ಹಣ್ಣು-ತರಕಾರಿ ಸ್ವಚ್ಛಗೊಳಿಸುವ ಸರಿಯಾದ ವಿಧಾನವಿದು; ಕೊಳೆ ಜೊತೆಗೆ ಸೂಕ್ಷ್ಮಜೀವಿಗಳನ್ನೂ ತೊಡೆದುಹಾಕಲು ಈ ಟಿಪ್ಸ್ ಅನುಸರಿಸಿ
ಹಣ್ಣು-ತರಕಾರಿಗಳನ್ನು ಸರಿಯಾಗಿ ತೊಳೆಯುವುದು ಅತ್ಯಗತ್ಯ. ಅವುಗಳ ಮೇಲಿರುವ ಕೀಟನಾಶಕಗಳು, ಕೊಳಕು ಹಾಗೂ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಹಣ್ಣು-ತರಕಾರಿಗಳನ್ನು ತೊಳೆಯುವ ಸರಿಯಾದ ಮಾರ್ಗ ಇಲ್ಲಿದೆ.
(1 / 10)
ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೀರಾ? ಆಹಾರದಲ್ಲಿ ಬಳಸುತ್ತಿರುವ ಕೊಳಕು ತರಕಾರಿಗಳು ಇದಕ್ಕೆ ಕಾರಣವಾಗಿರಬಹುದು. ಹಣ್ಣು-ತರಕಾರಿಗಳು ರಾಸಾಯನಿಕಗಳಿಂದ ತುಂಬಿರುತ್ತವೆ. ಅದು ಅವುಗಳನ್ನು ಹಾನಿಕಾರವಾಗಿಸುತ್ತದೆ. ಹಣ್ಣು-ತರಕಾರಿಗಳಲ್ಲಿನ ಬ್ಯಾಕ್ಟೀರಿಯಾ ತೆಗೆಯಲು ಅವುಗಳನ್ನು ಚೆನ್ನಾಗಿ ತೊಳೆಯುವುದು ಅವಶ್ಯಕ. ಹಣ್ಣು-ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಲಾಗಿದೆಯೇ ಎಂದು ತಿಳಿದುಕೊಳ್ಳಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
(PC: Canva)(2 / 10)
ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ
ತರಕಾರಿಗಳನ್ನು ತೊಳೆಯುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ನಿಮ್ಮ ಕೈಗಳು ಕೊಳಕಾಗಿದ್ದರೆ ಹಣ್ಣುಗಳು ಅಥವಾ ತರಕಾರಿಗಳು ಸಹ ಕೊಳಕಾಗಬಹುದು. ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಲು ಸೋಪ್ ಬಳಸಿ.
(PC: Canva)(3 / 10)
ಹರಿಯುವ ನೀರಿನಲ್ಲಿ ತರಕಾರಿಗಳನ್ನು ತೊಳೆಯುವುದು
ಹರಿಯುವ ನೀರಿನಡಿಯಲ್ಲಿ ಹಣ್ಣು-ತರಕಾರಿಗಳನ್ನು ತೊಳೆಯಿರಿ. ಇದಕ್ಕಾಗಿ ನದಿಗೆ ಹೋಗಬೇಕೆಂದಿಲ್ಲ. ಮನೆಯ ನಳ್ಳಿಯಲ್ಲಿ ನಿರಂತರವಾಗಿ ನೀರು ಬಿಡುತ್ತಾ ತೊಳೆಯಬಹುದು. ಅಥವಾ ಮೈಕ್ರೋಫೈಬರ್ ಟವಲ್‌ನಿಂದ ಕೊಳೆಯನ್ನು ತೆಗೆಯಬಹುದು. ಗಟ್ಟಿಯಾದ ಹಣ್ಣು-ತರಕಾರಿಗಳ ಮೇಲೆ ಈ ರೀತಿ ಮಾಡುವುದು ಉತ್ತಮ.
(PC: Canva)(4 / 10)
ಸೊಪ್ಪು ತರಕಾರಿಗಳನ್ನು ತೊಳೆಯುವುದು
ಸೊಪ್ಪು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಅದರಲ್ಲಿ ತರಕಾರಿಗಳನ್ನು ಅದ್ದಿ. 5 ನಿಮಿಷಗಳ ನಂತರ ಸೊಪ್ಪು ತರಕಾರಿಯನ್ನು ಕೈಗಳಿಂದ ಚೆನ್ನಾಗಿ ತೊಳೆಯಿರಿ. ನೀರನ್ನು ಸೋಸಿ, ಮತ್ತೆ ಅದ್ದಿ ತೊಳೆಯಿರಿ. ಈ ಪ್ರಕ್ರಿಯೆಯನ್ನು ಎರಡು ಬಾರಿ ಪುನರಾವರ್ತಿಸಿ. ನಂತರ ದೊಡ್ಡ ಜರಡಿಯಲ್ಲಿ ಇದನ್ನು ಹಾಕಿ ಹೆಚ್ಚುವರಿ ನೀರನ್ನು ತೆಗೆದು ಒಣಗಿಸಿ.
