Passport Ranking: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಯಾವ ದೇಶದ್ದು? ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
- ವಿಶ್ವದ ಅತ್ಯುತ್ತಮ ಪಾಸ್‌ಪೋರ್ಟ್ ಶ್ರೇಯಾಂಕ: ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು, ವೀಸಾ ಇಲ್ಲದೆ ಒಟ್ಟು 59 ದೇಶಗಳಿಗೆ ಪ್ರಯಾಣಿಸಬಹುದು. (2022ರಲ್ಲಿ ಈ ಸಂಖ್ಯೆ 60 ಆಗಿತ್ತು). ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನಿ ಪಾಸ್‌ಪೋರ್ಟ್‌ಗಳು ಕೂಡ ಭಾರತದಷ್ಟೇ ಬಲಿಷ್ಠವಾಗಿವೆ. ಹಾಗಿದ್ದರೆ ವಿಶ್ವದ ಅತ್ಯಂತ ಬಲಿಷ್ಠ ಪಾಸ್‌ಪೋರ್ಟ್ ಹೊಂದಿರುವ ದೇಶ ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

(1 / 5)
ಜಪಾನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿದೆ. ಏಕೆಂದರೆ ಜಪಾನ್‌ನ ಪಾಸ್‌ಪೋರ್ಟ್ 193 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2023ರಲ್ಲಿ, ಜಪಾನ್ ವಿಶ್ವದ ಅತ್ಯುತ್ತಮ ಹಾಗೂ ಬಲಿಷ್ಠ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)(Pixabay)
(2 / 5)
ಜಪಾನ್ ನಂತರದ ಸ್ಥಾನದಲ್ಲಿ ಎರಡು ಏಷ್ಯಾದ ದೇಶಗಳಾದ ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಇವೆ. ಈ ಎರಡೂ ದೇಶಗಳ ಪಾಸ್‌ಪೋರ್ಟ್ 192 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ.(Mint)
(3 / 5)
3ನೇ ಸ್ಥಾನದಲ್ಲಿ ಜರ್ಮನಿ ಮತ್ತು ಸ್ಪೇನ್ ರಾಷ್ಟ್ರಗಳಿವೆ. ಈ ಎರಡು ಯುರೋಪಿಯನ್ ರಾಷ್ಟ್ರಗಳ ಪಾಸ್‌ಪೋರ್ಟ್‌ಗಳು, 190 ದೇಶಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುತ್ತವೆ.(Mint)
(4 / 5)
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಒಟ್ಟು 59 ದೇಶಗಳಿಗೆ ಪ್ರಯಾಣಿಸಬಹುದು. (2022ರಲ್ಲಿ ಈ ಸಂಖ್ಯೆ 60 ಆಗಿತ್ತು). ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನಿ ಪಾಸ್‌ಪೋರ್ಟ್‌ಗಳು ಕೂಡ ಭಾರತದ ಪಾಸ್‌ಪೋರ್ಟ್‌ನಷ್ಟೇ ಪ್ರಬಲವಾಗಿವೆ.(HT_PRINT)
ಇತರ ಗ್ಯಾಲರಿಗಳು