ಭಾರತದಲ್ಲಿ ಎಲ್ಲೆಲ್ಲಿ ಕುಂಭಮೇಳಗಳು ನಡೆಯುತ್ತವೆ; ಕರ್ನಾಟಕದಲ್ಲಿ ಪುಣ್ಯ ಸ್ನಾನ ಮೇಳಗಳು ಆಯೋಜನೆಯಾಗೋದು ಎಲ್ಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದಲ್ಲಿ ಎಲ್ಲೆಲ್ಲಿ ಕುಂಭಮೇಳಗಳು ನಡೆಯುತ್ತವೆ; ಕರ್ನಾಟಕದಲ್ಲಿ ಪುಣ್ಯ ಸ್ನಾನ ಮೇಳಗಳು ಆಯೋಜನೆಯಾಗೋದು ಎಲ್ಲಿ

ಭಾರತದಲ್ಲಿ ಎಲ್ಲೆಲ್ಲಿ ಕುಂಭಮೇಳಗಳು ನಡೆಯುತ್ತವೆ; ಕರ್ನಾಟಕದಲ್ಲಿ ಪುಣ್ಯ ಸ್ನಾನ ಮೇಳಗಳು ಆಯೋಜನೆಯಾಗೋದು ಎಲ್ಲಿ

  • ಭಾರತದಲ್ಲಿ ಪುಣ್ಯ ಸ್ನಾನದ ಪರಿಕಲ್ಪನೆಯೊಂದಿಗೆ ನಡೆಯುವ ಕುಂಭ ಮೇಳಗಳು ಉತ್ತರ ಭಾರತದ ಜತೆಗೆ ದಕ್ಷಿಣ ಭಾರತದಲ್ಲೂ ಆಯೋಜನೆಗೊಳ್ಳುತ್ತವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ಉತ್ತರ ಭಾರತದಲ್ಲೇ ಅತಿ ದೊಡ್ಡ ಕುಂಭ ಮೇಳ ಹಾಗೂ ಮಹಾಕುಂಭ ಮೇಳ ನಡೆಯುವುದು ಉತ್ತರ ಪ್ರದೇಶದ ಅಲಹಾಬಾದ್‌. ಅದು ಈಗಿನ ಪ್ರಯಾಗ್‌ ರಾಜ್‌.
icon

(1 / 7)

ಉತ್ತರ ಭಾರತದಲ್ಲೇ ಅತಿ ದೊಡ್ಡ ಕುಂಭ ಮೇಳ ಹಾಗೂ ಮಹಾಕುಂಭ ಮೇಳ ನಡೆಯುವುದು ಉತ್ತರ ಪ್ರದೇಶದ ಅಲಹಾಬಾದ್‌. ಅದು ಈಗಿನ ಪ್ರಯಾಗ್‌ ರಾಜ್‌.

ಅದೂ ಪ್ರಯಾಗ್‌ ರಾಜ್‌ನ ಕುಂಭ ಮೇಳ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.  ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದಪ್ರಯಾಗರಾಜ್‌ನಲ್ಲಿರುವ ಕುಂಭಮೇಳವು ವಿಶೇಷವಾಗಿ ಮಹತ್ವದ್ದಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ "ಮಹಾ ಕುಂಭಮೇಳ" ಎಂದು ಕರೆಯಲಾಗುತ್ತದೆ. 
icon

(2 / 7)

ಅದೂ ಪ್ರಯಾಗ್‌ ರಾಜ್‌ನ ಕುಂಭ ಮೇಳ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.  ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ
ಪ್ರಯಾಗರಾಜ್‌ನಲ್ಲಿರುವ ಕುಂಭಮೇಳವು ವಿಶೇಷವಾಗಿ ಮಹತ್ವದ್ದಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ "ಮಹಾ ಕುಂಭಮೇಳ" ಎಂದು ಕರೆಯಲಾಗುತ್ತದೆ. 

ಉತ್ತರಾಖಂಡದ ಗಂಗಾನದಿಯ ದಡದಲ್ಲಿರುವ ಹರಿದ್ವಾರದಲ್ಲಿ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಮತ್ತು ಇದನ್ನು ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭವಾಗಿ ಆಚರಿಸುವ ವಾಡಿಕೆಯೂ ಇದೆ.
icon

(3 / 7)

ಉತ್ತರಾಖಂಡದ ಗಂಗಾನದಿಯ ದಡದಲ್ಲಿರುವ ಹರಿದ್ವಾರದಲ್ಲಿ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಮತ್ತು ಇದನ್ನು ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭವಾಗಿ ಆಚರಿಸುವ ವಾಡಿಕೆಯೂ ಇದೆ.

