ಡೇವಿಡ್ ವಾರ್ನರ್​ ಹಿಂದಿಕ್ಕಿ ಐಪಿಎಲ್​ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್, ಏನದು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡೇವಿಡ್ ವಾರ್ನರ್​ ಹಿಂದಿಕ್ಕಿ ಐಪಿಎಲ್​ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್, ಏನದು?

ಡೇವಿಡ್ ವಾರ್ನರ್​ ಹಿಂದಿಕ್ಕಿ ಐಪಿಎಲ್​ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್, ಏನದು?

  • ಇಂಡಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿದ ಕೆಎಲ್ ರಾಹುಲ್ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ ಅರ್ಧಶತಕ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್​ ಬ್ಯಾಟರ್​ ಕೆಎಲ್ ರಾಹುಲ್ ಭರ್ಜರಿ ಮೂರು ದಾಖಲೆಗಳನ್ನು ಮುರಿದಿದ್ದಾರೆ.
icon

(1 / 8)

(PTI)

ಐಪಿಎಲ್ ಇತಿಹಾಸದಲ್ಲಿ ಉತ್ತಮ ವೈಯಕ್ತಿಕ ದಾಖಲೆ ನಿರ್ಮಿಸಿ ಕೆಎಲ್, ರೋಹಿತ್-ಕೊಹ್ಲಿ-ಧವನ್-ರೈನಾ ಅವರೊಂದಿಗೆ ಶ್ರೀಮಂತ ಲೀಗ್​​ನ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
icon

(2 / 8)

42 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 57 ರನ್ ಚಚ್ಚಿದ ರಾಹುಲ್, ತಾನು ನಿರ್ಮಿಸಿದ ವಿಶೇಷ ದಾಖಲೆಗಳಲ್ಲಿ ಎಲ್ಲರನ್ನೂ ಹಿಂದಿಕ್ಕಿ ಅತ್ಯಮೋಘ ಸಾಧನೆ ಮಾಡಿದ್ದಾರೆ.
icon

(3 / 8)

ತಮ್ಮ ಮಾಜಿ ತಂಡ ಲಕ್ನೋ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಐಪಿಎಲ್​ನಲ್ಲಿ 5000 ರನ್ ಪೂರ್ಣಗೊಳಿಸಿದ್ದಾರೆ. ಕೇವಲ 130 ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
icon

(4 / 8)

ಐಪಿಎಲ್​ನಲ್ಲಿ 4 ಶತಕ, 40 ಅರ್ಧಶತಕ ಸಿಡಿಸಿರುವ ಕನ್ನಡಿಗ, ವೇಗದ 5,000 ರನ್ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇಷ್ಟು ಕಡಿಮೆ ಇನ್ನಿಂಗ್ಸ್​​ಗಳಲ್ಲಿ ಈ ಮೈಲಿಗಲ್ಲು ತಲುಪಿದ ಮೊಟ್ಟ ಮೊದಲಿಗರು.
icon

(5 / 8)

ಇದಕ್ಕೂ ಮುನ್ನ ಈ ದಾಖಲೆ ಡೇವಿಡ್ ವಾರ್ನರ್​ ಹೆಸರಿನಲ್ಲಿತ್ತು. ಅವರು 135 ಇನ್ನಿಂಗ್ಸ್​​ಗಳಲ್ಲಿ 5000 ರನ್ ತಲುಪಿದ್ದರು. ಬ್ಯಾಟಿಂಗ್ ಕಿಂಗ್ ವಿರಾಟ್ ಮೂರನೇ ಸ್ಥಾನದಲ್ಲಿದ್ದು, 157 ಇನ್ನಿಂಗ್ಸ್​​ಗಳಲ್ಲಿ 5000 ರನ್ ಪೂರ್ಣಗೊಳಿದ್ದರು.
icon

(6 / 8)

(REUTERS)

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಡೇವಿಡ್ ವಾರ್ನರ್, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ ಮತ್ತು ಎಬಿ ಡಿವಿಲಿಯರ್ಸ್ ನಂತರ ಐಪಿಎಲ್​ನಲ್ಲಿ 5000 ರನ್ ಗಡಿ ದಾಟಿದ 8ನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ.
icon

(7 / 8)

ಶ್ರೀಮಂತ ಲೀಗ್​ 5000 ರನ್ ಪೂರೈಸಿದ ಭಾರತದ ಐದನೇ ಆಟಗಾರನೂ ಆಗಿರುವ ಕೆಎಲ್ ರಾಹುಲ್, ಅತ್ಯಧಿಕ 50 ಅಥವಾ ಅದಕ್ಕಿಂತ ಹೆಚ್ಚಿನ ರನ್​ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. 43 ಬಾರಿ ಈ ಸಾಧನೆ ಮಾಡಿದ್ದ ಡಿವಿಲಿಯರ್ಸ್ ಸಾಧನೆ ಮುರಿದಿದ್ದಾರೆ.
icon

(8 / 8)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು