ಕನ್ನಡ ಸುದ್ದಿ  /  Photo Gallery  /  King Charles Iii Arrive At Buckingham Palace In London

King Charles III: ಬಕಿಂಗ್‌ಹ್ಯಾಮ್‌ ಅರಮನೆಗೆ ಅಧಿಕೃತ ಪ್ರವೇಶ ಪಡೆದ ಕಿಂಗ್‌ ಚಾರ್ಲ್ಸ್

  • ಲಂಡನ್:‌ ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್ II ನಿಧನರಾಗಿದ್ದು, ಅರ ಪುತ್ರ ಪ್ರಿನ್ಸ್‌ ಚಾರ್ಲ್ಸ್‌ ಇದೀಗ ಬ್ರಿಟನ್‌ನ ನೂತನ ದೊರೆಯಾಗಿ ನೇಮಕಗೊಂಡಿದ್ದಾರೆ. ನಾಳೆ(ಸೆ.10-ಶನಿವಾರ) ಕಿಂಗ್‌ ಚಾರ್ಲ್ಸ್‌ ಅವರ ಅಧಿಕೃತ ಪಟ್ಟಾಭಿಷೇಕ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಕಿಂಗ್‌ ಚಾರ್ಲ್ಸ್‌ ಮತ್ತು ಅವರ ಪತ್ನಿ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರು ಇಂದು (ಸೆ.09-ಶುಕ್ರವಾರ) ಬಕಿಂಗ್‌ಹ್ಯಾಮ್‌ ಅರಮನೆಗೆ ಪ್ರವೇಶ ಮಾಡಿದ್ದಾರೆ.

ಬಕಿಂಗ್‌ಹ್ಯಾಮ್‌ ಅರಮನೆ ಹೊರಗೆ ನೆರೆದ ಸಾವಿರಾರು ಜನರತ್ತ ಕೈಬೀಸಿದ ಕಿಂಗ್‌ ಚಾರ್ಲ್ಸ್‌, ಜನರ ಬಳಿ ಹೋಗಿ ಹಸ್ತಲಾಘವ ಮಾಡಿದರು. ಪ್ರಜೆಗಳೊಂದಿಗೆ ಆತ್ಮೀಯವಾಗಿ ಬೆರೆತ ಕಿಂಗ್‌ ಚಾರ್ಲ್ಸ್ ಅವರಿಗೆ, ಜನರು ಭಾವನಾತ್ಮಕ ಸ್ವಾಗತ ಕೋರಿದರು. ಈ ವೇಲೆ ಕಿಂಗ್‌ ಚಾರ್ಲ್ಸ್‌ ಅವರ ಪತ್ನಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಹಾಜರಿದ್ದರು.
icon

(1 / 5)

ಬಕಿಂಗ್‌ಹ್ಯಾಮ್‌ ಅರಮನೆ ಹೊರಗೆ ನೆರೆದ ಸಾವಿರಾರು ಜನರತ್ತ ಕೈಬೀಸಿದ ಕಿಂಗ್‌ ಚಾರ್ಲ್ಸ್‌, ಜನರ ಬಳಿ ಹೋಗಿ ಹಸ್ತಲಾಘವ ಮಾಡಿದರು. ಪ್ರಜೆಗಳೊಂದಿಗೆ ಆತ್ಮೀಯವಾಗಿ ಬೆರೆತ ಕಿಂಗ್‌ ಚಾರ್ಲ್ಸ್ ಅವರಿಗೆ, ಜನರು ಭಾವನಾತ್ಮಕ ಸ್ವಾಗತ ಕೋರಿದರು. ಈ ವೇಲೆ ಕಿಂಗ್‌ ಚಾರ್ಲ್ಸ್‌ ಅವರ ಪತ್ನಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಹಾಜರಿದ್ದರು.(AFP)

ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕನ್ಸಾರ್ಟ್, ಸ್ಕಾಟ್‌ಲ್ಯಾಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಿಂದ ಲಂಡನ್‌ಗೆ ಹಿಂತಿರುಗಿದರು. ನಾಳೆ (ಸೆ.10-ಶನಿವಾರ) ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಕಿಂಗ್‌ ಚಾರ್ಲ್ಸ್‌ ಅವರ ಅಧಿಕೃತ ಪಟ್ಟಾಭಿಷೇಕ ನೆರವೇರಲಿದೆ.
icon

(2 / 5)

ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕನ್ಸಾರ್ಟ್, ಸ್ಕಾಟ್‌ಲ್ಯಾಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಿಂದ ಲಂಡನ್‌ಗೆ ಹಿಂತಿರುಗಿದರು. ನಾಳೆ (ಸೆ.10-ಶನಿವಾರ) ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಕಿಂಗ್‌ ಚಾರ್ಲ್ಸ್‌ ಅವರ ಅಧಿಕೃತ ಪಟ್ಟಾಭಿಷೇಕ ನೆರವೇರಲಿದೆ.(AFP)

