ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಸ್ತಾ ನಕ್ಷತ್ರದ 2ನೇ ಹಂತಕ್ಕೆ ಕೇತು ಪ್ರವೇಶ; ಮುಂದಿನ 63 ದಿನಗಳು ಕನ್ಯಾ ಸೇರಿದಂತೆ 4 ರಾಶಿಯವರಿಗೆ ಕಷ್ಟ ಕಾಲ

ಹಸ್ತಾ ನಕ್ಷತ್ರದ 2ನೇ ಹಂತಕ್ಕೆ ಕೇತು ಪ್ರವೇಶ; ಮುಂದಿನ 63 ದಿನಗಳು ಕನ್ಯಾ ಸೇರಿದಂತೆ 4 ರಾಶಿಯವರಿಗೆ ಕಷ್ಟ ಕಾಲ

ಹಸ್ತಾ ನಕ್ಷತ್ರದ ಮೂರನೇ ಹಂತದಿಂದ ಹೊರ ಬರುತ್ತಿರುವ ಕೇತು ಜುಲೈ 8 ರಂದು ಎರಡನೇ ಹಂತಕ್ಕೆ ಪ್ರವೇಶಿಸುತ್ತಾನೆ. ಈ ವರ್ಷ ಸೆಪ್ಟೆಂಬರ್ 9 ರವರೆಗೆ ಕೇತು ಇದೇ ಸ್ಥಾನದಲ್ಲಿರುತ್ತಾನೆ. ಇದರ ಪರಿಣಾಮ ಕೇತುವಿನ ದುಷ್ಪರಿಣಾಮಗಳು 4 ರಾಶಿಗಳಲ್ಲಿ ಹೆಚ್ಚಾಗಿ ಗೋಚರಿಸುತ್ತವೆ. ಕೇತುವಿನ ಸ್ಥಾನ ಬದಲಾವಣೆ ಯಾವ ರಾಶಿಯವರಿಗೆ ಏನು ಸಮಸ್ಯೆ ತರಲಿದೆ ನೋಡೋಣ.

ಜ್ಯೋತಿಷ್ಯದಲ್ಲಿ ಕೇತುವನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ. ಕೇತುವನ್ನು ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಜುಲೈ 4 ರಿಂದ ಕೇತು ಹಸ್ತಾ ನಕ್ಷತ್ರದ ಮೂರನೇ ಹಂತವನ್ನು ತೊರೆದು ಎರಡನೇ ಹಂತವನ್ನು ಪ್ರವೇಶಿಸಲಿದ್ದಾನೆ.  ಸೆಪ್ಟೆಂಬರ್ ನಿಂದ ಕೇತು ಹಸ್ತಾ ನಕ್ಷತ್ರದ ಮೂರನೇ ಹಂತದಲ್ಲಿರುತ್ತಾನೆ. ಅಂತಹ ಸನ್ನಿವೇಶದಲ್ಲಿ, ಮುಂದಿನ 63 ದಿನಗಳು 4 ರಾಶಿಚಕ್ರದ ಜನರಿಗೆ ಹಲವು ಸಮಸ್ಯೆಗಳು ಎದುರಾಗಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಕೇತು ಯಾರನ್ನಾದರೂ ನಕಾರಾತ್ಮಕವಾಗಿ ಪ್ರಭಾವಿಸಿದಾಗ, ಆ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾನೆ. 
icon

(1 / 6)

ಕರ್ಕ: ಕೇತುವಿನ ಸ್ಥಾನ ಬದಲಾವಣೆಯಿಂದ ಕರ್ಕಾಟಕ ರಾಶಿಯವರ ಸ್ವಭಾವ ಬದಲಾಗಲಿದೆ. ಅದರ ಪರಿಣಾಮವನ್ನು ನಿಮ್ಮ ಯೋಚನಾ ಶಕ್ತಿಯಲ್ಲೂ ಕಾಣಬಹುದು. ಅಲ್ಲದೆ, ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳನ್ನು ನೀವು ನೋಡುತ್ತೀರಿ. ಕೆಲಸದಲ್ಲಿ ನೀವು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತೀರಿ. ಕೆಲಸದಲ್ಲಿ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಆದರೂ, ನಿಮಗೆ ಯಶಸ್ಸಿನ ಉತ್ತಮ ಅವಕಾಶವಿದೆ.
icon

(2 / 6)

ಕನ್ಯಾ: ಕೇತು ಕನ್ಯಾ ರಾಶಿಯವರಿಗೆ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ನೀವು ಮಾನಸಿಕವಾಗಿ ತುಂಬಾ ದುರ್ಬಲರಾಗುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೀವು ಅನೇಕ ಬದಲಾವಣೆಗಳನ್ನು ಕಾಣಬಹುದು. ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಈ ಸಮಯದಲ್ಲಿ, ನಿಮ್ಮ ಸ್ವಂತ ಬೆಳವಣಿಗೆಗೆ ನೀವು ನಿಮ್ಮ ಬಹಳ ಶ್ರಮ ಪಡಬೇಕು. 
icon

(3 / 6)

ತುಲಾ: ಕೇತು ತುಲಾ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ, ಹಣದ ವಿಷಯಗಳಲ್ಲಿ ಯಾರಾದರೂ ನಿಮ್ಮನ್ನು ಮೋಸ ಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಈ ಅವಧಿಯಲ್ಲಿ ನೀವು ದೂರದ ಊರುಗಳಿಗೆ ಪ್ರಯಾಣಿಸಬೇಕಾಗಬಹುದು. ಈ ಪ್ರವಾಸ ನಿಮಗೆ ಹೆಚ್ಚಿನ ಮಾನಸಿಕ ಒತ್ತಡ ಉಂಟುಮಾಡಬಹುದು. ರಾಹುವಿನ ಪ್ರಭಾವದಿಂದಾಗಿ, ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಕೂಡಾ ನಿರ್ಮಾಣವಾಗಲಿದೆ. ಆರೋಗ್ಯದ ಬಗ್ಗೆ ಕೂಡಾ ನೀವು ಬಹಳ ಎಚ್ಚರಿಕೆ ವಹಿಸಬೇಕಾಗಿದೆ.
icon

(4 / 6)

ಮಕರ: ಮಕರ ರಾಶಿಯವರು ಕೇತುವಿನ ಪ್ರಭಾವದಿಂದ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಈ ಅವಧಿಯಲ್ಲಿ, ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ನಿಮ್ಮ ಆರೋಗ್ಯ ಮತ್ತು ಕುಟುಂಬ ಜೀವನವನ್ನು ನೀವು ಸಮತೋಲನಗೊಳಿಸಬೇಕು. ನಿಮ್ಮ ಪೋಷಕರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆದಷ್ಟು ವಿವಾದಗಳಿಂದ ದೂರವಿರಿ. ನೀವು ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಬಹಳ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು