Mango news: ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜನದ್ದೇ ಹವಾ; ಬಾಯಲ್ಲಿ ನೀರೂರಿಸುವ ವೆರೈಟಿ ಮಾವಿನ ಹಣ್ಣುಗಳು; ಫೋಟೋಸ್
ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ವೆರೈಟಿ ಹಣ್ಣುಗಳು ಬಾಯಲ್ಲಿ ನೀರೂರಿಸುವಂತಿದ್ದು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.
(1 / 8)
ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಾವು ಮಾರುಕಟ್ಟೆಗೆ ಬರುತ್ತದೆ. ಆದರೆ ಈ ಬಾರಿ 15 ದಿನ ಮೊದಲೇ ಹಣ್ಣುಗಳ ರಾಜ ಮಾರುಕಟ್ಟೆಗೆ ಬಂದಾಗಿದೆ.
(3 / 8)
ಮಲ್ಲಿಕಾ, ಬಂಗನಪಲ್ಲಿ, ಆಲ್ಫಾನ್ಸೊ, ಕೇಸರ್, ಸೆಂಧೂರ, ದಶಹರಿ, ಮಲಗೋವಾ, ಬೆನೆಶಿಯಾ, ನೀಲಂ, ಸಕ್ಕರೆ ಗುತ್ತಿ, ರಸಪುರಿ, ಬಾದಾಮಿಯ ತಳಿಯ ಹಣ್ಣುಗಳು ಕಣ್ಮನ ಸೆಳೆಯುತ್ತಿವೆ. ತೋತಾಪುರಿಯಂತಹ ಹಣ್ಣುಗಳು ಇನ್ನಷ್ಟೇ ಮಾರುಕಟ್ಟೆಗೆ ಬರಬೇಕು. ತೋತಾಪುರಿ ಕಾಯಿ ಮಾರುಕಟ್ಟೆಯಲ್ಲಿದೆ.
(4 / 8)
ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಮಾರುಕಟ್ಟೆಗೆ ಹಣ್ಣು ಬಂದಿರೋದು ಕಡಿಮೆ. ಬೆಲೆ ಸದ್ಯಕ್ಕೆ ಪರ್ವಾಗಿಲ್ಲ. ಮುಂದೆ ಜಾಸ್ತಿಯಾಗುವ ನಿರೀಕ್ಷೆ ಇದೆ ಅಂತ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
(5 / 8)
ಅಕಾಲಿಕಾ ಮಳೆಯಿಂದಾಗಿ ಈ ಬಾರಿ ಮಾವು ಇಳುವರಿ ಕಡಿಮೆಯಾಗಿದೆ. ಆರ್‌ಟಿ ನಗರದ ಟಿವಿ ಟವರ್ ಬಳಿಯ ರಸ್ತೆ ಬದಿಯಲ್ಲಿ ವೆರೈಟಿ ಮಾವಿನ ಹಣ್ಣುಗಳು ಕಣ್ಮನ ಸೆಳೆಯುತ್ತಿವೆ.
(6 / 8)
ವಸಂತನಗರದಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವ ಟಿವಿ ಟವರ್ ರಸ್ತೆಯ ಬದಿಯಲ್ಲಿ ಹತ್ತಾರು ಮಾವಿನ ಹಣ್ಣುಗಳ ಮಳಿಗೆಗಳನ್ನು ತೆರೆಯಲಾಗಿದೆ. ವ್ಯಾಪಾರಿಯೊಬ್ಬರು ಹಣ್ಣುಗಳನ್ನು ಜೋಡಿಸುತ್ತಿರುವುದು.
(7 / 8)
ಹಣ್ಣುಗಳ ಗಾತ್ರ, ಗುಣಮಟ್ಟ ಹಾಗೂ ತಳಿಯ ಮೇಲೆ ಬೆಲೆಗಳಲ್ಲಿ ವ್ಯತ್ಯಾಸವಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಲಾಲ್ ಬಾಗ್‌ನಲ್ಲಿ ಪ್ರತಿವರ್ಷ ಮಾವು ಮೇಳ ಆಯೋಜಿಸಲಾಗುತ್ತಿದೆ.
(8 / 8)
ಅಕಾಲಿಕ ಮಳೆಯಿಂದ ಈ ಬಾರಿ ಮಾವು ಫಸಲು ಕುಸಿತವಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಇತರ ಗ್ಯಾಲರಿಗಳು