ಮಹಾರಾಷ್ಟ್ರದ ಗೋದಾವರಿ ನದಿಯ ದಡದಲ್ಲಿರುವ ನಾಸಿಕ್‌ನಲ್ಲಿ ಮಧ್ಯಪ್ರದೇಶದ ಶಿಪ್ರಾ ನದಿಯ ದಡದಲ್ಲಿರುವ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯುತ್ತವೆ. ಪ್ರಯಾಗ್‌ ರಾಜ್‌, ಹರಿದ್ವಾರ, ನಾಸಿಕ್‌ ಹಾಗೂ ಉಜ್ಜಯನಿಯ ಯಾವುದಾದರೂ ಒಂದು ಸ್ಥಳದಲ್ಲಿ  ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 
icon

(4 / 7)

ಮಹಾರಾಷ್ಟ್ರದ ಗೋದಾವರಿ ನದಿಯ ದಡದಲ್ಲಿರುವ ನಾಸಿಕ್‌ನಲ್ಲಿ 
ಮಧ್ಯಪ್ರದೇಶದ ಶಿಪ್ರಾ ನದಿಯ ದಡದಲ್ಲಿರುವ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯುತ್ತವೆ. ಪ್ರಯಾಗ್‌ ರಾಜ್‌, ಹರಿದ್ವಾರ, ನಾಸಿಕ್‌ ಹಾಗೂ ಉಜ್ಜಯನಿಯ ಯಾವುದಾದರೂ ಒಂದು ಸ್ಥಳದಲ್ಲಿ  ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ.
 
ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಕುಂಭಮೇಳ 1989ರಿಂದ ದಕ್ಷಿಣ ಭಾರತದಲ್ಲಿಯೂ ಆರಂಭವಾಗಿದೆ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರದ ಇಲ್ಲಿನ ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಫಟಿಕ ಸರೋವರದ ತ್ರಿವೇಣಿ ಸಂಗಮವಾದ ತಿರುವನಕೂಡಲು ನರಸೀಪುರದಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಿರಂತರವಾಗಿ ನಡೆದುಕೊಂಡು ಬಂದಿದೆ ಕುಂಭಮೇಳ. ಇಂದಿನಿಂದ (ಫೆ. 17ರಿಂದ ಫೆ.19) ಮೂರು ದಿನಗಳ ಕಾಲ 11ನೇ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. 
icon

(5 / 7)

ಕೆಆರ್‌ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಸಂಗಾಪುರ ಸಮೀಪದ ತ್ರಿವೇಣಿ ಸಂಗಮದಲ್ಲಿ ಮಲೈ ಮಹದೇಶ್ವರ ಕುಂಭಮೇಳ ನಡೆಯುತ್ತದೆ. ಹನ್ನೆರಡು ವರ್ಷಕ್ಕೆ ಒಮ್ಮೆ ನಡೆಸುವ ಘೋಷಣೆಯೂ ಆಗಿದೆ. ಇಲ್ಲಿ 2022 ರ ಅಕ್ಟೋಬರ್‌ ಅಕ್ಟೋಬರ್ 13 ರಿಂದ 16 ರವರೆಗೆ  ಕುಂಭ ಮೇಳ ನಡೆದಿತ್ತು. ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು.
icon

(6 / 7)

ಕೆಆರ್‌ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಸಂಗಾಪುರ ಸಮೀಪದ ತ್ರಿವೇಣಿ ಸಂಗಮದಲ್ಲಿ ಮಲೈ ಮಹದೇಶ್ವರ ಕುಂಭಮೇಳ ನಡೆಯುತ್ತದೆ. ಹನ್ನೆರಡು ವರ್ಷಕ್ಕೆ ಒಮ್ಮೆ ನಡೆಸುವ ಘೋಷಣೆಯೂ ಆಗಿದೆ. ಇಲ್ಲಿ 
2022 ರ ಅಕ್ಟೋಬರ್‌ ಅಕ್ಟೋಬರ್ 13 ರಿಂದ 16 ರವರೆಗೆ  ಕುಂಭ ಮೇಳ ನಡೆದಿತ್ತು. ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು.

ಕೊಪ್ಪಳದಲ್ಲಿ ನಡೆಯುವ ಗವಿಸಿದ್ದೇಶ್ವರ ಬೃಹತ್‌ ರಥೋತ್ಸವನ್ನು ದಕ್ಷಿಣ ಕುಂಭ ಮೇಳ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ.
icon

(7 / 7)

ಕೊಪ್ಪಳದಲ್ಲಿ ನಡೆಯುವ ಗವಿಸಿದ್ದೇಶ್ವರ ಬೃಹತ್‌ ರಥೋತ್ಸವನ್ನು ದಕ್ಷಿಣ ಕುಂಭ ಮೇಳ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ.

ಇತರ ಗ್ಯಾಲರಿಗಳು