ನಿಮ್ಮನೆ ಮಿಕ್ಸಿ ಬಳಸಿ ಬಳಸಿ ಹಳದಿ ಬಣ್ಣಕ್ಕೆ ತಿರುಗಿದ್ರೆ ಕ್ಲೀನ್ ಮಾಡಲು ಈ ಟ್ರಿಕ್ಸ್ ಬಳಸಿ, ಹೊಸದರಂತೆ ಪಳ ಪಳ ಹೊಳೆಯುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮನೆ ಮಿಕ್ಸಿ ಬಳಸಿ ಬಳಸಿ ಹಳದಿ ಬಣ್ಣಕ್ಕೆ ತಿರುಗಿದ್ರೆ ಕ್ಲೀನ್ ಮಾಡಲು ಈ ಟ್ರಿಕ್ಸ್ ಬಳಸಿ, ಹೊಸದರಂತೆ ಪಳ ಪಳ ಹೊಳೆಯುತ್ತೆ

ನಿಮ್ಮನೆ ಮಿಕ್ಸಿ ಬಳಸಿ ಬಳಸಿ ಹಳದಿ ಬಣ್ಣಕ್ಕೆ ತಿರುಗಿದ್ರೆ ಕ್ಲೀನ್ ಮಾಡಲು ಈ ಟ್ರಿಕ್ಸ್ ಬಳಸಿ, ಹೊಸದರಂತೆ ಪಳ ಪಳ ಹೊಳೆಯುತ್ತೆ

ಮನೆಯಲ್ಲಿ ಮಿಕ್ಸಿಯನ್ನು ಬಹಳ ದಿನಗಳ ಕಾಲ ಬಳಸಿದ ನಂತರ ಅದು ಹಳದಿ ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. ಮಿಕ್ಸಿಯ ಹಳದಿ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್‌.

ನಿಮ್ಮ ಮನೆಯಲ್ಲಿ ಬಿಳಿ ಬಣ್ಣದ ಮಿಕ್ಸಿ ಇದ್ದರೆ ಅದನ್ನು ಕೆಲವು ದಿನಗಳ ಕಾಲ ಬಳಸಿದ ನಂತರ ಅದು ನಿಧಾನಕ್ಕೆ ಹಳದಿ ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. ಎಷ್ಟು ಬಾರಿ ಉಜ್ಜಿ ತೊಳೆದರೂ ಮಿಕ್ಸಿಯ ಮೇಲ್ಮೈ  ಬಣ್ಣ ಹಳದಿಯಾಗಿಯೇ ಇರುತ್ತದೆ. ಇದು ಮಿಕ್ಸಿಯ ನೋಟವನ್ನು ಬದಲಿಸುತ್ತದೆ. ಹಾಗಂತ ಇದನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಎಂದಲ್ಲ. ಈ ಕೆಲವು ಸಿಂಪಲ್ ಟ್ರಿಕ್ಸ್ ಮೂಲಕ ಮಿಕ್ಸಿ ಮೇಲಿನ ಹಳದಿ ಕಲೆ ಸ್ವಚ್ಛಗೊಂಡು ಪಳ ಪಳ ಹೊಸದರಂತೆ ಹೊಳೆಯುತ್ತದೆ.
icon

(1 / 7)

(youtube)

ಒಂದು ಚಮಚ ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣ ಮಾಡಿ. ಅದನ್ನು ಒಂದು ಬಟ್ಟೆ ಅಥವಾ ಸ್ಪಂಜ್ ಸಹಾಯದಿಂದ ಮಿಕ್ಸಿಯ ಮೇಲೆ ಚೆನ್ನಾಗಿ ಉಜ್ಜಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಚೆನ್ನಾಗಿ ಸ್ವಚ್ಛ ಮಾಡಿ. ಈ ಪರಿಹಾರವು ಹಳದಿ ಕಲೆಗಳು ಮತ್ತು ವಾಸನೆಯನ್ನು ತೆಗೆದುಹಾಕಲು ಪರಿಣಾಮಕಾರಿ ಮಾರ್ಗವಾಗಿದೆ.
icon

