ನಾನ್‌ವೆಜ್ ಅಡುಗೆ ಮಾಡಿದ ನಂತರ ಪಾತ್ರೆಯಿಂದ ವಾಸನೆ ಹೋಗ್ತಿಲ್ವಾ, ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್, ಟ್ರೈ ಮಾಡಿ
- Cleaning tips: ಅಡುಗೆ ಮಾಡುವುದು ಸುಲಭ, ಆದರೆ ಪಾತ್ರೆ ತೊಳೆಯೋದೆ ಕಷ್ಟ ಅಂತ ಹಲವರು ಹೇಳುವುದನ್ನು ನೀವು ಕೇಳಿರಬಹುದು. ಕೆಲವು ಭಕ್ಷಗಳನ್ನು ಬೇಯಿಸಿದ ನಂತರ ಪಾತ್ರೆಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಟ್ರಿಕ್ಸ್, ನಿಮಗೆ ಈ ಐಡಿಯಾ ಇಷ್ಟವಾಗಬಹುದು ನೋಡಿ.
- Cleaning tips: ಅಡುಗೆ ಮಾಡುವುದು ಸುಲಭ, ಆದರೆ ಪಾತ್ರೆ ತೊಳೆಯೋದೆ ಕಷ್ಟ ಅಂತ ಹಲವರು ಹೇಳುವುದನ್ನು ನೀವು ಕೇಳಿರಬಹುದು. ಕೆಲವು ಭಕ್ಷಗಳನ್ನು ಬೇಯಿಸಿದ ನಂತರ ಪಾತ್ರೆಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಟ್ರಿಕ್ಸ್, ನಿಮಗೆ ಈ ಐಡಿಯಾ ಇಷ್ಟವಾಗಬಹುದು ನೋಡಿ.
(1 / 8)
ಮಾಂಸ ಅಥವಾ ಮೊಟ್ಟೆಗಳನ್ನು ಬೇಯಿಸಿದ ನಂತರ ಪಾತ್ರೆಯಿಂದ ವಾಸನೆ ಬರಲು ಶುರುವಾಗುತ್ತದೆ. ಇದನ್ನು ಎಷ್ಟು ಬಾರಿ ತೊಳೆದರೂ ಕೆಲವೊಮ್ಮೆ ಸ್ವಚ್ಛವಾಗುವುದಿಲ್ಲ
(2 / 8)
ಹಾಗಂತ ಪಾತ್ರೆಯನ್ನು ಎಸೆಯಲು ಸಾಧ್ಯವಿಲ್ಲ. ಅದಕ್ಕಾಗಿ ಮನೆಯಲ್ಲಿ ನೀವು ಈ ಕೆಲವು ಟಿಪ್ಸ್‌ಗಳನ್ನು ಟ್ರೈ ಮಾಡಬೇಕು. ಇದರಿಂದ ಸುಲಭವಾಗಿ ಪಾತ್ರೆ ಸ್ವಚ್ಛವಾಗುತ್ತದೆ, ಮಾತ್ರ ವಾಸನೆ ಚೂರು ಇಲ್ಲದಂತಾಗುತ್ತದೆ.
