ಗೆಳತಿ ಶ್ರುತಿ ರಘುನಾಥನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೆಂಕಟೇಶ್ ಅಯ್ಯರ್; ಆಕೆ ಯಾರು, ಹಿನ್ನೆಲೆ ಏನು?
- Venkatesh Iyer Gets Married To Shruti Raghunathan: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್ ಅವರು ತನ್ನ ಗೆಳತಿ ಶ್ರುತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
- Venkatesh Iyer Gets Married To Shruti Raghunathan: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್ ಅವರು ತನ್ನ ಗೆಳತಿ ಶ್ರುತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
(1 / 8)
ಕೋಲ್ಕತಾ ನೈಟ್ ರೈಡರ್ಸ್ ಸ್ಟಾರ್ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಅವರು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗೆಳತಿ ಶ್ರುತಿ ರಘುನಾಥನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೆಂಕಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
(2 / 8)
ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ಗೆಳತಿ ಶ್ರುತಿ ರಘುನಾಥನ್ ಅವರನ್ನು ಭಾರತೀಯ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ವರಿಸಿದ್ದಾರೆ.
(3 / 8)
ವೆಂಕಟೇಶ್ ಅಯ್ಯರ್ ಭಾರತ ಪರ 9 ಟಿ20 ಮತ್ತು 2 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ಪ್ರತಿನಿಧಿಸುವ ಎಡಗೈ ಬ್ಯಾಟರ್, ಈವರೆಗೆ 50 ಪಂದ್ಯಗಳಲ್ಲಿ 1326 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಚಚ್ಚಿದ್ದಾರೆ.
(4 / 8)
ಆಲ್ರೌಂಡರ್ ಅಯ್ಯರ್ ಮತ್ತು ಶ್ರುತಿ ರಘುನಾಥನ್ ಅವರ ಮದುವೆಯಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತ ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದರು. ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
(5 / 8)
ವೆಂಕಟೇಶ್ ಅವರ ಪತ್ನಿ ಶ್ರುತಿ ರಘುನಾಥನ್ ಫ್ಯಾಷನ್ ಡಿಸೈನಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬೆಂಗಳೂರಿನ ಪ್ರತಿಷ್ಠ ಫ್ಯಾಷನ್ ಡಿಸೈನಿಂಗ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಗೆ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.
(7 / 8)
17ನೇ ಆವೃತ್ತಿಯ ಐಪಿಎಲ್ನಲ್ಲಿ ವೆಂಕಟೇಶ್ ಅಯ್ಯರ್ ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದರು. 14 ಪಂದ್ಯಗಳಲ್ಲಿ 370 ರನ್ ಕಲೆ ಹಾಕಿದರು. ಸ್ಟ್ರೈಕ್ ರೇಟ್ 158.80, ಬ್ಯಾಟಿಂಗ್ ಸರಾಸರಿ 46.25 ಹೊಂದಿದ್ದಾರೆ.
ಇತರ ಗ್ಯಾಲರಿಗಳು