(2 / 7)

ನಿಂಬೆ ರಸವನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ಕಲೆಗಳಿರುವ ಅಥವಾ ಹಳದಿ ಬಣ್ಣಕ್ಕೆ ತಿರುಗಿರುವ ಜಾಗಕ್ಕೆ ಹಚ್ಚಿ ಹಾಗೆಯೇ ಬಿಡಿ. 15 ನಿಮಿಷಗಳ ನಂತರ, ಸ್ಪಂಜಿನೊಂದಿಗೆ ಉಜ್ಜುತ್ತಾ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ಈಗ ಹಳದಿ ಕಲೆಗಳೆಲ್ಲಾ ಚೆನ್ನಾಗಿ ಸ್ವಚ್ಛಗೊಂಡು ಮಿಕ್ಸಿ ಹೊಸರಂತೆ ಕಾಣುತ್ತದೆ.
icon

(3 / 7)

ಬಿಸಿನೀರು ಮತ್ತು ಪಾತ್ರೆ ತೊಳೆಯುವ ದ್ರಾವಣವನ್ನು ಮಿಶ್ರಣ ಮಾಡಿ. ಇದನ್ನು ಮಿಕ್ಸಿಯ ಹಳದಿ ಭಾಗಕ್ಕೆ ಹಚ್ಚಿ, 20 ನಿಮಿಷಗಳ ಕಾಲ ಹಾಗೆ ಬಿಡಿ. ಇದಾದ ನಂತರ ಬ್ರಷ್ ಸಹಾಯದಿಂದ ಮಿಕ್ಸಿಯನ್ನು ಸ್ವಚ್ಛಗೊಳಿಸಿ. ಈ ಪರಿಹಾರವು ತಿಳಿ ಹಳದಿ ಕಲೆಗಳು ಮತ್ತು ಎಣ್ಣೆಯಂಶದಂತಹ ಕಲೆಗಳನ್ನು ಪರಿಣಾಮಕಾರಿ ತೆಗೆದು ಹಾಕಲು ಸಹಾಯ ಮಾಡುತ್ತದೆ.
icon

(4 / 7)

(Pic Credit: Shutterstock)

ತಿಳಿ ಹಳದಿ ಕಲೆಗಳನ್ನು ಸ್ವಚ್ಛಗೊಳಿಸಲು, ಶೇಕಡಾ 3 ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಕಲೆಯ ಮೇಲೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ. ಪ್ಲಾಸ್ಟಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಭಾಗಗಳಲ್ಲಿ ಮಾತ್ರ ಎಚ್ಚರಿಕೆಯಿಂದ ಬಳಸಿ.
icon

(5 / 7)

ಅರ್ಧ ಕಪ್ ಬಿಳಿ ವಿನೆಗರ್ ಮತ್ತು ಬಿಸಿ ನೀರನ್ನು ಸೇರಿಸಿ ಮಿಕ್ಸಿಯ ಹಳದಿ ಕಲೆ ಇರುವ ಭಾಗಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಇದಾದ ನಂತರ ಬ್ರಷ್‌ನಿಂದ ಸ್ವಚ್ಛಗೊಳಿಸಿ. ವಿನೆಗರ್ ಮೊಂಡುತನದ ಕಲೆಗಳು ಮತ್ತು ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಿಕ್ಸಿ ಜಾರ್‌ ಅನ್ನು ಕೂಡ ಹೀಗೆ ಕ್ಲೀನ್ ಮಾಡಬಹುದು.
icon

(6 / 7)

ಪ್ರತಿ ಬಳಕೆಯ ನಂತರ ಮಿಕ್ಸಿ ಹಾಗೂ ಜಾರ್ ಅನ್ನು ತಕ್ಷಣವೇ ಬೆಚ್ಚಗಿನ ನೀರು ಮತ್ತು ಪಾತ್ರೆ ತೊಳೆಯುವ ದ್ರವದಿಂದ ತೊಳೆಯಿರಿ. ಇದು ಕಲೆಗಳು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಮಿಕ್ಸಿ ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು.
icon

(7 / 7)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು