2025 ರ ಜನವರಿ ತಿಂಗಳಲ್ಲಿ ಭಕ್ತರನ್ನು ಸೆಳೆಯುವ ಕರ್ನಾಟಕದ ಪ್ರಮುಖ 10 ಜಾತ್ರೆಗಳು; ರಥೋತ್ಸವ, ಜಾನುವಾರು ಜಾತ್ರೆಯೂ ವಿಶೇಷ ಆಕರ್ಷಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2025 ರ ಜನವರಿ ತಿಂಗಳಲ್ಲಿ ಭಕ್ತರನ್ನು ಸೆಳೆಯುವ ಕರ್ನಾಟಕದ ಪ್ರಮುಖ 10 ಜಾತ್ರೆಗಳು; ರಥೋತ್ಸವ, ಜಾನುವಾರು ಜಾತ್ರೆಯೂ ವಿಶೇಷ ಆಕರ್ಷಣೆ

2025 ರ ಜನವರಿ ತಿಂಗಳಲ್ಲಿ ಭಕ್ತರನ್ನು ಸೆಳೆಯುವ ಕರ್ನಾಟಕದ ಪ್ರಮುಖ 10 ಜಾತ್ರೆಗಳು; ರಥೋತ್ಸವ, ಜಾನುವಾರು ಜಾತ್ರೆಯೂ ವಿಶೇಷ ಆಕರ್ಷಣೆ

  • ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದ ಮೊದಲು ಇಲ್ಲವೇ ನಂತರ ಹಲವು ಜಾತ್ರೆಗಳು ನಡೆಯುತ್ತವೆ. ಲಕ್ಷಾಂತರ ಭಕ್ತರನ್ನು ಸೆಳೆಯುವ ಜಾತ್ರೆಗಳು ಈಗಲೂ ಸಂಸ್ಕೃತಿಯ ಕೊಂಡಿಯಂತೆಯೇ ಇವೆ. 2025ರಲ್ಲಿ ನೀವು ಭೇಟಿ ನೀಡಬಹುದಾದ ಜಾತ್ರೆ/ ಉತ್ಸವದ ಚಿತ್ರ ಮಾಹಿತಿ ಇಲ್ಲಿದೆ. 

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ:ದಕ್ಷಿಣ ಭಾರತದ ಕುಂಭಮೇಳ, ರೊಟ್ಟಿ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಮುಹೂರ್ತ ನಿಗದಿಯಾಗಿದೆ. 2025ರ ಜನವರಿ 15 ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾಮಹಿಮೆ ಗವಿಸಿದ್ದೇಶ್ವರ ಮಹಾ ರಥೋತ್ಸವ ನಡೆಯಲಿದೆ. 7 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಜನವರಿ 11ರ ಶನಿವಾರ ಆರಂಭವಾಗಿ ಜನವರಿ 17ರ ಶುಕ್ರವಾರ ಸಮಾರೋಪಗೊಳ್ಳಲಿದೆ.  
icon

(1 / 10)

ಚುಂಚನಕಟ್ಟೆ ಶ್ರೀರಾಮ ರಥೋತ್ಸವ ಜನವರಿ 15//ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಕಾವೇರಿ ತೀರದ ಚುಂಚನಕಟ್ಟೆ ಕೋದಂಡರಾಮ ದೇವಾಲಯ ಇತಿಹಾಸ  ಪ್ರಸಿದ್ದವಾದದ್ದು. ಐತಿಹ್ಯ ಇರುವ ಈ ದೇಗುಲದ ಜಾತ್ರಾ ಮಹೋತ್ಸವವೂ ಸಂಕ್ರಾಂತಿ ವೇಳೆಯೇ ಇರಲಿದೆ.ಒಂದು ವಾರ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು. ಜನವರಿ 15 ರಂದು ಮುಖ್ಯ ರಥೋತ್ಸವ ಇರಲಿದೆ. ಜಾತ್ರೆ ಅಂಗವಾಗಿ ನಾನಾ ಭಾಗಗಳಿಂದ ಆಗಮಿಸುವ ರಾಸುಗಳ ಪ್ರದರ್ಶನವೂ ಚುಂಚನಕಟ್ಟೆಯ ಆಕರ್ಷಣೆ.
icon

(2 / 10)

