ್​ ಪಂದ್ಯದಲ್ಲಿ ಚೆನ್ನೈ ತಂಡವನ್ನು ಆರ್​ಸಿಬಿ ಸೋಲಿಸಿತ್ತು. ನಿರಾಸೆಯೊಂದಿಗೆ ಟೂರ್ನಿ ಮುಗಿಸಿದ ಕಾರಣ ಸಿಎಸ್​ಕೆ ಅಭಿಮಾನಿಗಳು, ಆರ್​​ಸಿಬಿ ಅಭಿಮಾನಿಗಳು ತಮ್ಮ ಮೇಲೆ ಗೂಂಡಾಗಿರಿ ಮಾಡಿರುವ ಬಗ್ಗೆ ದೂರು ನೀಡಿದ್ದರು. ಇದು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು.
icon

(4 / 7)

ಮೇ 18ರಂದು ನಡೆದ ಪ್ಲೇಆಫ್​ ಡಿಸೈಡರ್​ ಪಂದ್ಯದಲ್ಲಿ ಚೆನ್ನೈ ತಂಡವನ್ನು ಆರ್​ಸಿಬಿ ಸೋಲಿಸಿತ್ತು. ನಿರಾಸೆಯೊಂದಿಗೆ ಟೂರ್ನಿ ಮುಗಿಸಿದ ಕಾರಣ ಸಿಎಸ್​ಕೆ ಅಭಿಮಾನಿಗಳು, ಆರ್​​ಸಿಬಿ ಅಭಿಮಾನಿಗಳು ತಮ್ಮ ಮೇಲೆ ಗೂಂಡಾಗಿರಿ ಮಾಡಿರುವ ಬಗ್ಗೆ ದೂರು ನೀಡಿದ್ದರು. ಇದು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು.(AFP)

ಇದನ್ನ ಗಮನದಲ್ಲಿಟ್ಟುಕೊಂಡು 1983ರ ವಿಶ್ವಕಪ್ ವಿಜೇತ ಶ್ರೀಕಾಂತ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಅಹಂಕಾರವೇ ಸೋಲಿಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಆರ್​ಸಿಬಿ ಫ್ಯಾನ್ಸ್​ ಮೌನಿಯಾದಷ್ಟೂ ಒಳ್ಳೆಯದು. ಸಿಎಸ್​ಕೆ ಸೋತ ನಂತರವೂ ಸುಮ್ಮನಿರದೆ ಅನಗತ್ಯ ವಿಡಿಯೋ ಫೋಸ್ಟ್​ಗಳನ್ನು ಹಾಕಬಾರದಿತ್ತು ಎಂದು ಹೇಳಿದ್ದಾರೆ.
icon

(5 / 7)

ಇದನ್ನ ಗಮನದಲ್ಲಿಟ್ಟುಕೊಂಡು 1983ರ ವಿಶ್ವಕಪ್ ವಿಜೇತ ಶ್ರೀಕಾಂತ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಅಹಂಕಾರವೇ ಸೋಲಿಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಆರ್​ಸಿಬಿ ಫ್ಯಾನ್ಸ್​ ಮೌನಿಯಾದಷ್ಟೂ ಒಳ್ಳೆಯದು. ಸಿಎಸ್​ಕೆ ಸೋತ ನಂತರವೂ ಸುಮ್ಮನಿರದೆ ಅನಗತ್ಯ ವಿಡಿಯೋ ಫೋಸ್ಟ್​ಗಳನ್ನು ಹಾಕಬಾರದಿತ್ತು ಎಂದು ಹೇಳಿದ್ದಾರೆ.(AFP)

ಜೀವನ ಉತ್ತಮ ಹಂತದಲ್ಲಿ ಸಾಗುತ್ತಿರುವಾಗ ಬಾಯ್ಮುಚ್ಚಿಕೊಂಡು ಇರಬೇಕು. ಇಲ್ಲವಾದರೆ ಗದ್ದಲದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆರ್​ಸಿಬಿ ಅಭಿಮಾನಿಗಳು ಅತಿಯಾಗಿ ಆಡಿದರು. ಇದೀಗ ಅಶ್ವಿನ್​ ಆರ್​ಸಿಬಿ ಅಹಂಕಾರವನ್ನು ಇಳಿಸಿದ್ದಾರೆ. ಅದಕ್ಕಾಗಿ ಬಾಯ್ಮುಚ್ಚಿಕೊಂಡು ಆಡಬೇಕು ಎಂದು ಮಾಜಿ ಆಟಗಾರ ತಮ್ಮ ಯೂಟ್ಯೂಬ್​ನಲ್ಲಿ ಹೇಳಿದ್ದಾರೆ.
icon

(6 / 7)

ಜೀವನ ಉತ್ತಮ ಹಂತದಲ್ಲಿ ಸಾಗುತ್ತಿರುವಾಗ ಬಾಯ್ಮುಚ್ಚಿಕೊಂಡು ಇರಬೇಕು. ಇಲ್ಲವಾದರೆ ಗದ್ದಲದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆರ್​ಸಿಬಿ ಅಭಿಮಾನಿಗಳು ಅತಿಯಾಗಿ ಆಡಿದರು. ಇದೀಗ ಅಶ್ವಿನ್​ ಆರ್​ಸಿಬಿ ಅಹಂಕಾರವನ್ನು ಇಳಿಸಿದ್ದಾರೆ. ಅದಕ್ಕಾಗಿ ಬಾಯ್ಮುಚ್ಚಿಕೊಂಡು ಆಡಬೇಕು ಎಂದು ಮಾಜಿ ಆಟಗಾರ ತಮ್ಮ ಯೂಟ್ಯೂಬ್​ನಲ್ಲಿ ಹೇಳಿದ್ದಾರೆ.(AP)

ಆರ್​ಸಿಬಿ ಅಭಿಮಾನಿಗಳು ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು. ಅನಗತ್ಯ ಆಕ್ರಮಣಕಾರಿ ತೋರಬಾರದು. ಸಿಎಸ್​​ಕೆ ಮತ್ತು ಮುಂಬೈ ತಂಡಗಳು ತಲಾ 5 ಪ್ರಶಸ್ತಿ ಗೆದ್ದಿವೆ. ಆದರೆ, ಎಂದೂ ಕೂಗಾಡಿಲ್ಲ. ನೋಡಿ ಕಲಿಯಬೇಕು ಎಂದು ಶ್ರಿಕಾಂತ್ ಹೇಳಿದ್ದಾರೆ.
icon

(7 / 7)

ಆರ್​ಸಿಬಿ ಅಭಿಮಾನಿಗಳು ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು. ಅನಗತ್ಯ ಆಕ್ರಮಣಕಾರಿ ತೋರಬಾರದು. ಸಿಎಸ್​​ಕೆ ಮತ್ತು ಮುಂಬೈ ತಂಡಗಳು ತಲಾ 5 ಪ್ರಶಸ್ತಿ ಗೆದ್ದಿವೆ. ಆದರೆ, ಎಂದೂ ಕೂಗಾಡಿಲ್ಲ. ನೋಡಿ ಕಲಿಯಬೇಕು ಎಂದು ಶ್ರಿಕಾಂತ್ ಹೇಳಿದ್ದಾರೆ.


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು