Mysore infosys Campus: ಹೈಟೆಕ್ ಟೌನ್‌ಶಿಪ್ ಮೀರಿಸುವ ಮೈಸೂರಿನ ಇನ್ಫೋಸಿಸ್ ಜಾಗತಿಕ ತರಬೇತಿ ಕ್ಯಾಂಪಸ್, ಇಲ್ಲಿ ಏನುಂಟು ಏನಿಲ್ಲ
- ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಜಾಗತಿಕ ತರಬೇತಿ ಕೇಂದ್ರ ಕಳೆದ ತಿಂಗಳು ಚಿರತೆ ಕಾರಣಕ್ಕೆ, ಈ ತಿಂಗಳು ಫ್ರೆಷರ್ಸ್ ಅನ್ನು ತೆಗೆದು ಹಾಕಿದ ವಿಚಾರವಾಗಿ ಗಮನ ಸೆಳೆಯುತ್ತಿದೆ. ಈ ಕ್ಯಾಂಪಸ್ ಹೇಗಿದೆ. ಇದರ ವಿಶೇಷವೇನು ಎನ್ನುವ ಚಿತ್ರ ನೋಟ ಇಲ್ಲಿದೆ.
- ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಜಾಗತಿಕ ತರಬೇತಿ ಕೇಂದ್ರ ಕಳೆದ ತಿಂಗಳು ಚಿರತೆ ಕಾರಣಕ್ಕೆ, ಈ ತಿಂಗಳು ಫ್ರೆಷರ್ಸ್ ಅನ್ನು ತೆಗೆದು ಹಾಕಿದ ವಿಚಾರವಾಗಿ ಗಮನ ಸೆಳೆಯುತ್ತಿದೆ. ಈ ಕ್ಯಾಂಪಸ್ ಹೇಗಿದೆ. ಇದರ ವಿಶೇಷವೇನು ಎನ್ನುವ ಚಿತ್ರ ನೋಟ ಇಲ್ಲಿದೆ.
(1 / 12)
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಇದು. ತರಬೇತಿ ಕೇಂದ್ರಗಳು, ಸಭಾಂಗಣಗಳು, ವಸತಿಗೃಹ, ಆಂಪಿ ಥಿಯೇಟರ್, ಕ್ರೀಡಾಂಗಣ.. ಒಂದು ರೀತಿ ಟೌನ್‌ಶಿಪ್ ಇದು, ಅದು ಸ್ಮಾರ್ಟ್ ಟೌನ್. ಎರಡು ದಶಕದ ಹಿಂದೆ ಇದು ಉದ್ಘಾಟನೆಗೊಂಡು ನಂತರ ವಿಸ್ತರಣೆಗೊಂಡಿದೆ.
(2 / 12)
ಇನ್ಫೋಸಿಸ್ ಜಾಗತಿಕ ತರಬೇತಿ ಕೇಂದ್ರದ ಮುಖ್ಯ ಕಟ್ಟಡವಿದು. ಈ ಕಟ್ಟಡದ ನೋಟವೇ ವಿಭಿನ್ನವಾಗಿದೆ. ಮುಖ್ಯ ಕಚೇರಿ, ತರಬೇತಿಗೆ ಸಂಬಂಧಿದ ವಿಭಾಗಗಳು ಇಲ್ಲಿವೆ. ಎರಡು ಸಾವಿರ ಮಂದಿ ಸೇರಿಸಿ ಕಾರ್ಯಕ್ರಮ ಮಾಡುವ ಸಭಾಂಗಣಗಳೂ ಇವೆ.
(Bheemu chouhan)(3 / 12)
ಮೈಸೂರಿನ ಇಡೀ ಇನ್ಫೋಸಿಸ್ ಕ್ಯಾಂಪಸ್‌ಗೆ 2,055 ಕೋಟಿ ರೂ. ಹೂಡಿಕೆ ಮಾಡಿದ್ದು, ಅದರಲ್ಲಿ 350 ಕೋಟಿ ರೂ.ಗಳನ್ನು ಸಾಫ್ಟ್‌ವೇರ್ ಅಭಿವೃದ್ಧಿ ಬ್ಲಾಕ್‌ಗಳು ಮತ್ತು ಸಂಬಂಧಿತ ಸೇವೆಗಳ ನಿರ್ಮಾಣದಲ್ಲಿ ಮತ್ತು 1,705 ಕೋಟಿ ರೂ.ಗಳನ್ನು ಶಿಕ್ಷಣ ಮತ್ತು ತರಬೇತಿ ಸಂಬಂಧಿತ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲಾಗಿದೆ.
(4 / 12)
337 ಎಕರೆ ವಿಸ್ತೀರ್ಣದ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿರುವ ಕೇಂದ್ರದ ಒಟ್ಟು ತರಬೇತಿ ಸಾಮರ್ಥ್ಯವನ್ನು 14,000 (ಜಿಇಸಿ I - 4,500 ಮತ್ತು ಜಿಇಸಿ II - 9,500) ಶಿಕ್ಷಣ ನೀಡುವ ಮಟ್ಟಕ್ಕೆ ಹೆಚ್ಚಿಸಲಾಗಿದೆ.
(5 / 12)
ಇನ್ಫೋಸಿಸ್ ಕ್ಯಾಂಪಸ್ ಅನ್ನು ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಕ್ಯಾಂಪಸ್ ಒಳಗಿನ ರಸ್ತೆಗಳು ಅಂತಹ ನೋಟವನ್ನು ನೀಡುತ್ತವೆ.
(6 / 12)
ಕ್ಯಾಂಪಸ್‌ನಲ್ಲಿ ಎಲ್ಲಿ ನೋಡಿದರೂ ಸ್ವಚ್ಛತೆಗೆ ಇನ್ನಿಲ್ಲದ ಒತ್ತು ನೀಡಲಾಗಿದೆ. ಶೂನ್ಯ ಕಸ ಹಾಗೂ ನೀರು ಮರು ಬಳಕೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗಿದೆ.
(7 / 12)
ಆಸ್ಟ್ರೇಲಿಯಾ, ಭೂತಾನ್, ಚೀನಾ, ಕೊಲಂಬಿಯಾ, ಜಪಾನ್, ಮಲೇಷ್ಯಾ, ಮಾರಿಷಸ್, ಪನಾಮ, ಥೈಲ್ಯಾಂಡ್, ಯುಕೆ ಮತ್ತು ಯುಎಸ್‌ನ ವಿದ್ಯಾರ್ಥಿಗಳಿಗಾಗಿ ಜಿಇಸಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
(9 / 12)
ಕ್ಯಾಂಪಸ್‌ನಲ್ಲಿನ ವಾಸ್ತವ್ತದ ಗೃಹಗಳೂ ಕೂಡ ಅತ್ಯಾಧುನಿಕವಾಗಿವೆ. ಇದಕ್ಕಾಗಿಯೇ ಪ್ರತ್ಯೇಕ ಕಟ್ಟಡಗಳನ್ನು ಕ್ಯಾಂಪಸ್‌ನಲ್ಲಿ ರೂಪಿಸಲಾಗಿದೆ.
(10 / 12)
ಇದು ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ತರಬೇತಿಗೆ ಬರುವವರು ಉಳಿದುಕೊಳ್ಳಲು ಬರುವವರಿಗೆ ರೂಪಿಸಿರುವ ಕೊಠಡಿಗಳು.
ಇತರ ಗ್ಯಾಲರಿಗಳು