ಬಕಿಂಗ್‌ಹ್ಯಾಮ್‌ ಅರಮನೆ ಹೊರಗೆ ಜಮಾಯಿಸಿದ ಸಾವಿರಾರು ಜನರು ಕಿಂಗ್‌ ಚಾರ್ಲ್ಸ್‌ ಅವರನ್ನು ನೋಡುತ್ತಲೇ, ಭಾವನಾತ್ಮಕವಾಗಿ ಅಪ್ಪುಗೆ ನೀಡಿದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಜನರನ್ನು ಕಿಂಗ್‌ ಚಾರ್ಲ್ಸ್‌ ಅವರ ಭದ್ರತಾ ಸಿಬ್ಬಂದಿ ತಡೆದರು.
icon

(3 / 5)

ಬಕಿಂಗ್‌ಹ್ಯಾಮ್‌ ಅರಮನೆ ಹೊರಗೆ ಜಮಾಯಿಸಿದ ಸಾವಿರಾರು ಜನರು ಕಿಂಗ್‌ ಚಾರ್ಲ್ಸ್‌ ಅವರನ್ನು ನೋಡುತ್ತಲೇ, ಭಾವನಾತ್ಮಕವಾಗಿ ಅಪ್ಪುಗೆ ನೀಡಿದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಜನರನ್ನು ಕಿಂಗ್‌ ಚಾರ್ಲ್ಸ್‌ ಅವರ ಭದ್ರತಾ ಸಿಬ್ಬಂದಿ ತಡೆದರು.(Bloomberg)

ಕಿಂಗ್‌ ಚಾರ್ಲ್ಸ್‌ ಇಂಗ್ಲೆಂಡ್‌ನ ರಾಜನಾಗಿ ನೇಮಕಗೊಂಡಿರುವುದರಿಂದ, ಇಂಗ್ಲೆಂಡ್‌ನ ರಾಷ್ಟ್ರಗೀತೆ, ಕರೆನ್ಸಿ ನೋಟುಗಳು ಬದಲಾವಣೆ ಕಾಣಲಿವೆ. ರಾನಿ ಎಲಿಜಬೆತ್‌ ಬದಲಾಗಿ ಕಿಂಗ್‌ ಚಾರ್ಲ್ಸ್‌ ಅವರ ಭಾವಚಿತ್ರವಿರುವ ಕರೆನ್ಸಿ ನೋಟುಗಳು ಚಲಾವಣೆಗೆ ಬರಲಿವೆ.
icon

(4 / 5)

ಕಿಂಗ್‌ ಚಾರ್ಲ್ಸ್‌ ಇಂಗ್ಲೆಂಡ್‌ನ ರಾಜನಾಗಿ ನೇಮಕಗೊಂಡಿರುವುದರಿಂದ, ಇಂಗ್ಲೆಂಡ್‌ನ ರಾಷ್ಟ್ರಗೀತೆ, ಕರೆನ್ಸಿ ನೋಟುಗಳು ಬದಲಾವಣೆ ಕಾಣಲಿವೆ. ರಾನಿ ಎಲಿಜಬೆತ್‌ ಬದಲಾಗಿ ಕಿಂಗ್‌ ಚಾರ್ಲ್ಸ್‌ ಅವರ ಭಾವಚಿತ್ರವಿರುವ ಕರೆನ್ಸಿ ನೋಟುಗಳು ಚಲಾವಣೆಗೆ ಬರಲಿವೆ.(Bloomberg)

ಬ್ರಿಟನ್‌ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಈ ಸಂದರ್ಭದಲ್ಲಿ ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ನ ನೂತನ ದೊರೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬ್ರಿಟನ್‌ ಸರ್ಕಾರದ ಜೊತೆಗೂಡಿ ದೇಶವನ್ನು ಆರ್ಥಿಕ ಸಂಕಷ್ಟದಿಂದ ಕಿಂಗ್‌ ಚಾರ್ಲ್ಸ್‌ ಪಾರು ಮಾಡಬೇಕಿದೆ.
icon

(5 / 5)

ಬ್ರಿಟನ್‌ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಈ ಸಂದರ್ಭದಲ್ಲಿ ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ನ ನೂತನ ದೊರೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬ್ರಿಟನ್‌ ಸರ್ಕಾರದ ಜೊತೆಗೂಡಿ ದೇಶವನ್ನು ಆರ್ಥಿಕ ಸಂಕಷ್ಟದಿಂದ ಕಿಂಗ್‌ ಚಾರ್ಲ್ಸ್‌ ಪಾರು ಮಾಡಬೇಕಿದೆ.(REUTERS)


ಇತರ ಗ್ಯಾಲರಿಗಳು