ಕರ್ನಾಟಕದ ಏಕೈಕ ಗೋಲ್ಡನ್ ಟೆಂಪಲ್ ಎಲ್ಲಿದೆ ಗೊತ್ತೆ, ಚಿನ್ನದ ಬೌದ್ದ ವಿಹಾರ ಕೇಂದ್ರ ನಿಜಕ್ಕೂ ಆಕರ್ಷಕ ತಾಣ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ ನಿಜಕ್ಕೂ ಆಕರ್ಷಣೀಯ. ಬೌದ್ದ ಕೇಂದ್ರವಾಗಿರುವ ಇಲ್ಲಿಗೆ ನಿತ್ಯ ಕೊಡಗು ಕಡೆ ಬರುವ ಪ್ರವಾಸಿಗರು ಬರುತ್ತಾರೆ.
(1 / 8)
ಮೈಸೂರಿಂದ ಸುಮಾರು 85 ಕಿ.ಮಿ ದೂರದಲ್ಲಿರುವ ಟಿಬೆಟಿಯನ್ನರ ನಿರಾಶ್ರಿತ ತಾಣ ಬೈಲಕುಪ್ಪೆಯಲ್ಲಿ ಗೋಲ್ಡನ್ ಟೆಂಪಲ್ ವಿಶೇಷ ರೀತಿಯಲ್ಲಿಯೇ ಇದೆ. ವಿಶ್ವದ ಅತಿ ದೊಡ್ಡ ನಿರಾಶ್ರಿತರ ನೆಲೆಗಳಲ್ಲೊಂದು. ಇಲ್ಲಿ ಸುಮಾರು ಇಪ್ಪತ್ತು ಸಾವಿರ ಟಿಬೆಟಿಯನ್ನರು ಐದು ದಶಕದಿಂದ ಇಲ್ಲಿದ್ದಾರೆ.
(ಚಿತ್ರ: ರಂಗನಾಥ ಕಂಟನಕುಂಟೆ)(2 / 8)
ಟಿಬೆಟ್ ನಿರಾಶ್ರಿತರ ಶಿಬಿರವು ಸ್ವರ್ಣ ದೇಗುಲ ಸೇರಿದಂತೆ ಸುಮಾರು ಹದಿನೇಳಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ ಇಲ್ಲಿ ಒಂದಕ್ಕಿಂತ ಆಕರ್ಷಕವಾಗಿವೆ. ನಾಲ್ಕೂವರೆ ದಶಕದ ಹಿಂದೆಯೇ ಇದು ನಿರ್ಮಾಣಗೊಂಡಿದೆ.
(3 / 8)
ಸ್ವರ್ಣ ದೇವಾಲಯವು ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ. ಬುದ್ದನ ಕರುಣೆಯ ನೋಟವು ಚಿನ್ನದ ಲೇಪನದೊಂದಿಗೆ ಹೊಳೆಯುತ್ತಿದೆ,
(4 / 8)
ವಿಶಾಲ ಹಜಾರ ಹೊಂದಿರುವ ದೇವಾಲಯದ ಪೀಠದಿಂದಲೇ 60 ಅಡಿ ಎತ್ತರದ ಬುದ್ದನ ಮೂರ್ತಿ, 58 ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್ ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಾಣ ಮಾಡಲಾಗಿದೆ.
(5 / 8)
ಈ ಮೂರ್ತಿಗಳ ಒಳಗೆ ಧರ್ಮಗ್ರಂಥಗಳು, ಮಹಾತ್ಮರ ಭಗ್ನಾವಶೇಷಗಳು, ಜೇಡಿಮಣ್ಣಿನ ಸ್ಥೂಪಗಳು, ಎರಕದ ಅಚ್ಚುಗಳು ಮತ್ತು ಸಣ್ಣ ಮೂರ್ತಿಗಳಿವೆ.
(6 / 8)
ಇಲ್ಲಿಗೆ ಆಗಮಿಸುವ ಸಂದರ್ಶಕರು ದೇಗುಲದಲ್ಲಿ ಕುಳಿತು ಪ್ರಾರ್ಥನೆ ಮಾಡಬಹುದು, ಧ್ಯಾನಿಸಬಹುದು, ದಾನ ನೀಡಬಹುದು ಮತ್ತು ಮಣಿ ಪ್ರಾರ್ಥನೆ ಡ್ರಮ್‌ಗಳನ್ನು ತಿರುಗಿಸಬಹುದು.
(7 / 8)
ಈ ಪ್ರಾರ್ಥನಾ ಡ್ರಮ್‌ಗಳನ್ನು ತಿರುಗಿಸುವುದರಿಂದ ಬೌದ್ಧ ಪ್ರಾರ್ಥನೆಯಾದ “ಓಂ ಮಣಿ ಪದ್ಮೆ ಹಮ್” ಎಂದು ಜಪಿಸುವುದರಿಂದ ಸಿಗುವ ಪ್ರಯೋಜನ ಸಿಗುತ್ತದೆ ಎನ್ನುವ ನಂಬಿಕೆಯಿದೆ.
ಇತರ ಗ್ಯಾಲರಿಗಳು