Fish Cleaning: ಕಾರಣ ತಿಳಿಯಿರಿ: ಮೀನು ಸ್ವಚ್ಛಗೊಳಿಸುವಾಗ ಅದನ್ನು ಉಪ್ಪು, ಅರಿಶಿನದಲ್ಲಿ ನೆನೆಸುವುದೇಕೆ?
- ಮೀನು ಸಾರು ಮಾಡುವ ಮುನ್ನ ಮೀನನ್ನು ಸ್ವಚ್ಛವಾಗಿ ತೊಳೆಯಬೇಕು. ಇಲ್ಲದಿದ್ದರೆ, ಸಾರಿನ ರುಚಿ ಕೆಡಬಹುದು. ಹಲವರು ಮೀನು ಸ್ವಚ್ಛ ಮಾಡುವಾಗ ನೀರು ಹಾಗೂ ಅರಿಸಿನದಲ್ಲಿ ಮೀನನ್ನು ನೆನೆಸಿ ಇಡುತ್ತಾರೆ. ಯಾವ ಕಾರಣಕ್ಕೆ ಹೀಗೆ ಮಾಡುತ್ತಾರೆ ನೋಡಿ.
- ಮೀನು ಸಾರು ಮಾಡುವ ಮುನ್ನ ಮೀನನ್ನು ಸ್ವಚ್ಛವಾಗಿ ತೊಳೆಯಬೇಕು. ಇಲ್ಲದಿದ್ದರೆ, ಸಾರಿನ ರುಚಿ ಕೆಡಬಹುದು. ಹಲವರು ಮೀನು ಸ್ವಚ್ಛ ಮಾಡುವಾಗ ನೀರು ಹಾಗೂ ಅರಿಸಿನದಲ್ಲಿ ಮೀನನ್ನು ನೆನೆಸಿ ಇಡುತ್ತಾರೆ. ಯಾವ ಕಾರಣಕ್ಕೆ ಹೀಗೆ ಮಾಡುತ್ತಾರೆ ನೋಡಿ.
(1 / 7)
ಮೀನು ಅಥವಾ ಕೋಳಿಯಂತಹ ಯಾವುದೇ ಮಾಂಸದ ಅಡುಗೆಗೂ ಮುನ್ನ ಅದನ್ನು ಚೆನ್ನಾಗಿ ತೊಳೆಯುತ್ತಾರೆ. ಆ ಸಂದರ್ಭ ಮಾಂಸವನ್ನು ಉಪ್ಪು ಹಾಗೂ ಅರಿಸಿನದಲ್ಲಿ ನೆನೆಸಿ ಇಡುತ್ತಾರೆ. ಇದು ಭಾರತದ ಪದ್ಧತಿಯಾದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಮೀನು ಸ್ವಚ್ಛ ಮಾಡುವಾಗ ಮೀನನ್ನು ಉಪ್ಪು, ಮೆಣಸು ಹಾಗೂ ಗಿಡಮೂಲಿಕೆಗಳೊಂದಿಗೆ ನೆನೆಸಿ ಇಡುತ್ತಾರೆ. ಈ ರೀತಿ ಮಾಡುವ ಉದ್ದೇಶವೇನು ಎಂಬ ಕುತೂಹಲ ನಿಮಗೂ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.
