ಅಡುಗೆ ಮಾಡುವವರಿಗೆ ಈರುಳ್ಳಿಗೆ ಸಂಬಂಧಿಸಿದ ಈ ಟ್ರಿಕ್ಸ್ ಗೊತ್ತಿದ್ರೆ ಕಣ್ಣೀರು ಬರೋಲ್ಲ, ಅಡುಗೆ ರುಚಿನೂ ಕೆಡೊಲ್ಲ
ಭಾರತದಲ್ಲಿ ದಿನನಿತ್ಯದ ಅಡುಗೆಗೆ ಈರುಳ್ಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈರುಳ್ಳಿ ಕಟ್ ಮಾಡುವಾಗ ಕಣ್ಣೀರು ಬರಬಾರದು, ಜೊತೆಗೆ ಅಡುಗೆ ರುಚಿನೂ ಹೆಚ್ಚಬೇಕು ಅಂದ್ರೆ ಅಡುಗೆ ಮಾಡುವವರಿಗೆ ಈ ಟ್ರಿಕ್ಸ್ ಗೊತ್ತಿರಬೇಕು.
(1 / 8)
ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿಗೆ ವಿಶೇಷ ಸ್ಥಾನವಿದೆ. ಬಹುತೇಕ ಅಡುಗೆಗೆ ಈರುಳ್ಳಿ ಬೇಕೇ ಬೇಕು. ಸಾರು, ಸಾಂಬಾರ್ಗಂತೂ ಈರುಳ್ಳಿ ಇಲ್ಲದೇ ರುಚಿಯೇ ಬರುವುದಿಲ್ಲ. ಈರುಳ್ಳಿ ಸೇರಿಸಿದ ಅಡುಗೆ ಖಾದ್ಯಗಳ ರುಚಿ ನಿಜಕ್ಕೂ ಅದ್ಭುತ. ನೀವು ಅಡುಗೆಗೆ ಪ್ರತಿದಿನ ಈರುಳ್ಳಿ ಬಳಸುವವರಾದರೆ ಈ ಕೆಲವು ಸಲಹೆಗಳು ನಿಮಗೆ ತಿಳಿದಿರಬೇಕು. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದೇ ಇರುವುದರಿಂದ ಈರುಳ್ಳಿ ಸರಿಯಾಗಿ ಬೇಯಿಸುವ ಕ್ರಮದವರೆಗೆ ಅಡುಗೆ ಮಾಡುವ ಪ್ರತಿಯೊಬ್ಬರು ತಿಳಿದಿರಬೇಕಾದ ಈರುಳ್ಳಿಗೆ ಸಂಬಂಧಿಸಿದ ಕಿಚನ್ ಹ್ಯಾಕ್ಗಳಿವು.
(Shutterstock)(2 / 8)
ಈರುಳ್ಳಿ ಕತ್ತರಿಸುವ ಕೆಲಸ ನಿಜಕ್ಕೂ ಕಷ್ಟಕರ. ಯಾಕೆಂದರೆ ಈರುಳ್ಳಿ ಕಟ್ ಮಾಡುವಾಗ ಬೇಡ ಎಂದರೂ ಕಣ್ಣೀರು ಸುರಿಯುತ್ತದೆ. ಆ ಕಾರಣಕ್ಕೆ ಹಲವರು ಈರುಳ್ಳಿ ಕತ್ತರಿಸುವ ಕೆಲಸ ಎಂದರೆ ಹಿಂದೇಟು ಹಾಕುತ್ತಾರೆ. ಆದರೆ ಕಣ್ಣೀರು ಬಾರದಂತೆ ಮಾಡಲು ಒಂದು ಟ್ರಿಕ್ಸ್ ಇದೆ. ಈರುಳ್ಳಿ ಕತ್ತರಿಸುವ ಮುನ್ನ 15 ನಿಮಿಷಗಳ ಕಾಲ ಅದನ್ನು ಫ್ರಿಜ್ನಲ್ಲಿಡಿ ಅಥವಾ ನೀರಿನಲ್ಲಿ ನೆನೆಸಿಡಿ. ನಂತರ ಕಟ್ ಮಾಡಿ, ಹೀಗೆ ಮಾಡುವುದರಿಂದ ಕಣ್ಣೀರು ಬರುವುದಿಲ್ಲ.
(Shutterstock)(3 / 8)
ನಿಮಗೆ ತುಂಬಾ ಈರುಳ್ಳಿ ಕತ್ತರಿಸುವ ಸಂದರ್ಭ ಬಂದರೆ ಯಾವಾಗಲೂ ಹರಿತವಾದ ಚಾಕುವನ್ನು ಬಳಸಿ. ಮಂದ ಇರುವ ಚಾಕುವಿನಿಂದ ಈರುಳ್ಳಿ ಕತ್ತರಿಸುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಕಣ್ಣಿಗೆ ಹೆಚ್ಚು ಕಿರಿಕಿರಿ ಉಂಟಾಗುತ್ತದೆ. ಹರಿತವಾದ ಚಾಕು ಇದ್ದರೆ ನಿಮ್ಮ ಕೆಲಸವೂ ಸುಲಭವಾಗುತ್ತದೆ.