ವಿಟ್ಲ ಪಂಚಲಿಂಗೇಶ್ವರ ರಥ: ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮೆಯಲ್ಲೇ  ಪ್ರಮುಖವಾದುದು.  ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ. ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಬರುವುದುಂಟು. ವರ್ಷಾವಧಿ ಉತ್ಸವ ವಿಟ್ಲಾಯನವು ಮಕರಸಂಕ್ರಮಣದಂದು ಆರಂಭವಾಗಿ, ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಎಂಟನೆಯದಿನ ಮಹಾರಥೋತ್ಸವ ಇರಲಿದೆ. ಅಲ್ಲದೇ ಲಕ್ಷದೀಪೋತ್ಸವ ಸಹಿತ ಹಲವು ಚಟುವಟಿಕೆಗಳು ಇರಲಿವೆ.  
icon

(3 / 10)

ವಿಜಯಪುರ ಸಿದ್ದೇಶ್ವರ ಜಾತ್ರೆ  ಜನವರಿ  18 :ವಿಜಯಪುರದ ಇತಿಹಾಸ ಪ್ರಸಿದ್ದ ಜಾತ್ರೆಯಿದು. ಸಂಕ್ರಾಂತಿ ವೇಳೆ ಶುರುವಾಗಿ ಒಂದು ವಾರ ಸಿದ್ದೇಶ್ವರ ಜಾತ್ರೆ ಇರಲಿದೆ. ವಿಜಯಪುರ ನಗರದ ಹೃದಯಭಾಗದಲ್ಲಿರುವ ಸಿದ್ದೇಶ್ವರ ದೇವಸ್ಥಾನದಲ್ಲಿ ಒಂದು ವಾರ ಕಾಲ ಜಾತ್ರಾ ಮಹೋತ್ಸವ ಗಮನ ಸೆಳೆಯಲಿದೆ. ಉತ್ತರ ಕರ್ನಾಟಕದ ನಾನಾ ಭಾಗಗಳಿಂದ ಭಕ್ತರು ಸಿದ್ದೇಶ್ವರ ಜಾತ್ರೆಗೆ ಆಗಮಿಸಿ ಖರೀದಿಸುತ್ತಾರೆ. ಜನವರಿ 18 ರಂದು ಸಿದ್ದೇಶ್ವರ ರಥೋತ್ಸವ ಜರುಗಲಿದೆ. ಇದೇ ದಿನ ಸೊಲ್ಲಾಪುರದಲ್ಲೂ ಸಿದ್ದೇಶ್ವರ ರಥೋತ್ಸವ ಜರುಗಲಿದೆ.
icon

(4 / 10)

ಮೈಸೂರು ಸುತ್ತೂರು ಜಾತ್ರೆ ಜನವರಿ 28:ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಪ್ರಮುಖ ಜಾತ್ರೆಗಳಲ್ಲೊಂದು. ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ವಿವಿಧ ಸಂಸ್ಕೃತಿಗಳ ಅನಾವರಣವಾಗಲಿದೆ. 2025ರ ಜ. 26ರಿಂದ 31ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಗ್ರಾಮೀಣ ಕ್ರೀಡೆಗಳೊಂದಿಗೆ ಗಮನ ಸೆಳೆಯಲಿದೆ.ಜನವರಿ 28 ರಂದು ರಥೋತ್ಸವ ಇರಲಿದೆ.
icon

(5 / 10)

ಬಾದಾಮಿ ಬನಶಂಕರಿ ಜಾತ್ರೆ ಜನವರಿ 13:ಶಕ್ತಿ ಪೀಠವೆಂದೇ ಹೆಸರು ಪಡೆದಿರುವ ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ಜಾತ್ರೆಯು ಜನಪ್ರಿಯ. ಇದನ್ನು ಬನದ ಜಾತ್ರೆ ಎಂದೂ ಕರೆಯಲಾಗುತ್ತದೆ. ರಥೋತ್ಸವ ಜನವರಿ 13ರಂದು ನಡೆದರೆ, ಒಂದು ತಿಂಗಳ ಕಾಲ ನಿರಂತರ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ. ಜಾತ್ರೆ ಸಂದರ್ಭದಲ್ಲಿ  ದೇವಿ ಅಲಂಕಾರ ಮಾಡಲಾಗುತ್ತದೆ. ವಿವಿಧ ಉತ್ಸವಗಳೂ ಜಾತ್ರೆಯ ವೇಳೆ ಇರಲಿವೆ. ರಾತ್ರಿ ಇಡೀ ಕಂಪೆನಿ ನಾಟಕಗಳ ಪ್ರದರ್ಶನ, ಭರ್ಜರಿ ಮಾರಾಟ ಈ ಜಾತ್ರೆಯ ವಿಶೇಷತೆ. 
icon

