ಕನ್ನಡ ಸುದ್ದಿ  /  Photo Gallery  /  Kitchen Hacks How To Get Rid Of Rats At Home Plants To Repel Rats Mice Control Tips Mgb

ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ

  • How to get rid of rats: ಮನೆಯಲ್ಲಿ ಇಲಿಗಳ ಕಾಟದಿಂದ ಬೇಸತ್ತಿದ್ದೀರಾ? ಇಲಿಗಳನ್ನು ಸಾಯಿಸಲು ವಿಷದ ಬಿಸ್ಕತ್​ ಸೇರಿದಂತೆ ಇತರ ಕ್ರಮಗಳನ್ನು ಕೈಗೊಂಡು ಆದರೂ ಅವುಗಳನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲವೇ? ಹಾಗಿದ್ರೆ ಇಲ್ಲಿದೆ ಸಲಹೆಗಳು..

ಮನೆಯೊಳಗೆ ಇಲಿಗಳು ಇದ್ದರೆ ಅದರಂತಹ ಕಿರಿಕಿರಿ ಮತ್ತೊಂದಿಲ್ಲ. ಬಟ್ಟೆ, ಚೀಲ, ಆಹಾರ ಪದಾರ್ಥಗಳು ಸೇರಿದಂತೆ ಮನೆಯಲ್ಲಿನ ಅನೇಕ ವಸ್ತುಗಳನ್ನು ಹಾನಿಗೊಳಿಸುತ್ತದೆ. ಅಲ್ಲದೇ ಮನೆಯಲ್ಲಿ ಇಲಿಗಳು ಇದ್ರೆ ಹಾವು ಕೂಡ ಆಗಾಗ ಎಂಟ್ರಿ ಕೊಡ್ತಾ ಇರುತ್ತದೆ. ಹೀಗಾಗಿ ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯಗಳು. ಇದಕ್ಕಾಗಿ ನೀವು ಮನೆಯಲ್ಲಿ ಕೆಲವು ಗಿಡಗಳನ್ನು ಬೆಳೆಸಿದ್ರೆ ಸಾಕು. ಇದು ಮನೆಯ ಅಂದವನ್ನೂ ಹೆಚ್ಚಿಸತ್ತೆ, ಇಲಿಗಳ ಕಾಟದಿಂದಲೂ ಮುಕ್ತಿ ನೀಡತ್ತೆ. 
icon

(1 / 6)

ಬೆಳ್ಳುಳ್ಳಿ ಗಿಡ: ಇದರ ಕಟುವಾದ ವಾಸನೆಯು ಇಲಿಗಳು ನಿಮ್ಮ ಮನೆಯಿಂದ ದೂರ ಉಳಿಯುವಂತೆ ಮಾಡುತ್ತದೆ. 
icon

(2 / 6)

ಲ್ಯಾವೆಂಡರ್ ಸಸ್ಯ: ಇದರ ವಾಸನೆಗೆ ಕೂಡ ಇಲಿಗಳು ದೂರ ಹೋಗುತ್ತದೆ. ಲ್ಯಾವೆಂಡರ್ ಸಸ್ಯದ ಕಾಂಡವನ್ನು ಸಹ ಇಲಿಗಳು ಹೆಚ್ಚು ತಿರುಗಾಡುವ ಪ್ರದೇಶದಲ್ಲಿ ಇರಿಸಬಹುದು.
icon

(3 / 6)

ಪುದೀನ ಗಿಡ: ಇಲಿಗಳು ಪುದೀನಾ ವಾಸನೆಯಿಂದ ಓಡಿಹೋಗುತ್ತವೆ. ಹಾಗೆಯೇ ಪುದೀನಾ ಎಲೆಗಳನ್ನು ಎಣ್ಣೆಯನ್ನು ಕುದಿಸಿ ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಇಲಿಗಳು ಬರುವ ಜಾಗದಲ್ಲಿ ಇಟ್ಟರೂ ಇಲಿಗಳು ಹತ್ತಿರ ಬರುವುದಿಲ್ಲ.  
icon

(4 / 6)

ನಿಂಬೆ ಹುಲ್ಲು: ಇದರ ವಾಸನೆಗೆ ಇಲಿಗಳು ಮಾತ್ರವಲ್ಲ ಕೀಟಗಳು ಸಹ ಮನೆಯಿಂದ ದೂರ ಓಡಿಹೋಗುತ್ತವೆ. 
icon

(5 / 6)

ಈರುಳ್ಳಿ ಗಿಡ: ಇಲಿಗಳನ್ನು ದೂರ ಇರಿಸಲು ಈರುಳ್ಳಿ ಗಿಡ ಕೂಡ ಸಹಕಾರಿ. ಹಾಗೆಯೆ ಕತ್ತರಿಸಿದ ಈರುಳ್ಳಿಯ ಕಟುವಾದ ವಾಸನೆ ಕೂಡ ಇಲಿಗಳ ಕಣ್ಣಿಗೆ ಹಾನಿ ಉಂಟುಮಾಡುತ್ತದೆ. ಹಸಿ ಈರುಳ್ಳಿಯನ್ನು ಇಲಿ ನುಂಗಿದರೆ ಇಲಿಗಳ ಆರೋಗ್ಯ ಕೆಡುತ್ತದೆ. ಹೀಗಾಗಿ ಅವು ಮತ್ತೆ ಮನೆಒಳಗೆ ಬರುವುದಿಲ್ಲ. 
icon

(6 / 6)

ಇತರ ಗ್ಯಾಲರಿಗಳು