(3 / 8)
ಕಡಲೆಹಿಟ್ಟು: ನಿಮಗೆ ಅಚ್ಚರಿಯಾಗಬಹುದು, ಆದರೆ ಕಡಲೆಹಿಟ್ಟು ಪಾತ್ರೆಯಿಂದ ವಾಸನೆಯನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ. ಇದರಲ್ಲಿ ವಾಸನೆ ಹೀರಿಕೊಳ್ಳುವ ಗುಣವಿದೆ. ಇದು ಪಾತ್ರೆಯಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಡಿಶ್‌ವಾಶರ್ ನೀರಿನ ಜೊತೆ ಕಡಲೆಹಿಟ್ಟನ್ನು ಮಿಕ್ಸ್ ಮಾಡಿ ಪಾತ್ರೆಗೆ ಹಾಕಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
(4 / 8)
ನಿಂಬೆಹಣ್ಣು: ನಿಂಬೆ ಆಮ್ಲೀಯ ಗುಣ ಹೊಂದಿದೆ. ಇದು ಪಾತ್ರೆಯಿಂದ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹ ಸಹಕಾರಿ. ಪಾತ್ರೆಯನ್ನು ಸಂಪೂರ್ಣವಾಗಿ ನೀರಿನಿಂದ ತುಂಬಿಸಿ. ಅದಕ್ಕೆ ನಿಂಬೆ ರಸವನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನೆನೆಯಲು ಬಿಡಿ. ಅದರ ನಂತರ, ಪಾತ್ರೆಯನ್ನು ತೊಳೆಯಬೇಕು ಅಥವಾ ವಾಸನೆಯನ್ನು ಹೋಗಲಾಡಿಸಲು ಪಾತ್ರೆಯನ್ನು ನಿಂಬೆ ಸಿಪ್ಪೆಯಿಂದ ಉಜ್ಜಿ.
(5 / 8)
ವಿನೆಗರ್: ಇದು ಅತ್ಯುತ್ತಮ ಶುಚಿಗೊಳಿಸುವ ಗುಣಗಳನ್ನು ಹೊಂದಿದೆ. ಇದು ಪಾತ್ರೆಗಳಿಂದ ವಾಸನೆಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಮೊದಲು ಪಾತ್ರೆಯನ್ನು ತೊಳೆಯಿರಿ. ನಂತರ ಪಾತ್ರೆಯ ಮೇಲೆ ಸ್ವಲ್ಪ ವಿನೆಗರ್ ಸಿಂಪಡಿಸಿ. ಪಾತ್ರೆಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ. ನಂತರ ಬಿಸಿ ನೀರಿನಿಂದ ತೊಳೆಯಿರಿ.
(6 / 8)
ದಾಲ್ಚಿನ್ನಿ: ಪಾತ್ರೆಯಿಂದ ಕೆಟ್ಟ ವಾಸನೆ ಬಂದರೆ ದಾಲ್ಚಿನ್ನಿ ಬಳಸಬಹುದು. ಒಂದು ಪಾತ್ರೆಯಲ್ಲಿ ದಾಲ್ಚಿನ್ನಿ ಪುಡಿ ಅಥವಾ ಎರಡು ಸಣ್ಣ ತುಂಡುಗಳನ್ನು ಹಾಕಿ ನೀರು ಸುರಿಯಿರಿ ಮತ್ತು ಸ್ವಲ್ಪ ಬಿಸಿ ಮಾಡಿ. ತಣ್ಣಗಾದ ನಂತರ, ನೀರನ್ನು ಬಾಗಿ ಒಮ್ಮೆ ತೊಳೆಯಬೇಕು.
(7 / 8)
ಕಾಫಿ ಪುಡಿ: ಕಾಫಿ ಪುಡಿಯನ್ನು ಪಾತ್ರೆ ವಾಸನೆಯನ್ನು ನಿವಾರಿಸಲು ಸಹ ಬಳಸಬಹುದು. ಇದರಲ್ಲಿರುವ ಸಾರಜನಕವು ವಾಸನೆಯನ್ನು ಹೊಗಲಾಡಿಸುತ್ತದೆ. ಮೊದಲು ಒಂದು ಚಮಚ ಕಾಫಿ ಪುಡಿಯನ್ನು ಪಾತ್ರೆಯಲ್ಲಿ ಹಾಕಿ ನಂತರ ಅದನ್ನು ನೀರಿನಿಂದ ತುಂಬಿಸಿ. ಇದನ್ನು ಒಲೆಯಲ್ಲಿ ಹಾಕಿ ಕೆಲವು ನಿಮಿಷ ಕುದಿಸಿ ಸ್ಟೌ ಆಫ್ ಮಾಡಿ. 15 ನಿಮಿಷಗಳ ಕಾಲ ನೆನೆಸಿ. ಅದರ ನಂತರ ಸ್ವಚ್ಛಗೊಳಿಸಿ.
ಇತರ ಗ್ಯಾಲರಿಗಳು