Sprout Ragi: ಸುಲಭ ವಿಧಾನದಲ್ಲಿ ರಾಗಿ ಮೊಳಕೆ ಬರಿಸಲು ಇಲ್ಲಿದೆ ಟ್ರಿಕ್ಸ್; ರಾಗಿ ಮೊಳಕೆಯ ದೋಸೆಯಂತೂ ಸಖತ್ ಟೇಸ್ಟಿ; ನೀವೂ ಟ್ರೈ ಮಾಡಿ
- ರಾಗಿ ಆರೋಗ್ಯಕ್ಕೆ ಬಹಳ ಉತ್ತಮ. ರಾಗಿಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯುತ್ತದೆ. ಮೊಳಕೆ ಬರಿಸಿದ ರಾಗಿಯಿಂದ ವಿಶೇಷ ಖಾದ್ಯಗಳನ್ನೂ ತಯಾರಿಸಬಹುದು. ಆದ್ರೆ ಕೆಲವರು ಮನೆಯಲ್ಲಿ ರಾಗಿಯನ್ನು ಚೆನ್ನಾಗಿ ಮೊಳಕೆ ಬರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಟಿಪ್ಸ್.
- ರಾಗಿ ಆರೋಗ್ಯಕ್ಕೆ ಬಹಳ ಉತ್ತಮ. ರಾಗಿಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯುತ್ತದೆ. ಮೊಳಕೆ ಬರಿಸಿದ ರಾಗಿಯಿಂದ ವಿಶೇಷ ಖಾದ್ಯಗಳನ್ನೂ ತಯಾರಿಸಬಹುದು. ಆದ್ರೆ ಕೆಲವರು ಮನೆಯಲ್ಲಿ ರಾಗಿಯನ್ನು ಚೆನ್ನಾಗಿ ಮೊಳಕೆ ಬರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಟಿಪ್ಸ್.
(1 / 9)
ರಾಗಿ ಭಾರತದಲ್ಲಿ ಬಹುಬಳಕೆಯ ಧಾನ್ಯ. ಇದು ಪೋಷಕಾಂಶಗಳ ಆಗರ. ರಾಗಿಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಮೊಳಕೆ ಬರಿಸಿದ ರಾಗಿ ಆರೋಗ್ಯಕ್ಕೆ ಬಹಳ ಉತ್ತಮ. ಇದರಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಸೇವಿಸುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ. ರಾಗಿ ಮೊಳಕೆ ಬರಿಸುವ ವಿವಿಧ ಹಂತಗಳನ್ನು ತಿಳಿಯಿರಿ.
(3 / 9)
ಮೊದಲು ರಾಗಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ರಾತ್ರಿಯಿಡಿ ಅದನ್ನು ನೀರಿನಲ್ಲಿ ನೆನೆ ಹಾಕಿ. ಬೆಳಗೆದ್ದು ನೀರು ಸೋಸಿ ಒಂದು ಪಾತ್ರೆಯ ಮೇಲೆ ಮಸ್ಲಿನ್ ಹರಡಿ. ಅದರ ಮೇಲೆ ರಾಗಿ ಹರಡಿ. (Hand made)
(6 / 9)
ಇದನ್ನು ಮನೆಯಲ್ಲಿ ಬೆಚ್ಚಗಿರುವ ಜಾಗದಲ್ಲಿ ಜಾಗದಲ್ಲಿ ಈ ಪಾತ್ರೆಯನ್ನು ಇರಿಸಿ. 4 ರಿಂದ 24 ಗಂಟೆ ಕಾಲ ಹಾಗೆಯೇ ಇರಿಸಬೇಕು. (Hand made)
(8 / 9)
ರಾಗಿ ಮೊಳಕೆಯ ದೋಸೆ: ಮೊಳಕೆ ಬರಿಸಿದ ರಾಗಿಯಿಂದ ದೋಸೆ, ಇಡ್ಲಿಯಂತಹ ತಿನಿಸುಗಳನ್ನು ತಯಾರಿಸಬಹುದು. ಇದು ಸಖತ್ ಟೇಸ್ಟಿ ಹಾಗೂ ಹೆಲ್ತಿ ಆಗಿರುತ್ತದೆ. ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹೀಗಿವೆ. ಮೊಳಕೆ ಬರಿಸಿದ ರಾಗಿ, ಉದ್ದಿನ ಬೇಳೆ, ಇಡ್ಲಿ ಅಕ್ಕಿ, ಮೆಂತ್ಯೆ, ಉಪ್ಪು.
(9 / 9)
ಮೊಳಕೆ ಬರಿಸಿದ ರಾಗಿ ದೋಸೆ ತಯಾರಿಸುವುದು: ಒಂದು ಪಾತ್ರೆಯಲ್ಲಿ ಉದ್ದಿನಬೇಳೆ ಹಾಗೂ ಮೆಂತ್ಯವನ್ನು ನೆನೆಸಿ. ಇನ್ನೊಂದು ಪಾತ್ರೆಯಲ್ಲಿ ಅಕ್ಕಿ ನೆನೆಸಿ. ಇದನ್ನು 6 ರಿಂದ 8 ಗಂಟೆಗಳ ಕಾಲ ನೆನೆ ಹಾಕಬೇಕು. ಮೊದಲು ಮೊಳಕೆ ಬರಿಸಿ ಇರಿಸಿಕೊಂಡ ರಾಗಿಯನ್ನು ರುಬ್ಬಿಟ್ಟುಕೊಳ್ಳಬೇಕು. ನಂತರ ಅಕ್ಕಿ ಹಾಗೂ ಉದ್ದನ್ನು ಬೇರೆ ಬೇರೆಯಾಗಿ ರುಬ್ಬಿಕೊಂಡು ಈ ಎಲ್ಲವನ್ನೂ ಮಿಶ್ರಣ ಮಾಡಬೇಕು. ಇದನ್ನು 10 ರಿಂದ 12 ಗಂಟೆಗಳ ಕಾಲ ಹುದಗಲು ಬಿಡಬೇಕು. ನಂತರ ತುಪ್ಪ ಸವರಿದ ಕಾವಲಿ ಮೇಲೆ ಅಗಲವಾಗಿ ಹರಡಿ ಎರಡೂ ಕಡೆ ಚೆನ್ನಾಗಿ ಬೇಯಿಸಬೇಕು. ಈ ದೋಸೆಯನ್ನು ಕೊಬ್ಬರಿ ಚಟ್ಟಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಇತರ ಗ್ಯಾಲರಿಗಳು