(6 / 10)

ಚಾಮರಾಜನಗರ ಬಿಳಿಗಿರಿರಂಗನಾಥ ಜಾತ್ರೆ ಜನವರಿ 15: ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬೆಟ್ಟ ಮೇಲೆ ನಿಂತಿರುವ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥ ಸ್ವಾಮಿ ರಥೋತ್ಸವವೂ ಜನವರಿ 15ರಂದೇ ನಿಗದಿಯಾಗಿದೆ. ರಂಗನಾಥಸ್ವಾಮಿಗೆ ಸೋಲಿಗರೇ ಹೆಚ್ಚಿನ ಭಕ್ತರು. ಅಲ್ಲದೇ ನಾಡಿನ ನಾನಾ ಭಾಗಗಳಲ್ಲಿ ನೆಲೆಸಿರುವ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಾರೆ. ಜಾತ್ರೆ ಅಂಗವಾಗಿ ನಾನಾ ಕಾರ್ಯಕ್ರಮಗಳು ನಡೆಯುವುದು ಇಲ್ಲಿನ ವಿಶೇಷ.
icon

(7 / 10)

ದೊಡ್ಡಬಳ್ಳಾಪುರ ವೆಂಕಟರಮಣ ರಥೋತ್ಸವ ಜನವರಿ 30:ಬೆಂಗಳೂರು ಗ್ರಾಮಾಂತ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿನ ತೇರಿನ ಬೀದಿಯ  ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವವೂ ಜನವರಿ 30ರಂದು ನಿಗದಿಯಾಗಿದೆ. 450 ವರ್ಷಗಳ  ಸುದೀರ್ಘ ಇತಿಹಾಸ ಇರುವ ಈ ದೇಗುಲಕ್ಕೆ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ವರ್ಷದಲ್ಲಿ ನಿರಂತರವಾಗಿ ಪೂಜಾ ಚಟುವಟಿಕೆಗಳು ಪ್ರಸನ್ನ ವೆಂಕಟರಮಣ ಸ್ವಾಮಿಗೆ ಜರುಗಿದರೂ ರಥೋತ್ಸವ ಇಲ್ಲಿನ ಆಕರ್ಷಣೆ. 
icon

(8 / 10)

ಕೂಡಲ ಸಂಗಮ ಸಂಸ್ಕೃತಿ ಉತ್ಸವ:ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಸಂಕ್ರಾಂತಿ ವೇಳೆ ಸಂಸ್ಕೃತಿ ಉತ್ಸವ, ಮಕರ ಸಂಕ್ರಮಣ ಪುಣ್ಯ ಸ್ನಾನ ನಡೆಯಲಿದೆ. ಇದಕ್ಕಾಗಿ ನಾಡಿನ ನಾನಾ ಭಾಗಗಳಿಂದ ಕೂಡಲಸಂಗಮಕ್ಕೆ ಆಗಮಿಸಿ ಸಂಗಮನಾಥನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಆನಂತರ ದೇವರ ದರ್ಶನ ಪಡೆಯುತ್ತಾರೆ. ಈ ವೇಳೆ ಕೂಡಲಸಂಗಮದಲ್ಲಿ ನಡೆಯುವ ಸಂಸ್ಕೃತಿ ಉತ್ಸವವು ಕೂಡ ಧಾರ್ಮಿಕ, ಸಾಮಾಜಿಕ ಚಿಂತನೆಗಳಿಗೆ ವೇದಿಕೆ ಒದಗಿಸುತ್ತದೆ. 
icon

(9 / 10)

ಕೆಂಗಲ್‌ ಆಂಜನೇಯ ರಥೋತ್ಸವ   ಜನವರಿ 21:ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ ಆಂಜನೇಯ ರಥೋತ್ಸವವು ಜನವರಿಯಲ್ಲೇ ಬರಲಿದೆ.  ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ದೇಗುಲಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಈ ದೇಗುಲ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ.   2025 ನೇ ಸಾಲಿನ ಅಯ್ಯನಗುಡಿ ದನಗಳ ಜಾತ್ರೆ ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ... ಜನವರಿ 18 ಕೆಂಗಲ್‌ ಆಂಜನೇಯ ರಥೋತ್ಸವ  ಜನವರಿ 21ರಂದು ನಡೆಯಲಿದೆ.
icon

(10 / 10)

ಇತರ ಗ್ಯಾಲರಿಗಳು