(2 / 7)
ಭಾರತೀಯ ಪಾಕಪದ್ಧತಿಯು ಬೇರೆ ದೇಶಗಳಿಗೆ ಹೋಲಿಸಿದರೆ ಭಿನ್ನವಾಗಿದೆ. ಇಲ್ಲಿ ಮಾಂಸಾಹಾರವಿರಲಿ ಸಸ್ಯಾಹಾರವಿರಲಿ ಅಡುಗೆ ಮಾಡುವ ಮುನ್ನ ಕೆಲವು ಕ್ರಮಗಳನ್ನು ಪಾಲಿಸುತ್ತಾರೆ. ಹಾಗೆಯೇ ಮೀನು ಸ್ವಚ್ಛ ಮಾಡುವಾಗ ಮೀನಿನ ಮಾಂಸಗಳನ್ನು ಉಪ್ಪು ಹಾಗೂ ಅರಿಸಿನದೊಂದಿಗೆ ನೆನೆಸುವುದು ವಾಡಿಕೆ. ಇದಕ್ಕೆ ಕಾರಣವೂ ಇದೆ. ಅರಿಸಿನ ಕೇವಲ ನಂಜು ನಿವಾರಕ ಮಾತ್ರವಲ್ಲ, ಇದು ಮೀನನ್ನು ಕೆಡದಂತೆ ಬಹಳ ಸಮಯದವರೆಗೆ ತಾಜಾವಾಗಿ ಇರಿಸುತ್ತದೆ.
(3 / 7)
ಹಸಿ ಮೀನುಗಳನ್ನು ಮ್ಯಾರಿನೇಟ್ ಮಾಡಲು ಅರಿಸಿನವನ್ನು ಬಳಸುವುದಕ್ಕೆ ಕಾರಣ ಅದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು. ಇದು ಸೂಕ್ಷ್ಮಜೀವಿಗಳು ಹಾಗೂ ಸೋಂಕುಗಳನ್ನು ಕೊಲ್ಲುತ್ತದೆ. ಉಪ್ಪು ಹಾಗೂ ಅರಿಸಿನವನ್ನು ನೀರಿನಲ್ಲಿ ಹಾಕಿ ಆ ನೀರಿನಲ್ಲಿ ಮೀನನ್ನು ನೆನೆಸಿ ಇಡುವುದಿರಿಂದ ಮೀನು ತಾಜಾವಾಗಿರುತ್ತದೆ. ಇದು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ.
(4 / 7)
ಉಪ್ಪು ಹಾಗೂ ಅರಿಸಿನನೊಂದಿಗೆ ಮೀನನ್ನು ಮ್ಯಾರಿನೇಟ್ ಮಾಡುವುದರಿಂದ ಪ್ರೊಟೀನ್ ಅಂಶ ಹೊರಹೋಗದಂತೆ ನೋಡಿಕೊಳ್ಳುತ್ತದೆ. ಇದು ಮೀನನ್ನು ತಾಜಾವಾಗಿರಿ, ಸಾರಿನ ರುಚಿ ಹೆಚ್ಚುವಂತೆ ಮಾಡುತ್ತದೆ.
(5 / 7)
ಹಸಿ ಮೀನನ್ನು ಉಪ್ಪು ಹಾಗೂ ಅರಿಸಿನದ ಜೊತೆಗೆ ನೆನೆಸುವುದು ಅಥವಾ ತೊಳೆಯುವುದು ಮಾಡುವುದರಿಂದ ಇದರ ವಾಸನೆ ದೂರಾಗುತ್ತದೆ. ಕೆಲವೊಮ್ಮೆ ಮೀನು ಕೊಂಚ ಹಾಳಾಗಿದ್ದರೆ ಈ ರೀತಿ ತೊಳೆಯುವುದರಿಂದ ವಾಸನೆ ತಿಳಿಯುವುದಿಲ್ಲ.
(6 / 7)
ಮೀನನ್ನು ಅರಿಸಿನ ಹಾಗೂ ಉಪ್ಪು ಸೇರಿಸಿ ತೊಳೆಯುವುದರಿಂದ ಮೀನು ಸಾರು ಅಥವಾ ಫ್ರೈ ಮಾಡುವಾಗ ರುಚಿ ಹೆಚ್ಚುತ್ತದೆ. ಮೊದಲೇ ಉಪ್ಪು, ಅರಿಸಿನ ಚೆನ್ನಾಗಿ ಹಿಡಿಯುವ ಕಾರಣ ಭಿನ್ನ ರುಚಿ ಸಿಗುತ್ತದೆ, ಟ್ರೈ ಮಾಡಿ.
ಇತರ ಗ್ಯಾಲರಿಗಳು