(PC: Pinterest )(5 / 10)
ಅಣಬೆ ಸ್ವಚ್ಛಗೊಳಿಸುವುದು
ಅಣಬೆ ಸ್ವಚ್ಛಗೊಳಿಸುವಾಗ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ತರಕಾರಿಗಳನ್ನು ತೊಳೆಯುವ ರೀತಿಯಲ್ಲಿ ಅಣಬೆ ಸ್ವಚ್ಛಗೊಳಿಸಲು ಆಗುವುದಿಲ್ಲ. ಇದಕ್ಕೆ ಉತ್ತಮ ಮಾರ್ಗವೆಂದರೆ ಒದ್ದೆಯಾದ ಬಟ್ಟೆಯಿಂದ ಒರೆಸುವುದು. ಇತರೆ ತರಕಾರಿಗಳನ್ನು ತೊಳೆಯುವಂತೆ ನೀರಿನಿಂದ ಅಣಬೆ ತೊಳೆಯುವುದರಿಂದ ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಇದು ಅವುಗಳ ಆಕಾರವನ್ನು ಹಾಳುಮಾಡಬಹುದು.
(PC: Pinterest )(6 / 10)
ಕೊಳೆತಿರುವ ಹಣ್ಣು-ತರಕಾರಿಯನ್ನು ಕತ್ತರಿಸಿ
ಹಣ್ಣು-ತರಕಾರಿಗಳ ಮೇಲಿನ ಕಪ್ಪು ಕಲೆಗಳನ್ನು ನೀವು ಗಮನಿಸಿರಬಹುದು. ಅವುಗಳನ್ನು ಯಾರೂ ಕೂಡ ತಿನ್ನಲು ಬಯಸುವುದಿಲ್ಲ. ಹೀಗಾಗಿ ಇಂತಹ ಹಣ್ಣು-ತರಕಾರಿಗಳನ್ನು ನೀರಿನಿಂದ ಸ್ವಚ್ಛಗೊಳಿಸಿದ ನಂತರ, ಕೊಳೆತಿರುವುದನ್ನು ಕತ್ತರಿಸಿ.
(PC: Pinterest )(7 / 10)
ಸ್ಕ್ರಬ್ ಮಾಡಿ
ಗಟ್ಟಿಯಾದ ಸಿಪ್ಪೆಯನ್ನು ಹೊಂದಿರುವ ಹಲವು ಹಣ್ಣು-ತರಕಾರಿಗಳಿವೆ. ಅವುಗಳಿಂದ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುವುದು ಕಷ್ಟ. ಹೀಗಾಗಿ ಅಂತಹವುಗಳನ್ನು ಸ್ಕ್ರಬ್ ಮಾಡಿ. ಅದರ ಸಿಪ್ಪೆಗೆ ಯಾವುದೇ ಹಾನಿಯಾಗದಂತೆ ಬ್ರಷ್‌ನಿಂದ ಉಜ್ಜಿ.
(PC: Pinterest )(8 / 10)
ಬಿಸಿ ನೀರಿನಲ್ಲಿ ನೆನೆಸಿ
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಈಗ ತರಕಾರಿಗಳನ್ನು ಈ ಬಿಸಿ ನೀರಿನಲ್ಲಿ 5 ರಿಂದ 8 ನಿಮಿಷಗಳ ಕಾಲ ನೆನೆಸಿಡಿ. ನಂತರ ಬಿಸಿ ನೀರಿನಿಂದ ತೆಗೆದು ಐಸ್ ಕ್ಯೂಬ್ ಸೇರಿಸಿ. ನಂತರ ತರಕಾರಿಯನ್ನು ಒಣಗಿಸಿ. ಈ ಪ್ರಕ್ರಿಯೆಯು ತರಕಾರಿಗಳಿಂದ ಹೆಚ್ಚಿನ ಕೀಟನಾಶಕಗಳನ್ನು ತೆಗೆದುಹಾಕಲು ಅತ್ಯುತ್ತಮ ಮಾರ್ಗ.
(Pinterest )(9 / 10)
ಸಾಬೂನ್ ಅಥವಾ ಡಿಟರ್ಜೆಂಟ್ ಬಳಸಬೇಡಿ
ಹಣ್ಣು-ತರಕಾರಿಗಳ ಮೇಲ್ಮೈ ಅನ್ನು ಸಾಬೂನಿನಿಂದ ತೊಳೆಯುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಭಾವಿಸಿದರೆ ಅದು ತಪ್ಪು ಕಲ್ಪನೆ. ಸಾಬೂನ್, ಸಿಪ್ಪೆಯ ಮೂಲಕ ಹಾಗೂ ತಿರುಳಿನ ಒಳಗೆ ಸುಲಭವಾಗಿ ಪ್ರವೇಶಿಸುತ್ತದೆ. ಇದರಿಂದ ಹಣ್ಣು-ತರಕಾರಿಗಳು ತಿನ್ನಲು ಯೋಗ್ಯವಾಗಿರುವುದಿಲ್ಲ. ಇದರ ಬದಲು ವಿನೆಗರ್ ಅನ್ನು ಬಳಸಬಹುದು.
(PC: Pinterest )ಇತರ ಗ್ಯಾಲರಿಗಳು