(Shutterstock)(4 / 8)
ಈರುಳ್ಳಿ ಕತ್ತರಿಸುವಾಗ ಕಣ್ಣಗಳಿಗೆ ಕಿರಿಕಿರಿ ಉಂಟಾಗುವುದನ್ನು ತಪ್ಪಿಸಲು ಅದನ್ನು ಸರಿಯಾದ ರೀತಿಯಲ್ಲಿ ಕತ್ತರಿಸುವುದು ಕೂಡ ಮುಖ್ಯವಾಗುತ್ತದೆ. ಈರುಳ್ಳಿ ತುದಿಯನ್ನು ಮೊದಲು ಕತ್ತರಿಸಬೇಡಿ. ಮೊದಲು ಈರುಳ್ಳಿಯನ್ನು 2 ಭಾಗಗಳಾಗಿ ವಿಂಗಡಿಸಿ. ನಂತರ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಕೊನೆಯಲ್ಲಿ ತುದಿ ಭಾಗವನ್ನು ಕತ್ತರಿಸಿ. ಯಾಕೆಂದರೆ ಆ ಭಾಗದಿಂದಲೇ ಸಲ್ಫರ್ ಅನಿಲ ಬಿಡುಗಡೆಯಾಗುತ್ತದೆ. ಅದನ್ನು ಮೊದಲೇ ಕತ್ತರಿಸುವುದರಿಂದ ಕಣ್ಣುಗಳಿಗೆ ಕಿರಿಕಿರಿ ಹೆಚ್ಚಾಗುತ್ತದೆ.
(Shutterstock)(5 / 8)
ನೀವು ತಯಾರಿಸುವ ಆಹಾರದಲ್ಲಿ ಈರುಳ್ಳಿಯ ಪರಿಪೂರ್ಣ ರುಚಿ ಬೇಕಾದರೆ, ಅದನ್ನು ಸರಿಯಾಗಿ ಹುರಿಯುವುದು ಮುಖ್ಯ. ಕೆಲವರು ಈರುಳ್ಳಿಯನ್ನು ಹೆಚ್ಚು ಹೊತ್ತು ಹುರಿಯುತ್ತಾರೆ, ಇದರಿಂದಾಗಿ ಅದರ ಬಣ್ಣ ಗಾಢ ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕೆಲವೊಮ್ಮೆ ಖಾದ್ಯ ಕಹಿ ರುಚಿ ಕೂಡ ಬರಬಹುದು. ಹಾಗಾಗಿ ಈರುಳ್ಳಿಯನ್ನು ಅತಿಯಾಗಿ ಹುರಿಯಬಾರದು. ಹಾಗಂತ ಹಸಿಯಾಗಿಯೂ ಬಿಡಬಾರದು
(Shutterstock)(6 / 8)
ಈರುಳ್ಳಿ ಮತ್ತು ಬೆಳ್ಳುಳ್ಳಿ ಅದ್ಭುತ ಜೋಡಿ. ನೀವು ಇವುಗಳನ್ನು ಯಾವುದೇ ಖಾದ್ಯದಲ್ಲಿ ಒಟ್ಟಿಗೆ ಬಳಸಿದರೆ ಅದರ ರುಚಿ ದ್ವಿಗುಣಗೊಳ್ಳುತ್ತದೆ. ನಿಮಗೆ ಪ್ರತಿ ಬಾರಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಮುಂಚಿತವಾಗಿ ತಯಾರಿಸಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ನಿಮ್ಮ ಅಡುಗೆಯನ್ನು ಸುಲಭಗೊಳಿಸುತ್ತದೆ. ನೀವು ಮಸಾಲೆಗಳನ್ನು ತಯಾರಿಸದೆಯೇ ರುಚಿಕರವಾದ ಆಹಾರವನ್ನು ತಕ್ಷಣವೇ ತಯಾರಿಸಲು ಸಾಧ್ಯವಾಗುತ್ತದೆ.
(Shutterstock)(7 / 8)
ಅಡುಗೆ ಮಾಡುವಾಗ ಕೆಲವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಒಟ್ಟಿಗೆ ಹಾಕಿ ಹುರಿಯುತ್ತಾರೆ. ಈರುಳ್ಳಿ ಬೇಯಲು ಸ್ವಲ್ಪ ಸಮಯ ತೆಗೆದುಕೊಂಡರೆ, ಬೆಳ್ಳುಳ್ಳಿ ಬೇಗ ಬೇಯುತ್ತದೆ. ಇದು ಆಹಾರದ ಸಂಪೂರ್ಣ ರುಚಿಯನ್ನು ಹಾಳುಮಾಡಬಹುದು. ಆದ್ದರಿಂದ ಮೊದಲು ಈರುಳ್ಳಿಯನ್ನು ಲಘುವಾಗಿ ಬೇಯಿಸಿ ನಂತರ ಬೆಳ್ಳುಳ್ಳಿ ಸೇರಿಸಿ.
(Shutterstock)ಇತರ ಗ್ಯಾಲರಿಗಳು