14 ವರ್ಷಗಳ ಬಳಿಕ ದಾಖಲೆ; ಧೋನಿ ಬಳಿಕ ಪ್ರಮುಖ ಮೈಲಿಗಲ್ಲು ತಲುಪಿದ ಎರಡನೇ ಆಟಗಾರ ಕೆಎಲ್ ರಾಹುಲ್
- KL Rahul: ಕನ್ನಡಿಗ ಕೆಎಲ್ ರಾಹುಲ್ ಪ್ರಸಕ್ತ ವರ್ಷ 1000 ಏಕದಿನ ರನ್ ಗಳಿಸಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ರಾಹುಲ್. ಇದಕ್ಕೂ ಮುನ್ನ ಎಂಎಸ್ ಧೋನಿ ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ಏಕೈಕ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿದ್ದರು.

(1 / 5)
ಕಳೆದ 14 ವರ್ಷಗಳಿಂದ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 1,000 ಏಕದಿನ ರನ್ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಕೆಎಲ್ ರಾಹುಲ್ ಆಗಿದ್ದಾರೆ. ಧೋನಿ ಈ ಸಾಧನೆ ಮಾಡಿ 14 ವರ್ಷಗಳು ಕಳೆದಿವೆ.
(2 / 5)
ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದರು. ಅವರ ನಂತರ, ಕೆಎಲ್ ರಾಹುಲ್ ಈ ಸಾಧನೆ ಮಾಡಿದ ಭಾರತದ ಎರಡನೇ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿದ್ದಾರೆ.(AFP)
(3 / 5)
ಡಿಸೆಂಬರ್ 21ರ ಗುರುವಾರ ಪರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತದ ನಾಯಕ ಕೆಎಲ್ ರಾಹುಲ್ 35 ಎಸೆತಗಳಲ್ಲಿ 21 ರನ್ ಗಳಿಸಿದರು. ಸಂಜು ಸ್ಯಾಮ್ಸನ್ ಜೊತೆಗೂಡಿ 52 ರನ್‌ಗಳ ಜೊತೆಯಾಟವಾಡಿದರು.(Reuters)
(4 / 5)
ಈ ಹಿಂದೆ ಎರಡನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ 56 ರನ್ ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಹರಿಣಗಳು ಎಂಟು ವಿಕೆಟ್‌ಗಳಿಂದ ಗೆದ್ದರು.(AP)
ಇತರ ಗ್ಯಾಲರಿಗಳು